ಮೂಡಲಗಿ:ಟ್ರ್ಯಾಕ್ಟರ್ ಪಲ್ಟಿ : ಸ್ಥಳದಲ್ಲೇ ವ್ಯಕ್ತಿಯ ಸಾವು
ಟ್ರ್ಯಾಕ್ಟರ್ ಪಲ್ಟಿ : ಸ್ಥಳದಲ್ಲೇ ವ್ಯಕ್ತಿಯ ಸಾವು
ಮೂಡಲಗಿ ಜೂ 18 : ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಧರ್ಮಟ್ಟಿ ಗ್ರಾಮದಲ್ಲಿ ನಡೆದಿದೆ
ಸಿದ್ಧಪ್ಪ ಭೀಮಪ್ಪ ಕೌಜಲಗಿ (35) ಮೃತ ವ್ಯಕ್ತಿ. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.