ಘಟಪ್ರಭಾ :ಘಟಪ್ರಭಾದ ಕೆಎಚ್ಐದಲ್ಲಿ 4ನೇ ವಿಶ್ವ ಯೋಗ ದಿನಾಚರಣೆ
ಘಟಪ್ರಭಾದ ಕೆಎಚ್ಐದಲ್ಲಿ 4ನೇ ವಿಶ್ವ ಯೋಗ ದಿನಾಚರಣೆ
ಘಟಪ್ರಭಾ ಜೂ 19 : 4ನೇ ವಿಶ್ವ ಯೋಗ ದಿನಾಚರಣೆಯನ್ನು ಜಗತ್ತಿನ ಸುಮಾರು 192 ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದ್ದು, ತನಿಮಿತ್ಯ ಇಲ್ಲಿಯ ಕೆಎಚ್ಐ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಘಟಪ್ರಭಾ, ಸಿದ್ಧ ಸಮಾಧಿ ಯೋಗ ಧಾರವಾಡ, ಸರಕಾರಿ ಹಾಗೂ ಎಸ್.ಡಿ.ಎಮ್. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಸಂಕೇಶ್ವರ, ಯೋಗ ಸಂಜೀವಿನಿ ಸಮಿತಿ ಘಟಪ್ರಭಾ ಇವರ ಸಂಯುಕ್ತ ಆಶ್ರಯದಲ್ಲಿ 4ನೇ ವಿಶ್ವ ಯೋಗ ದಿನಾಚರಣೆಯನ್ನು ಸ್ಥಳೀಯ ಕೆಎಚ್ಐ ಆಸ್ಪತ್ರೆಯ ಮೈದಾನದಲ್ಲಿ ದಿ.21ರಂದು ಬೆಳಿಗ್ಗೆ 5-45 ಕ್ಕೆ ಆಚರಿಸಲಾಗುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಚ್ಐ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಘನಶ್ಯಾಮ ವೈದ್ಯ ವಹಿಸಲಿದ್ದು, ಡಾ| ಸ್ವಾತಿ ವೈದ್ಯ ಉಪಸ್ಥಿತರಿರಲಿದ್ದಾರೆ. ಯೋಗ್ಯಾಭ್ಯಾಸವನ್ನು ಎಸ್ಎಸ್ವಾಯ್ನ ಯೋಗ ಗುರು ಹನುಮಂತ ಗುರೂಜಿ ನಡೆಸಿಕೊಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೋ: 98441529912, 9731299219 ಸಂಪರ್ಕಿಸಲು ಕೋರಲಾಗಿದೆ.