ಗೋಕಾಕ:ಹವಾಮಾನ ಆಧಾರಿತ ಬೆಳೆಯ ವಿಮೆ ನೊಂದಣಿಗೆ ಸೂಚನೆ
ಸಾಂಧರ್ಭಿಕ ಚಿತ್ರ
ಹವಾಮಾನ ಆಧಾರಿತ ಬೆಳೆಯ ವಿಮೆ ನೊಂದಣಿಗೆ ಸೂಚನೆ
ಗೋಕಾಕ ಜೂ 13 : ಸನ್ 2018-19 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ತಾಲೂಕಿಗೆ ಅಧಿಸೂಚಿತ ಬೆಳೆಯಾದ ಹಸಿಮೆನಸಿನಕಾಯಿ(ನೀರಾವರಿ) ಪ್ರತಿ ಎಕರೆಗೆ ರೂ:1420/-ನಿಗಧಿಪಡಿಸಲಾಗಿದ್ದು ವಿಮಾ ನೊಂದಣಿಗೆ 30 ಜೂನ್ ಕೊನೆಯ ದಿನವಾಗಿರುತ್ತದೆ.
ಪ್ರಧಾನ ಮಂತ್ರಿ ಫಸಲ್ ಭೀಮಾ(ವಿಮಾ) ಯೋಜನೆಯಡಿ ತಾಲೂಕಿನ ಗೋಕಾಕ ಹೊಬಳಿಗೆ ಟೋಮೇಟೊ, ಅರಭಾವಿ ಹೊಬಳಿಗೆ ಅರಿಶಿಣ ಹಾಗೂ ಟೋಮೇಟೊ, ಕೌಜಲಗಿ ಹೊಬಳಿಗೆ ಈರುಳ್ಳಿ(ನೀರಾವರಿ) ಅಧಿಸೂಚಿತ ಬೆಳೆಗಳಾಗಿರುತ್ತವೆ. ವಿಮಾ ಕಂತಿನ ಮೊತ್ತ ಪ್ರತಿ ಎಕರೆಗೆ ಟೋಮೇಟೊ ರೂ2360/-, ಅರಿಶಿಣ ರೂ2660/- ಹಾಗೂ ಈರುಳ್ಳಿ(ನೀರಾವರಿ) ರೂ 1500/-ಆಗಿರುತ್ತದೆ ವಿಮಾ ಕಂತು ತುಂಬಲು ಜುಲೈ 30 ಕೊನೆಯ ದಿನ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂ. 08332-229382 ಸಂಪರ್ಕಿಸಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಮ್.ಎಲ್.ಜನ್ಮಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.