RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಎಎಸ್‍ಐ ವೀರಭದ್ರ ನೀಲಣ್ಣವರ ಅವರ ಸೇವೆ ಶ್ಲಾಘನೀಯ : ಲಕ್ಷ್ಮಣ ಚಂದರಗಿ

ಗೋಕಾಕ:ಎಎಸ್‍ಐ ವೀರಭದ್ರ ನೀಲಣ್ಣವರ ಅವರ ಸೇವೆ ಶ್ಲಾಘನೀಯ : ಲಕ್ಷ್ಮಣ ಚಂದರಗಿ 

ಈಚೆಗೆ ಸೇವಾ ನಿವೃತ್ತಿ ಹೊಂದಿದ ಕುಲಗೋಡ ಪೊಲೀಸ್ ಠಾಣೆಯ ಎಎಸ್‍ಐ ವೀರಭದ್ರ ನೀಲಣ್ಣವರ ದಂಪತಿಯನ್ನು ಸನ್ಮಾನಿಸಲಾಯಿತು.

ಎಎಸ್‍ಐ ವೀರಭದ್ರ ನೀಲಣ್ಣವರ ಅವರ ಸೇವೆ ಶ್ಲಾಘನೀಯ : ಲಕ್ಷ್ಮಣ ಚಂದರಗಿ

ಗೋಕಾಕ ಜೂ 13 : ಸುಮಾರು 32 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ, ಎಎಸ್‍ಐಯಾಗಿ ಕರ್ತವ್ಯ ನಿರತ ಸೇವೆಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಸೇವೆ ಸಲ್ಲಿಸಿ, ಕಳೆದ ಮೇ.31 ರಂದು ಸೇವಾ ನಿವೃತ್ತಿ ಹೊಂದಿದ ಕುಲಗೋಡ ಪೊಲೀಸ್ ಠಾಣೆಯ ಎಎಸ್‍ಐ ವೀರಭದ್ರ ನೀಲಣ್ಣವರ ಅವರ ಕರ್ತವ್ಯ ನಿರತ ಸೇವೆ ಶ್ಲಾಘನೀಯವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಸದ್ಗುರು ಯಲ್ಲಾಲಿಂಗ ಪದವಿ ಪೂರ್ವ ಕಾಲೇಜು ಮತ್ತು ಕನಕಶ್ರೀ ವಿವಿಧ ಉದ್ಧೇಶಗಳ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿ ವತಿಯಿಂದ ಸ್ಥಳೀಯ ವಿ.ಡಿ.ನೀಲಣ್ಣವರ ಅವರ ನಿವಾಸದಲ್ಲಿ ಸೋಮವಾರ ಜೂ.11 ರಂದು ಈಚೆಗೆ ಸೇವಾ ನಿವೃತ್ತಿ ಹೊಂದಿದ ಎಎಸ್‍ಐ ವೀರಭದ್ರ ನೀಲಣ್ಣವರ ಅವರ ದಂಪತಿ ಅವರನ್ನು ಸನ್ಮಾನಿಸಿ ಮಾತನಾಡಿ, ನೀಲಣ್ಣವರ ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ಕರ್ತವ್ಯ ನಿರತ ನೀತಿ ನಿಯಮಗಳ ಪಾಲನೆಯ ಸೇವೆಯು ಅವರದಾಗಿತ್ತು ಎಂದರು.
ಗ್ರಾಮದ ಶ್ರೀ ಸದ್ಗುರು ಯಲ್ಲಾಲಿಂಗ ಪದವಿ ಪೂರ್ವ ಕಾಲೇಜು ಮತ್ತು ಕನಕಶ್ರೀ ವಿವಿಧ ಉದ್ಧೇಶಗಳ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ವರ್ಗದವರು ಇತ್ತೀಚಿಗೆ ಸೇವಾ ನಿವೃತ್ತಿ ಹೊಂದಿದ ಕುಲಗೋಡ ಪೊಲೀಸ್ ಠಾಣೆಯ ಎಎಸ್‍ಐ ವೀರಭದ್ರ ನೀಲಣ್ಣವರ ದಂಪತಿಯನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸ್ಥಳೀಯ ಪಿಕೆಪಿಎಸ್ ನಿರ್ದೇಶಕ ಲಖನ್ ಚಂದರಗಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಬಸವರಾಜ ಕುರಬೇಟ, ಹನುಮಂತ ವಡೇರ, ಮಹಾದೇವ ಹೊರಟ್ಟಿ, ರಮೇಶ ಹಾಲಣ್ಣವರ, ಮಾರುತಿ ಚಂದರಗಿ, ಪ್ರಕಾಶ ಹಾಲಣ್ಣವರ ಸೇರಿದಂತೆ ಉಭಯ ಸಂಘ, ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ವರ್ಗ, ಸ್ಥಳೀಯ ಗಣ್ಯರು, ಗ್ರಾಮಸ್ಥರು ಇದ್ದರು.

Related posts: