RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಮುಂದಿನ ಪೀಳಿಗೆ ತೀವೃ ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ : ಡಿ.ದೇವರಾಜ

ಗೋಕಾಕ:ಮುಂದಿನ ಪೀಳಿಗೆ ತೀವೃ ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ : ಡಿ.ದೇವರಾಜ 

ನವಚೇತನ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಉಪಅರಣ್ಯ ಸಂರಕ್ಷಣಾಧಿಕಾರಿ ಡಿ.ದೇವರಾಜ ಅವರು ಸಸಿ ನೆಡುವ ಮೂಲಕ ಚಾಲನೆ ನೀಡಿದರು

ಮುಂದಿನ ಪೀಳಿಗೆ ತೀವೃ ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ : ಡಿ.ದೇವರಾಜ

ಗೋಕಾಕ ಜೂ 10 : ಅರಣ್ಯ ನಾಶದಿಂದಾಗಿ ದಿನೇ ದಿನೇ ಏರುತ್ತಿರುವ ತಾಪಮಾನದಿಂದಾಗಿ ಮುಂದಿನ ಪೀಳಿಗೆ ತೀವೃ ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ಡಿ.ದೇವರಾಜ ಹೇಳಿದರು.
ಶನಿವಾರದಂದು ನಗರದ ನವಚೇತನ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬನಶಂಕರಿ ಮಹಿಳಾ ಮಂಡಳ ಮತ್ತು ಅರಣ್ಯ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗಿಡ ಮರಗಳನ್ನು ಉಳಿಸಿ, ಅರಣ್ಯಗಳನ್ನು ಬೆಳೆಸಿ, ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವುದರಿಂದ ಮುಂದಾಗ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಯ ಎಸ್.ಕೆ.ಮಠದ ಮಾತನಾಡಿ, ಮಕ್ಕಳಲ್ಲಿ ಪ್ಲಾಸ್ಟಿಕ್‍ನಿಂದಾಗುವ ದುಷ್ಪರಿಣಾಮಗಳ ಅರಿವನ್ನು ಮೂಡಿಸಿ, ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ಮಾಡದಂತೆ ಮಕ್ಕಳು ತಮ್ಮ ಪಾಲಕರ ಮನವಲಿಸಬೇಕೆಂದು ತಿಳಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ.ವಿ.ಮಿರ್ಜಿ, ವಲಯ ಅರಣ್ಯಾಧಿಕಾರಿ ಕೆಂಪಣ್ಣ ವಣ್ಣೂರ, ಉಪ ವಲಯ ಅರಣ್ಯಾಧಿಕಾರಿ ಎಚ್.ಎಸ್.ಇಂಗಳಗಿ, ಬನಶಂಕರಿ ಮಹಿಳಾ ಮಂಡಳದ ಅಧ್ಯಕ್ಷೆ ನಮಿತಾ ಸೊಂಟಕ್ಕಿ, ಕಾರ್ಯದರ್ಶಿ ರಾಜಶ್ರೀ ಕ್ಯಾಸ್ತಿ, ಸದಸ್ಯರಾದ ಮೀನಾಕ್ಷಿ ಸವದಿ, ರೇಖಾ ಕ್ಯಾಸ್ತಿ, ಸುನಂದಾ ಕೊಕ್ಕರಿ, ಸಂಗೀತಾ ಗೌಡರ, ದ್ರಾಕ್ಷಾಯಿಣಿ ಸವದಿ ಸೇರಿದಂತೆ ಅನೇಕರು ಇದ್ದರು.

Related posts: