ಗೋಕಾಕ:ಶರಣರ ಜೀವನಾದರ್ಶ ಅಳವಡಿಸಿಕೊಳ್ಳಿ : ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ
ಶರಣರ ಜೀವನಾದರ್ಶ ಅಳವಡಿಸಿಕೊಳ್ಳಿ : ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ
ಗೋಕಾಕ ಜೂ : ಪ್ರತಿಯೊಬ್ಬ ಮನುಷ್ಯನು ತನ್ನ ಬದುಕಿನಲ್ಲಿ ಶರಣರ ಜೀವನಾದರ್ಶ ಅಳವಡಿಸಿಕೊಳ್ಳಬೇಕು. ಶರಣರ ವಾಣಿ ಶ್ರವಣ ಮಾಡುವುದರಿಂದ ಪ್ರತಿ ಮನುಷ್ಯನಲ್ಲಿ ಆತ್ಮಜ್ಞಾನ ಸ್ಪರ್ಶವಾಗಿ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ ಎಂದು ಭೂತರಾಮನಟ್ಟಿ ಮುಕ್ತಿ ಮಠದ ತಪೂರತ್ನ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.
ಸಮೀಪದ ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ಆಯೋಜಿಸಲಾದ ಚೆನ್ನಬಸವ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಚೆನ್ನಬಸವಣ್ಣನವರ ಜ್ಞಾನ, ಬದುಕು, ವಚನ ಸಾಹಿತ್ಯದ ಕುರಿತು ಸೋಮವಾರÀ ಜೂ.11 ರಂದು ಸಂಜೆ 8.30 ಗಂಟೆಗೆ ನಡೆದ ವಿಶೇಷ ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಪ್ರತಿಯೊಬ್ಬರು ಜೀವನದಲ್ಲಿ ಕಾಯಕ ತತ್ವ ಅಳವಡಿಸಿಕೊಂಡು, ಸತ್ಯ ಶುದ್ಧತೆಯಿಂದ ಇರಬೇಕೆಂದರು.
ಸ್ಥಳೀಯ ಮೌನ ಮಲ್ಲಿಕಾರ್ಜುನ ಮಠದ ಮೌನ ಮಲ್ಲಿಕಾರ್ಜುನ ಮಹಾ ಶಿವಯೋಗಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಾವೇರಿ ತಹಶೀಲ್ದಾರ ಬಸವರಾಜ ಮೆಳವಂಕಿ ದಂಪತಿ ಮತ್ತು ಶ್ರೀ ಮಠಕ್ಕೆ ಅನ್ನ ದಾಸೊಹ ಸೇವೆಗೈದ ಡಾ. ನಾಗರಾಜ ಅಸಲನ್ನವರ ದಂಪತಿಗಳನ್ನು ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿ ಮಹೊದಯರು, ಸಂತ-ಶರಣರು, ಗಣ್ಯರನ್ನು ಶಾಲು ಹೊದಿಸಿ ಶ್ರೀ ಮಠದ ಪರವಾಗಿ ಸತ್ಕರಿಸಲಾಯಿತು.
ಅಂದು ಬೆಳಗ್ಗೆ 7 ಗಂಟೆಯಿಂದ 8 ಗಂಟೆ ತನಕ ಪತಂಜಲಿ ಯೋಗ ಸೂತ್ರ ಮತ್ತು ಪರಿಸರ ಹಾಗೂ ಕೃಷಿಯ ಕುರಿತು ಪ್ರವಚನ ಕಾರ್ಯಕ್ರಮ ಕಪ್ಪತಗುಡ್ಡದ ನಂದಿವೇರಿ ಮಠದ ರಾಷ್ಟ್ರೀಯ ಪರಿಸರ ಪ್ರಶಸ್ತಿ ಪುರಸ್ಕೃೃತ ಶಿವಕುಮಾರ ಮಹಾಸ್ವಾಮಿಜಿ ಅವರಿಂದ ನಡೆದ ಬಳಿಕ ಸಂಜೆ 7.30 ರಿಂದ 9 ಗಂಟೆ ತನಕ ಹಿಪ್ಪರಗಿಯ ಶಿವರುದ್ರ ಶರಣರು ಇವರಿಂದ ವಿರುಪಾಕ್ಷ ಪಂಡಿತಾರಾಧ್ಯ ವಿರಚಿತ ಶ್ರೀ ಚೆನ್ನಬಸವ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಿತು. ನಂತರ ಶಿರಗುಪ್ಪಿಯ ಅಪ್ಪಸಾಹೇಬ ಬಡಿಗೇರ ತಬಲಾ ಸಾಥದೊಂದಿಗೆ ಹಿರೇಕೊಪ್ಪದ ಸಂಕಪ್ಪ ಗುರುಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಚುಳಕಿ ಗವಿಮಠದ ವೀರಸಂಗಯ್ಯ ಮಹಾಸ್ವಾಮಿಜಿ, ಬೆಂಗಳೂರಿನ ಅಶ್ವತಪ್ಪ ಅಜ್ಜನವರು ಸೇರಿದಂತೆ ಸಂತ-ಶರಣರು, ಆಧ್ಯಾತ್ಮ ಆಸಕ್ತರು, ಗಣ್ಯರು, ಅಪಾರ ಸಂಖ್ಯೆಯಲ್ಲಿ ಶ್ರೀ ಮಠದ ಭಕ್ತರು, ಸ್ಥಳೀಯ ಮೌನ ಮಲ್ಲಿಕಾರ್ಜುನ ಮಠದ ಚೆನ್ನಬಸವ ಪುರಾಣ ಪ್ರವಚನ ಕಾರ್ಯಕ್ರಮ ಆಯೋಜಕ ಸದಸ್ಯರು, ಮತ್ತೀತರರು ಇದ್ದರು.
ಮಂಜುನಾಥ ಶರಣರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಶೈಲ ಶರಣರು ಕೊನೆಗೆ ವಂದಿಸಿದರು.