ಗೋಕಾಕ : ಪೊಲೀಸ ಮತ್ತು ನಗರಸಭೆ ಅಧಿಕಾರಿಗಳಿಗೆ ಪೌರಾಡಳಿತ ಸಚಿವರ ಖಕಡ್ ಕ್ಲಾಸ್
ಪೊಲೀಸ ಮತ್ತು ನಗರಸಭೆ ಅಧಿಕಾರಿಗಳಿಗೆ ಪೌರಾಡಳಿತ ಸಚಿವರ ಖಕಡ್ ಕ್ಲಾಸ್
ಗೋಕಾಕ ಜೂ 18 : ಪೊಲೀಸ ಮತ್ತು ನಗರಸಭೆ ಇಲಾಖೆಗಳು ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ವಂದಿಸುತ್ತಿಲ್ಲಾ ಇದರಿಂದ ನನಗೆ ರಾಜಕೀಯವಾಗಿ ಹಿನ್ನಡೆಯಾಗುತ್ತಿದೆ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಏರು ಧ್ವನಿಯಲ್ಲಿಯೇ ರೇಗಿದರು
ಸೋಮವಾರದಂದು ನಗರಸಭೆ ಸಭಾಂಗಣದಲ್ಲಿ ನಡೆದ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಪೊಲೀಸ್ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸಿದ ಸಚಿವರು ಅಧಿಕಾರಿಗಳಿಗೆ ಖಡಕ ಎಚ್ಚರಿಕೆ ನೀಡಿದರು
ನ್ಯಾಯ ಕೇಳಿ ಪೊಲೀಸ ಠಾಣೆಗೆ ಬರುವ ಸಾರ್ವಜನಿಕರಿಗೆ ಹಿಂದೂ , ಮುಸ್ಲಿಂ ಎಂಬ ಭೇದ ಭಾವ ಮಾಡದೇ ಸರಿಯಾಗಿ ಸ್ವಂಧಿಸಿ ನ್ಯಾಯ ದೊರಕಿಸ ಕೊಡಬೇಕು . ಯಾರದೋ ಮಾತು ಕೇಳಿ ಕೇಸ್ ದಾಖಲಿಸಿ ಸಾರ್ವಜನಿಕರಿಗೆ ಸತಾಯಿಸುವ ಕಾರ್ಯ ಮಾಡದೆ ಎಲ್ಲರಿಗೂ ಒಂದೆ ರೀತಿ ನ್ಯಾಯ ಒದಗಿಸಿ ಕೊಡುವ ಕಾರ್ಯವಾಗಬೇಕೆಂದು ನಗರ ಠಾಣೆ ಎಸ್ಐ ಗೆ ಖಡಕ್ ಎಚ್ಚರಿಕೆ ನೀಡಿದರು .
ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ 24*7 ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಅಲ್ಲದೆ ಮಾಸ್ಟರ್ ಪ್ಲ್ಯಾನ್ ಕಾರ್ಯ ನಡೆದ ಕಡೆಗಳಲ್ಲಿ ದುರಸ್ಥಿ ಕೆಲಸಗಳು ಆಮೆಗತಿಯಿಂದ ನಡೆದು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಅವುಗಳನ್ನು ಸರಿಯಾದ ಸಮಯಕ್ಕೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಕಾರ್ಯಪ್ರವೃತವಾಗಬೇಕೆಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಕ್ಲಾಸ್ ತಗೆದುಕೊಂಡ ಪ್ರಸಂಗ ಇಂದು ನಗರಸಭೆ ಸಭಾಂಗಣದಲ್ಲಿ ನಡೆಯಿತು
ಸಭೆಯಲ್ಲಿ ಡಿವಾಯ್ಎಸಪಿ ಪ್ರಭು ಡಿ.ಟಿ , ನಗರಸಭೆ ಪೌರಾಯುಕ್ತ ಚನ್ನಪಗೌಡರ , ನಗರಸಭೆ ಹಿರಿಯ ಸದಸ್ಯ ಎಸ್.ಎ ಕೋತವಾಲ , ಅಧೀಕ್ಷಕ ಎಂ.ಎಚ್.ಅತ್ತಾರ , ಅಭಿಯಂತರ ತಡಸಲೂರ , ಶಹರ ಠಾಣೆ ಮತ್ತು ಗ್ರಾಮೀಣ ಠಾಣೆಯ ಎಸ್ಐ ಗಳು ಉಪಸ್ಥಿತರಿದ್ದರು