RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ : ಸಚಿವ ರಮೇಶ ಜಾರಕಿಹೊಳಿಗೆ ಅದ್ದೂರಿ ಸ್ವಾಗತ

ಗೋಕಾಕ : ಸಚಿವ ರಮೇಶ ಜಾರಕಿಹೊಳಿಗೆ ಅದ್ದೂರಿ ಸ್ವಾಗತ 

ಸಚಿವರ ಗೃಹದಲ್ಲಿ ಅವರ ಪತ್ನಿ ಆರತಿ ಮಾಡುವದರೊಂದಿಗೆ ಸ್ವಾಗತಿಸುತ್ತಿರುವದು.

ಸಚಿವ ರಮೇಶ ಜಾರಕಿಹೊಳಿಗೆ ಅದ್ದೂರಿ ಸ್ವಾಗತ

ಗೋಕಾಕ ಜೂ 7 : ಜೆಡಿಎಸ್ ಮತ್ತು ಕಾಂಗ್ರೇಸ್ ಸಮ್ಮಿಶ್ರ ಸರಕಾರದಲ್ಲಿ ಮತ್ತೊಮ್ಮೆ ಸಚಿವರಾಗಿ ರಮೇಶ ಜಾರಕಿಹೊಳಿ ಅವರು ಪ್ರಥಮ ಬಾರಿಗೆ ಗೋಕಾಕ ನಗರಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.
ಗುರುವಾರದಂದು ಮಧ್ಯಾಹ್ನ ನಗರಕ್ಕೆ ಆಗಮಿಸುತ್ತಿದ್ದ ಸಚಿವರಿಗೆ ಪಟಾಕಿ ಸಿಡಿಸಿ, ಗುಲಾಲು ಎರಚಿ, ಸಿಹಿ ಹಂಚಿ ಗಲ್ಲಿ ಗಲ್ಲಿಗಳಲ್ಲಿ ಸಂಭ್ರಮಿಸಿದ ಕಾರ್ಯಕರ್ತರು ಸಚಿವ ರಮೇಶ ಜಾರಕಿಹೊಳಿ ಅವರಿಗೆ ಶುಭ ಕೋರಿದರು.
ಸಚಿವರು ನಗರಕ್ಕೆ ಆಗಮಿಸಿ ಗ್ರಾಮದೇವತೆ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶ್ರೀ ದೇವಿಯ ದರ್ಶನ ಪಡೆದು ನಂತರ ಅವರ ತಂದೆ-ತಾಯಿಯ ಸಮಾಧಿಗೆ ತೆರಳಿ ತಂದೆ-ತಾಯಿಯನ್ನು ನೆನೆದು ಭಾವುಕರಾಗಿ ಸಮಾಧಿಗೆ ನಮನ ಸಲ್ಲಿಸಿದರು. ಬಸವೇಶ್ವರ ವೃತ್ತಕ್ಕೆ ಆಗಮಿಸಿ ಸಾವಿರಾರು ಅಭಿಮಾನಿಗಳೊಂದಿಗೆ ಶ್ರೀ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆಮಾಡಿದರು.
ತಂದೆ-ತಾಯಿ ವಾಸಿಸುತ್ತಿದ್ದ ಹೋಸಪೇಠ ಗಲ್ಲಿಯ ನಿವಾಸಕ್ಕೆ ತೆರಳಿ ಸ್ವಲ್ಪ ಹೊತ್ತು ತಂಗಿದರು. ತಮ್ಮ ನಿವಾಸಕ್ಕೆ ತೆರಳಿದ ಸಚಿವರಿಗೆ ಸಚಿವರ ಪತ್ನಿ ಜಯಶ್ರೀ ಅವರು ಆರತಿ ಮಾಡುವ ಮೂಲಕ ಖುಷಿಯಿಂದ ಸ್ವಾಗತಿಸಿದರು.
ಗೋಕಾಕ ವಿಧಾನಸಭೆ ಕ್ಷೇತ್ರದ ಜನತೆ, ಕಾಂಗ್ರೇಸ್ ಕಾರ್ಯಕರ್ತರು, ಅಭಿಮಾನಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮಾಲಾರ್ಪಣೆ, ಹೂಗುಚ್ಛ ನೀಡಿ ಅಭಿನಂದಿಸಿದರು. ಸಚಿವರು ತಮ್ಮ ಕಛೇರಿಯ ಎದುರು ನೆರೆದಿದ್ದ ಸಾವಿರಾರು ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಲಖನ್ ಜಾರಕಿಹೊಳಿ, ಸಚಿವರ ಪುತ್ರ ಅಮರನಾಥ ಜಾರಕಿಹೊಳಿ, ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ಸ್ಥಾಯಿ ಸಮೀತಿ ಚೇರಮನ್ ಭಗವಂತ ಹುಳ್ಳಿ, ಸದಸ್ಯರಾದ ಭೀಮಶಿ ಭರಮನ್ನವರ, ಗಿರೀಶ ಖೋತ, ಜಯಾನಂದ ಹುಣಶ್ಯಾಳಿ, ಬಾಬು ಶೇಖಬಡೆ, ಅಬ್ದುವಹಾಬ್ ಜಮಾದಾರ, ಶಿವಾನಂದ ಹತ್ತಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಎಸ್ ಎ ಕೋತವಾಲ, ಪರಶುರಾಮ ಭಗತ್, ಅಬ್ಬಾಸ ದೇಸಾಯಿ, ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷ ನಜೀರ ಶೇಖ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಡೋಣಿ, ರಾಜು ತಳವಾರ, ಭೀಮಗೌಡ ಪೋಲಿಸಗೌಡರ, ಅಶೋಕ ಸಾಯನ್ನವರ, ಸದಾನಂದ ಕಲಾಲ, ಆಸೀಪ ಮುಲ್ಲಾ, ಎಪಿಎಮ್‍ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು.

Related posts: