ಘಟಪ್ರಭಾ:ಅವೈಜ್ಞಾನಿಕ ರಸ್ತೆಹುಬ್ಬುಗಳನ್ನು ಕಡಿಮೆ ಮಾಡುವಂತೆ ಸುರೇಶ ಪಾಟೀಲ ಆಗ್ರಹ
ಅವೈಜ್ಞಾನಿಕ ರಸ್ತೆಹುಬ್ಬುಗಳನ್ನು ಕಡಿಮೆ ಮಾಡುವಂತೆ ಸುರೇಶ ಪಾಟೀಲ ಆಗ್ರಹ
ಘಟಪ್ರಭಾ ಜೂ 10 : ಸಂಕೇಶ್ವರ-ಯರಗಟ್ಟಿ ರಾಜ್ಯ ಹೆದ್ದಾರಿಯಲ್ಲಿ ವೇಗ ನಿಯಂತ್ರಣಕ್ಕಾಗಿ ಅಲ್ಲಲ್ಲಿ ಹಾಕಲಾಗಿರುವ ಅವೈಜ್ಞಾನಿಕ ರಸ್ತೆಹುಬ್ಬುಗಳನ್ನು ಕಡಿಮೆ ಮಾಡುವಂತೆ ಬಿಜೆಪಿ ಹಿರಿಯ ಧುರೀಣ ಸುರೇಶ ಪಾಟೀಲ ಆಗ್ರಹಿಸಿದ್ದಾರೆ.
ರಸ್ತೆ ಹುಬ್ಬು ನಿರ್ಮಿಸುವುದು ಅಪಘಾತಗಳು ತಡೆಯಲು. ಆದರೆ ಈ ರಸ್ತೆ ತಡೆಗಳನ್ನು ಗಮನಿಸಿದರೆ ಅಪಘಾತದಿಂದ ಸಾವು ಸಂಬವಿಸಲೆಂದೇ ಹಾಕಿದಂತೆ ಕಾಣುತ್ತಿದೆ. ಈ ರಸ್ತೆಹುಬ್ಬುಗಳಿಗೆ ಎಲ್ಲಿಯೂ ಮುನ್ಸೂಚನೆಯ ಫಲಕಗಳಿಲ್ಲ. ರಸ್ತೆಹುಬ್ಬುಗಳನ್ನು ಮನ ಬಂದಂತೆ ಬೇಕಾಬಿಟ್ಟಿಯಾಗಿ ಹಾಕಲಾಗಿದೆ. ರಾತ್ರಿ ವೇಳೆ ಗೊತ್ತಾಗುವಂತೆ ಅವುಗಳ ಮೇಲೆ ಬಿಳಿ ಬಣ್ಣದ ಪಟ್ಟಿ ಕೂಡಾ ಹಾಕಿಲ್ಲ. ಒಂದು ಕಡೆ ಅತೀ ದೊಡ್ಡದಾದ ರಸ್ತೆ ತಡೆ ಇದ್ದರೆ ಮತ್ತೊಂದಡೆ ಸಣ್ಣದಾಗಿವೆ. ಕೆಲವು ಕಡೆ ಮೂರು ನಾಲ್ಕು ರಸ್ತೆಹುಬ್ಬು ಹಾಕಿದ್ದರೆ ಅವುಗಳ ಅಳತೆಯ ಇತಿಮಿತಿ ಇಲ್ಲ.
ಅದರಲ್ಲಿ ಘಟಪ್ರಭಾದಿಂದ ಗೋಕಾಕವರೆಗಿನ ರಸ್ತೆಯಲ್ಲಿ ದಿನಕೊಂದು ರಸ್ತೆಹುಬ್ಬು ಹಾಕಲಾಗುತ್ತಿದ್ದು, ವಾಹನ ಸವಾರರು ಇದರಿಂದ ರೋಸಿಹೋಗಿದ್ದಾರೆ. ಇದರಿಂದ ಎಷ್ಟೋ ಅಪಘಾತಗಳು ಸಂಭವಿಸಿ ಸವಾರರು ಹಾಗೂ ಹಿಂಬದಿ ಸವಾರರು ಮೃತ ಪಟ್ಟ ಘಟಣೆಗಳು ಸಾಕಷ್ಟು ನಡೆದಿವೆ. ಕಾರಣ ಸಂಬಂದ ಪಟ್ಟ ಅಧಿಕಾರಿಗಳು ಈ ಎಲ್ಲ ವಿಷಗಳನ್ನು ಪರಿಶೀಲಿಸಿ ಯೋಗ್ಯ ನಿರ್ಣಯ ಕೈಕೊಳ್ಳಬೇಕು. ಇಲ್ಲದಿದ್ದರೆ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗುವುದು ಎಂದು ಸುರೇಶ ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.