ಗೋಕಾಕ:ಮಿಲಿಯನ್ ಡಾಲರ್ ರೌಂಡ್ ಟೇಬಲ್ ಪ್ರಶಸ್ತಿಗೆ ಆಯ್ಕೆ
ಮಿಲಿಯನ್ ಡಾಲರ್ ರೌಂಡ್ ಟೇಬಲ್ ಪ್ರಶಸ್ತಿಗೆ ಆಯ್ಕೆ
ಗೋಕಾಕ ಜೂ 8 : ಇಲ್ಲಿಯ ಪ್ರತಿಷ್ಠಿತ ಭಾರತೀಯ ಜೀವ ವೀಮಾ ನಿಗಮ ಗೋಕಾಕ ಶಾಖೆಯಿಂದ ಮಲ್ಲಪ್ಪ ಭೀಮಪ್ಪ ಮದಿಹಳ್ಳಿ ಇವರು ಸತತ ಆರನೇ ಭಾರಿಗೆ ವೀಮಾ ರಂಗದ ಪ್ರತಿಷ್ಠಿತ ಎಮ್.ಡಿ.ಆರ್.ಟಿ( ಮಿಲಿಯನ್ ಡಾಲರ್ ರೌಂಡ್ ಟೇಬಲ್) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇದೇ ತಿಂಗಳ ಜೂನ್ 24 ರಿಂದ 27 ರ ವರೆಗೆ ಅಮೇರಿಕಾದ ಲಾಸ್ ಏಂಜಲೀಸ್ ನಲ್ಲಿ ಜರುಗುವ ಜಾಗತಿಕ ವಿಶ್ವ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಇವರ ಈ ಸಾಧನೆಗೆ ಸ್ಥಳೀಯ ಶಾಖೆಯ ಮುಖ್ಯ ವ್ಯವಸ್ಥಾಪಕ ಶಂಕರ ಹೆಗಡೆ ಹಾಗೂ ಉಪಶಾಖಾಧಿಕಾರಿ ಮಲ್ಲಿಕಾರ್ಜುನ ನೀಲಗುಂದ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.