RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ

ಗೋಕಾಕ:ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ 

ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ

 

ಗೋಕಾಕ ಜೂ.14-ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಸರಕಾರವನ್ನು ಆಗ್ರಹಿಸಿದರು.
ಗುರುವಾರದಂದು ನಗರದ ಶೂನ್ಯ ಸಂಪಾದನಾ ಮಠದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ 52ನೇ ಹುಟ್ಟುಹಬ್ಬದ ನಿಮಿತ್ಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದು ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಕನ್ನಡ ಮತ್ತು ಸಂಸ್ಕøತಿ ಉಳಿಸಿ ಬೆಳೆಸುವುದು ಇಂದು ಅನಿವಾರ್ಯ ಎಂಬ ಪರಿಸ್ಥಿತಿ ನುರ್ಮಾಣವಾಗಿದೆ. ಇದನ್ನು ಹೋಗಲಾಡಿಸಲು ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡುವಾಗ ನೆಲ, ಜಲ, ಕನ್ನಡ ಭಾಷೆಯ ಪರಿಕಲ್ಪನೆ ನೀಡಬೇಕು. ಅಂದಾಗ ಮಾತ್ರ ಭವಿಷ್ಯತ್ತಿನಲ್ಲಿ ಕನ್ನಡವನ್ನು ಉತ್ತಂಗದಲ್ಲಿ ನೋಡಲು ಸಾಧ್ಯ. ಆ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಕಾರ್ಯ ಮಾಡಬೇಕಾಗಿದೆ ಎಂದು ಖಾನಪ್ಪನವರ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಗರದ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಶ್ರೀ ಮ.ನಿ.ಪ್ರ. ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ವೇದಿಕೆಯ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎಸ್. ಕುಲಕರ್ಣಿ, ಡಾ|| ಚೌಗಲಾ, ಡಾ|| ಆಂಟಿನ, ದೈಹಿಕ ಪರಿವೀಕ್ಷಕ ಸುಲೇಗಾಂವಿ, ಎಮ್.ಡಿ. ಪಾಟೀಲ, ಶಿಕ್ಷಕ ರಾಮಚಂದ್ರ ಕಾಕಡೆ, ಸಾಧಿಕ ಹಲ್ಯಾಳ, ಸತೀಶ ಗುಜನಟ್ಟಿ ಇದ್ದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ನಗರದ ವಿದ್ಯಾರ್ಥಿಗಳಾದ ಸ್ನೇಹಾ ಚಚಡಿ, ದೀಪಾ ಹಿರೇಹೊಳಿ, ದೀಪಾ ಬಾಗಾಯಿ, ಮಲ್ಲಿಕಾರ್ಜುನ ಮಠಪತಿ, ವೈಷ್ಣವಿ ಗಣಾಚಾರಿ, ಬಾಳಮ್ಮಾ ಪಟ್ಟಣಶೆಟ್ಟಿ, ಕರುಣಾ ಜೋಶಿ, ಕೃಷ್ಣಾ ಗಿಡ್ನವರ ಸೇರಿದಂತೆ 16 ವಿದ್ಯಾರ್ಥಿಗಳನ್ನು ಗೌರವ ಪ್ರಮಾಣ ಪತ್ರ ನೀಡಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ಪದಾಧಿಕಾರಿಗಳಾದ ದೀಪಕ ಹಂಜಿ, ರೆಹಮಾನ ಮೋಕಾಶಿ, ಮಹಾದೇವ ಮಕ್ಕಳಗೇರಿ, ಶೆಟ್ಟೆಪ್ಪಾ ಗಾಡಿವಡ್ಡರ, ರವಿ ನಾವಿ, ಅಜೀತ ಮಲ್ಲಾಪೂರೆ, ಕೆಂಪಣ್ಣಾ ಕಡಕೋಳ, ಮಲ್ಲಪ್ಪ ತಲೆಪ್ಪಗೋಳ, ಲಕ್ಕಪ್ಪಾ ನಂದಿ, ಅಶೋಕ ಬಂಡಿವಡ್ಡರ, ರಾಮಪ್ಪ ಸಣ್ಣಲಗಮನ್ನವರ, ಶಂಕರ ಹಾಲವ್ವಗೋಳ, ದುಂಡಪ್ಪ ಮೆಳವಂಕಿ, ರಮೇಶ ನಾಕಾ, ಫಕೀರಪ್ಪಾ ಗಣಾಚಾರಿ, ಅಮೀರಖಾನ ಜಗದಾಳೆ, ರಮೇಶ ಕಮತಿ, ರಾಮ ಕುಡ್ಡೆಮ್ಮಿ, ನಿಜಾಮ ನದಾಫ ಸೇರಿದಂತೆ ಅನೇಕರು ಇದ್ದರು.
————————————————————-

Related posts: