RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಬೆಟಗೇರಿಯಲ್ಲಿ ಸಡಗರ ಸಂಮ್ರದಿಂದ ಪವಿತ್ರ ರಂಜಾನ್ ಹಬ್ಬ ಆಚರಣೆ

ಗೋಕಾಕ:ಬೆಟಗೇರಿಯಲ್ಲಿ ಸಡಗರ ಸಂಮ್ರದಿಂದ ಪವಿತ್ರ ರಂಜಾನ್ ಹಬ್ಬ ಆಚರಣೆ 

ಗ್ರಾಮದ ಮುಸ್ಲಿಂ ಭಾಂದವರು, ಮಕ್ಕಳು ಒಬ್ಬರಿಗೊಬ್ಬರು ಅಪ್ಪಿಕೊಂಡು ರಂಜಾನ್ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡರು.

ಬೆಟಗೇರಿಯಲ್ಲಿ ಸಡಗರ ಸಂಮ್ರದಿಂದ ಪವಿತ್ರ ರಂಜಾನ್ ಹಬ್ಬ ಆಚರಣೆ

ಬೆಟಗೇರಿ ಜೂ 16: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಶಾಂತಿ ಸೌಹಾರ್ದತೆಯ ಸಹಬಾಳ್ವೆಯ ಪ್ರತೀಕವಾಗಿರುವ ಪವಿತ್ರ ರಂಜಾನ್ ಹಬ್ಬವನ್ನು ಶನಿವಾರದಂದು ಇಲ್ಲಿಯ ಮುಸ್ಲಿಂ ಭಾಂದವರು ಅತ್ಯಂತ ಸಡಗರ ಸಂಮ್ರದಿಂದ ಆಚರಿಸಿದರು.
ತಮ್ಮ ಧರ್ಮದ ಸಂಪ್ರದಾಯದಂತೆ ಅಂದು ಬೆಳಗ್ಗೆ ಮಸೀದಿಯಲ್ಲಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಹೊಸ ಬಟ್ಟೆತೊಟ್ಟು ಮಕ್ಕಳು ಸೇರಿದಂತೆ ವೃದ್ಧರವರೆಗೆ ಮುಸ್ಲಿಂ ಭಾಂದವರು ಒಬ್ಬರಿಗೊಬ್ಬರು ಅಪ್ಪಿಕೊಂಡು ರಂಜಾನ್ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡು ಈದ್-ಉಲ್-ಪಿತರ್ ಸಡಗರದಿಂದ, ಭಕ್ತಿಯಿಂದ ಆಚರಿಸಿದರು.
ಗ್ರಾಮದ ಮುಸ್ಲಿಂ ಭಾಂದವರು ಹಿಂದೂ ಭಾಂದವರ ಅಕ್ಕ-ಪಕ್ಕದ ಮನೆಯವರಿಗೆ, ಮಿತ್ರರಿಗೆ ಹಾಗೂ ತಮ್ಮ ಬಂಧು, ಭಾಂದವರಿಗೆ ಸವಿ ಸವಿಯಾದ ಅಡುಗೆ ಉಣಬಡಿಸಿ ಸಂಭ್ರಮಿಸಿದರು. ಸ್ಥಳೀಯ ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಸದಸ್ಯರು, ಎಮ್.ಐ.ನೀಲಣ್ಣವರ, ಈರಯ್ಯ ಹಿರೇಮಠ, ಗೌಡಪ್ಪ ದೇಯಣ್ಣವರ, ಮಲ್ಲಪ್ಪ ಪಣದಿ, ಈಶ್ವರ ಬಳಿಗಾರ ಸೇರಿದಂತೆ ಹಲವಾರು ಸ್ಥಳೀಯ ವಿವಿಧ ಸಮುದಾಯದ ಮುಖಂಡರು, ಗಣ್ಯರು ಮುಸ್ಲಿಂ ಭಾಂದವರೂಂದಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯ ಹಂಚಿಕೊಂಡರು.
ಸ್ನೇಹ, ಸೌಹಾರ್ದತೆ, ತ್ಯಾಗದ ಸಂಕೇತವಾಗಿರುವ ರಮಜಾನ್ ಹಬ್ಬವನ್ನು ಅಲ್ಹಾನ ಆಜ್ಞೆಯಂತೆ ಆಚರಿಸಬೇಕು. ಪ್ರೀತಿ, ಸಹಬಾಳ್ವೆ, ಸೌಹಾರ್ದತೆಯಿಂದ, ಪರೂಪಕಾರಿಯಾಗಿ ಒಬ್ಬ ಒಳ್ಳೆಯ ಮಾನವನಾಗಿ ಧಾರ್ಮಿಕ ಕರ್ತವ್ಯಗಳನ್ನು ನಿಭಾಯಿಸಬೇಕೆಂದು ಹಾಜಿ ಗೌಸಸಾಬ ಮಿರ್ಜಾನಾಯ್ಕ ಸಂದೇಶ ನೀಡಿದರು.
ಕುತುಬುಸಾಬ ಮಿರ್ಜಾನಾಯ್ಕ, ನಜೀರ ನದಾಫ್, ರಫೀಕ ಮಿರ್ಜಾನಾಯ್ಕ, ಮೀರಾಸಾಬ ನದಾಫ್, ರಂಜಾನ್ ಮಿರ್ಜಾನಾಯ್ಕ, ದಸ್ತಗಿರ್ ಯಲಿಗಾರ, ಹಜರತ್ ಮಿರ್ಜಾನಾಯ್ಕ, ಜಬ್ಬಾರ ನದಾಫ್, ಶಬ್ಬಿರ್ ಮಿರಜಕರ, ಮಲಿಕ ಮಿರ್ಜಾನಾಯ್ಕ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಂ ಭಾಂದವರು, ಇತರರು ಇದ್ದರು.

Related posts: