ಮೂಡಲಗಿ : ಯಾದವಾಡ ಗ್ರಾಮದಲ್ಲಿ ಎರೆಡು ಮನೆಗಳಲ್ಲಿ ಕಳ್ಳತನ
ಯಾದವಾಡ ಗ್ರಾಮದಲ್ಲಿ ಎರೆಡು ಮನೆಗಳಲ್ಲಿ ಕಳ್ಳತನ
ಮೂಡಲಗಿ ಜೂ 19 : ಗೋಕಾಕ ತಾಲೂಕಿನ ಯಾದವಾಡ ಗ್ರಾಮದಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಎರೆಡು ಮನೆಗಳಲ್ಲಿ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ
ಗ್ರಾಮದ ಮುನ್ನಾ ಗಲಗಲಿ, ಈಶ್ವರ ಎಂಬುವವರ ಮನೆಗಳಲ್ಲಿ ಕಳ್ಳರು ಚಿನ್ನಾಭರಣ ದೋಚಿದ್ದಾರೆ. ಮನೆಯಲ್ಲಿ ಯಾರು ಇಲ್ಲದಾಗ ಬಾಗಿಲಿನ ಬೀಗ ಮುರಿದು ಮನೆ ದೋಚಿದ್ದಾರೆ. ಬೀರುವಿನ ಬೀಗ ಒಡೆದು 100 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.