ಗೋಕಾಕ:ಶಾಲಾ ಮಕ್ಕಳಿಗೆ ಕಲಿಕಾ ಉಪಕರಣ ವಿತರಣೆ
ಶಾಲಾ ಮಕ್ಕಳಿಗೆ ಕಲಿಕಾ ಉಪಕರಣ ವಿತರಣೆ
ಗೋಕಾಕ ಜೂ 11 : ಗೋಕಾಕ ಶೈಕ್ಷಣಿಕ ವಲಯದ ಕೊಳವಿ ಸಿ.ಆರ್.ಸಿ ಮಟ್ಟದ ಶಾಲೆಗಳಾದ ಕೆ.ಎಚ್.ಪಿ.ಎಸ್ ಕೊಳವಿ, ಹಣಮಾಪೂರ, ಹೂಲಿಕಟ್ಟಿ, ಹೂಲಿಕಟ್ಟಿ ತೋಟ ಹಾಗೂ ಹೂಲಿಕಟ್ಟಿ ಉರ್ದು ಶಾಲೆಗಳಿಗೆ ಟೇಸ್ಕ ಹಾಸ್ ಇನ್‍ಸ್ಟ್ರೂಮೆಂಟ್ ಹಾಗೂ ಯುಥ್‍ಫಾರ್ ಸೇವಾ ಕಂಪನಿಯ ವತಿಯಿಂದ ಶಾಲಾ ಬ್ಯಾಗ್, ಬುಕ್ ಹಾಗೂ ಕಲಿಕಾ ಉಪಕರಣಗಳನ್ನು ಇಂದು ಶಾಲೆಯ ಎಲ್ಲ ಮಕ್ಕಳಿಗೆ ಉಚಿತವಾಗಿ ಹಂಚಿಕೆ ಮಾಡಿದರು.
ಈ ಸಂದರ್ಭದಲ್ಲಿ ಟೇಸ್ಕ ಹಾಸ್ ಇನ್‍ಸ್ಟ್ರೂಮೆಂಟ್ ಕಂಪನಿಯ ಪ್ರತಿನಿಧಿಗಳಾದ ರೋಹಣ, ಅಂಕಿತಾ, ಬಿ.ಆರ್.ಸಿ ಸಮನ್ವಯಾಧಿಕಾರಿ ಎಮ್.ಬಿ.ಪಾಟೀಲ, ಬಿ.ಆರ್.ಪಿ ಬಿ.ಎನ್. ಮಾಟೋಳ್ಳಿ ಹಾಗೂ ಸ್ಥಳೀಯ ಸಿ.ಆರ್.ಪಿ ಬಸವರಾಜ ಕಲ್ಲೋಳಿ ಹಾಗೂ ಎಲ್ಲ ಶಾಲಾ ಮುಖ್ಯೋಪಾಧ್ಯಾಯರು, ಎಸ್.ಡಿ.ಎಮ್.ಸಿ ಸರ್ವ ಸದಸ್ಯರು, ಗ್ರಾಮ ಪಂಚಾಯಿತ ಸರ್ವ ಸದಸ್ಯರು, ಗ್ರಾಮದ ಪ್ರಮುಖರು ಹಾಗೂ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು