ಬೆಳಗಾವಿ : ಮಾಧ್ಯಮದವರು ಮಧ್ಯಸ್ಥಿಕೆ ವಹಿಸಿದರೆ ಸತೀಶಗೆ ಸಚಿವ ಸ್ಥಾನ ಬಿಟ್ಟು ಕೊಡಲು ಸಿದ್ಧ : ಸಚಿವ ರಮೇಶ
ಮಾಧ್ಯಮದವರು ಮಧ್ಯಸ್ಥಿಕೆ ವಹಿಸಿದರೆ ಸತೀಶಗೆ ಸಚಿವ ಸ್ಥಾನ ಬಿಟ್ಟು ಕೊಡಲು ಸಿದ್ಧ : ಸಚಿವ ರಮೇಶ
ಬೆಳಗಾವಿ ಜೂ 7 : ಮಾಧ್ಯಮದವರು ಮಧ್ಯಸ್ಥಿಕೆ ವಹಿಸಿದರೆ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನಕ್ಕೆ ಬಿಟ್ಟು ಕೊಡಲು ಸಿದ್ದನಿದ್ದೆನೆಂದು ಸಮ್ಮಿಶ್ರ ಸರಕಾರದ ನೂತನ ಸಚಿವ ರಮೇಶ ಜಾರಕಿಹೊಳಿ ಹೇಳಿದರು
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಂಧರ್ಭದಲ್ಲಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪರ್ತಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಸತೀಶ ಜಾರಕಿಹೊಳಿ ಅತೃಪ್ತಗೊಂಡಿದ್ದಾರೆ ಎಂಬುವುದು ಮಾಧ್ಯಮ ಸೃಷ್ಟಿ ಕಳೆದ ಸರಕಾರದಲ್ಲಿ ನನ್ನ ಹಿರಿತನವನ್ನು ಗಮನಿಸದೆ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು ಆದರೂ ನಾನು ಪಕ್ಷದ ಹಿತದೃಷ್ಟಿಯಿಂದ ಸುಮ್ಮನಿದ್ದು ಸಹಕರಿಸಿದ್ದೆ ಇಂದು ಪಕ್ಷ ನನ್ನ ಹಿರಿತನ ಮತ್ತು ಅನುಭವವನ್ನು ಪರಿಗಣಿಸಿ ನನಗೆ ಸಚಿವ ಸ್ಥಾನ ನೀಡಿದೆ ನಮ್ಮಲ್ಲಿ ಯಾವುದೆ ಬಿನ್ನಾಬಿಪ್ರಾಯವಿಲ್ಲ ಇದ್ದೆಲಾ ಮಾಧ್ಯಮದ ಸೃಷ್ಟಿ , ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರು ಅಧಿಕಾರ ಬಯಸುವುದು ಸಹಜ ಆ ರೀತಿ ಸತೀಶ ಅವರು ಸಹ ಮಂತ್ರಿಯಾಗಲು ಬಯಸಿದ್ದರು ಅದ್ದೆನು ತಪ್ಪಲ್ಲ . ಸತೀಶ ಜಾರಕಿಹೊಳಿಯಾಗಲ್ಲಿ , ರಮೇಶ ಜಾರಕಿಹೊಳಿಯಾಗಲ್ಲಿ ದೊಡ್ಡವರಲ್ಲ ಅವರಿಗಿಂತ ಪಕ್ಷ ದೊಡ್ಡದು ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ಸಚಿವರು ಹೇಳಿದರು
ಬೆಳಗಾವಿ ನಗರದ ಅಭಿವೃದ್ಧಿಗೆ ಆದ್ಯತೆ : ಬೆಳಗಾವಿ ನಗರಕ್ಕೆ ಸಂಬಂಧಿಸಿದಂತೆ ಕೆಲವು ಕೆಲಸಗಳು ಬಾಕಿ ಉಳಿದಿವೆ ಅವುಗಳನ್ನು ಆದಷ್ಟು ಬೇಗ ಮಾಡಿ ಬೆಳಗಾವಿ ನಗರವನ್ನು ಅಭಿವೃದ್ಧಿ ಪಡಿಸಲಾಗುವುದೆಂದು ಸಚಿವರು ಹೇಳಿದರು
10 ರಿಂದ 14 ಸ್ಥಾನ ಗೆಲ್ಲುವುದಾಗಿ ಹೇಳಿದ್ದು ನಿಜ : ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಾನು ಹೇಳಿದ್ದವರಿಗೆ ಟಿಕೆಟ್ ನೀಡಿದ್ದೆ ಆದರೆ 10 ರಿಂದ 14 ಸ್ಥಾನಗಳನ್ನು ಗೆಲ್ಲಿಸಿ ವಿಧಾನಸಭೆ ಕಟ್ಟೆ ಏರುತ್ತೇನೆಂದು ಹೇಳಿದ್ದು ನಿಜ ಈಗಲೂ ನಾ ಆ ನನ್ನ ಹೇಳಿಕೆಗೆ ಬದ್ದವಾಗಿದ್ದೆನೆ ಆದರೆ ಕೊನೆಗೆ ಪಕ್ಷ ತೆಗೆದುಕೊಂಡ ತೀರ್ಮಾನಕ್ಕೆ ಬದ್ದವಾಗಿ ಕೆಲಸ ಮಾಡಲಾಗಿದೆ ಸ್ವಲ್ಪ ಹಿನ್ನಡೆಯಾಗಿದೆ ಮುಂದೆ ಅದನ್ನು ಸರಿಪಡಿಸುತ್ತನೆಂದು ಹೇಳಿದ ಸಚಿವ ರಮೇಶ ಜಾರಕಿಹೊಳಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲಾಗಿದೆಯಾ ಎಂಬ ಪ್ರಶ್ನೆಗೆ ಇದ್ದೆಲಾ ಮಾಧ್ಯಮಗಳು ಸೃಷ್ಟಿ ನಾನು ಮಂತ್ರಿಯಾಗಿದ್ದು ಸಿದ್ದರಾಮಯ್ಯ ಅವರಿಂದಲೇ ಎಂದು ಹೇಳಿ ಮಾತು ಮೂಗಿಸಿದರು
ಈ ಸಂದರ್ಭದಲ್ಲಿ ನೂತನ ಸಚಿವರನ್ನು ಸ್ವಾಗತಿಸಲು ಜಿಲ್ಲೆಯ ವಿವಿಧ ಭಾಗಗಳಿಂದ ಸಾಗರೋಪವಾಗಿ ಜನರು ತಮ್ಮ ನೆಚ್ಚಿನ ನಾಯಕನಿಗೆ ಅಭಿನಂದಿಸಿದರು