RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಶವ ಸಂಸ್ಕಾರಕ್ಕಾಗಿ ಹರಿಜನರ ಪರದಾಟ : ಶವವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ

ಗೋಕಾಕ:ಶವ ಸಂಸ್ಕಾರಕ್ಕಾಗಿ ಹರಿಜನರ ಪರದಾಟ : ಶವವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ 

ತಾಲೂಕಿನ ಬೆಣಚಿನಮರಡಿ ಗ್ರಾಮದಲ್ಲಿ ಹರಿಜನರಿಗೆ ಶವ ಸಂಸ್ಕಾರ ನಡೆಸಲು ಜಾಗೆ ನೀಡದ್ದರಿಂದ ರಸ್ತೆಯಲ್ಲಿ ಟೈರ್‍ಗೆ ಬೆಂಕಿ ಪ್ರತಿಭಟನೆ ನಡೆಸುತ್ತಿರುವುದು.

ಶವ ಸಂಸ್ಕಾರಕ್ಕಾಗಿ ಹರಿಜನರ ಪರದಾಟ : ಶವವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ

ಗೋಕಾಕ ಜೂ 15 : ಹರಿಜನರಿಗೆ ಶವ ಸಂಸ್ಕಾರ ನಡೆಸಲು ಸ್ಮಶಾನ ಭೂಮಿ ಇಲ್ಲದ್ದರಿಂದ ಸುಮಾರು 3 ಗಂಟೆ ಕಾಲ ಶವವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಬೆಣಚಿನಮರಡಿ ಗ್ರಾಮದಲ್ಲಿ ಶುಕ್ರವಾರದಂದು ಜರುಗಿದೆ.
ಗ್ರಾಮದ ಹರಿಜನರು ಕಳೆದ ಹಲವಾರು ವರ್ಷಗಳಿಂದ ಒಂದು ಮಾಲ್ಕಿ ಜಮೀನುದಲ್ಲಿ ಶವ ಸಂಸ್ಕಾರ ಮಾಡುತ್ತ ಬಂದಿದ್ದರು. ಈ ಜಮೀನದ ಮಾಲೀಕರು ಇಂದು ಹರಿಜನರಿಗೆ ಶವ ಸಂಸ್ಕಾರ ನಡೆಸಲು ತಡೆವೊಡ್ಡಿದರು. ಇದರಿಂದ ಹರಿಜನರು ದಿಕ್ಕು ಕಾಣದಂತಾಗಿ ಶವವನ್ನು ರಸ್ತೆಯಲ್ಲಿ ಇಟ್ಟು ಟೈರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.


ಪ್ರತಿಭಟನೆಯ ಸುದ್ದಿ ತಿಳಿದ ಕೂಡಲೇ ಗೋಕಾಕ ತಹಶೀಲದಾರ ಜಿ.ಎಸ್. ಮಳಗಿ ಹಾಗೂ ಕಂದಾಯ ನಿರೀಕ್ಷಕ ಸಾಗರ ಕಟ್ಟೀಮನಿ ಮತ್ತು ಗ್ರಾಮಲೆಕ್ಕಾಧಿಕಾರಿ ವ್ಹಿ.ಎಮ್.ಗಾಡಿ ಅವರ ಜೊತೆ ಧಾವಿಸಿ ಬಂದು ಜಮೀನು ಮಾಲೀಕನ ಮನವೊಲಿಸಿ ಶವ ಸಂಸ್ಕಾರಕ್ಕೆ ಆಸ್ಪದ ಮಾಡಿಕೊಟ್ಟರು.
ಈ ಬಗ್ಗೆ ತಹಶೀಲದಾರ ಜಿ.ಎಸ್.ಮಳಗಿ ಅವರನ್ನು ಕೇಳಿದಾಗ ಬೆಣಚಿನಮರಡಿ ಗ್ರಾಮದಲ್ಲಿ ಹರಿಜನರಿಗೆ ಸ್ಮಶಾನ ಭೂಮಿ ಇರುವದಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಶೀಘ್ರದಲ್ಲಿಯೇ ಸ್ಮಶಾನಕ್ಕೆ ಭೂಮಿ ಒದಗಿಸಲಾಗುವದೆಂದು ಪತ್ರಿಕೆಗೆ ತಿಳಿಸಿದರು.

Related posts: