ಗೋಕಾಕ:ಈಜಲು ಹೋಗಿ ನೀರು ಪಾಲಾಗಿದ್ದ ವ್ಯಕ್ತಿಯ ಶವಪತ್ತೆ
ಈಜಲು ಹೋಗಿ ನೀರು ಪಾಲಾಗಿದ್ದ ವ್ಯಕ್ತಿಯ ಶವಪತ್ತೆ
ಗೋಕಾಕ ಜೂ 18 : ರಮಜಾನ ಹಬ್ಬದಂದು ಗೆಳೆಯರೊಂದಿಗೆ ಈಜಲು ಹೋಗಿ ಜಲಪಾತದಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದ ಯುವಕನ ಶವ ಪತ್ತೆ ಯಾಗಿದೆ
ಶನಿವಾರ ಮಧ್ಯಾಹ್ನ ಜಲಪಾತಕ್ಕೆ ಬಿದಿದ್ದ ಯುವಕನ ಶವವನ್ನು ಅಗ್ನಿಶಾಮಕ ದಳದವರ ಸಹಕಾರದಿಂದ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ . ಶವ ಪರೀಕ್ಷೆ ನಡೆಯಿಸಿದ ಬಳಿಕ ಶವವನ್ನು ಮೃತನ ಸಂಬಂಧಿಗಳಿಗೆ ಹಸ್ತಾಂತರಿಸಿಲಾಗಿದೆ ಈ ಘಟನೆಯ ಕುರಿತು ಗೋಕಾಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ