RNI NO. KARKAN/2006/27779|Friday, November 22, 2024
You are here: Home » breaking news » ಬೆಳಗಾವಿ:ನಾಡದ್ರೋಹಿ ಎಂಇಎಸ ಸಂಘಟನೆ ನಿಷೇಧಕ್ಕೆ : ವಾಟಾಳ ಆಗ್ರಹ

ಬೆಳಗಾವಿ:ನಾಡದ್ರೋಹಿ ಎಂಇಎಸ ಸಂಘಟನೆ ನಿಷೇಧಕ್ಕೆ : ವಾಟಾಳ ಆಗ್ರಹ 

ನಾಡದ್ರೋಹಿ ಎಂಇಎಸ ಸಂಘಟನೆ ನಿಷೇಧಕ್ಕೆ : ವಾಟಾಳ ಆಗ್ರಹ

ಬೆಳಗಾವಿ ಮೇ 30: ನಾಡದ್ರೋಹಿ ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಸಂಘಟನೆಯ ಮುಖಂಡ ವಾಟಾಳ ನಾಗರಾಜ್ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ  ಮನವಿ ಸಲ್ಲಿಸಿದರಲ್ಲದೇ, ಎಂಇಎಸ್ ಸಂಘಟನೆ ನಿಷೇಧಿಸದಿದ್ದರೆ ಜೂನ್ 12 ರಂದು ಕನಾ೯ಟಕ ಬಂದ್ ಮಾಡಲಾಗುವುದು ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಚನ್ನಮ್ಮ‌ವೃತ್ತದಿಂದ ಮಂಗಳವಾರ ಪ್ರತಿಭಟನೆ ನಡೆಸಿ ಮಾತನಾಡಿದ ವಾಟಾಳ ನಾಗರಾಜ್,  ಗಡಿನಾಡಿನ ಬೆಳಗಾವಿಯಲ್ಲಿ ಬೆರಳಣಿಕೆಯ ಪುಂಡ ಎಂಇಎಸ್ ಸಂಘಟನೆ ಉದ್ದಟತನ ಅತಿಯಾಗಿದೆ. ಆ ಸಂಘಟನೆಯನ್ನು ನಿಷೇಧಿಸಿ ಕನ್ನಡ ನಾಡಿನಲ್ಲಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ ಪುಂಡರನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಗಡಿನಾಡಿನಲ್ಲಿ ಮರಾಠಿ ಪತ್ರಿಕೆಗಳು ರಾಜ್ಯ ಸರಕಾರದ ಜಾಹೀರಾತುಗಳನ್ನು ಪಡೆದು ರಾಜ್ಯದ ವಿರುದ್ಧ ಮಾತನಾಡುತ್ತಿವೆ.  ಎಂಇಎಸ್ ಸಂಘಟನೆಗೆ ಪ್ರೇರೆಪಿಸುತ್ತಿವೆ. ಅಂಥ ಪತ್ರಿಕೆಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಎಂಇಎಸ್ ಸಂಘಟನೆ ನಿಷೇಧಿಸದಿದ್ದರೆ ಜೂನ್ 12 ರಂದು ಕನಾ೯ಟಕ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ, ಕೆ.ಆರ್.ಕುಮಾರ ಮತ್ತು ಕನ್ನಡ ಪರ ಹೋರಾಟಗಾರರು ಇದ್ದರು

Related posts: