RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ : ಲಕ್ಷ್ಮಣ ಚಂದರಗಿ

ಗೋಕಾಕ:ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ : ಲಕ್ಷ್ಮಣ ಚಂದರಗಿ 

ಗ್ರಾಮದ ಗ್ರಾಪಂ ಪಿಡಿಒ ಬಿ.ಎಫ್.ದಳವಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ : ಲಕ್ಷ್ಮಣ ಚಂದರಗಿ

ಬೆಟಗೇರಿ ಜೂ 20 : ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ, ಮೆಳವಂಕಿ ಜಿಪಂ ಸದಸ್ಯೆ ಶಶಿಕಲಾ ಸಣ್ಣಕ್ಕಿ, ಬೆಟಗೇರಿ ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ ಅವರ ಮಾರ್ಗದರ್ಶನದಂತೆ ಸ್ಥಳೀಯ ಗ್ರಾಮ ಪಂಚಾಯತ ಸಹಯೋಗದಲ್ಲಿ ಗ್ರಾಮದ ನಾಗರಿಕರ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಕಾರ್ಯಾಲಯದ ಸಭಾಂಗಣದಲ್ಲಿ ಬುಧವಾರ ಜೂ.20 ರಂದು ನಡೆದ ಮಾಸಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಊರಿನ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ಥಳೀಯರ ಹಾಗೂ ಗ್ರಾಮ ಪಂಚಾಯ್ತಿ ಸರ್ವ ಸದಸ್ಯರ ಸಹಾಯ, ಸಹಕಾರ ಅವಶ್ಯಕವಾಗಿದೆ ಎಂದರು.
ಇಲ್ಲಿಯ ಗ್ರಾಪಂ ಪಿಡಿಒ ದಳವಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಗ್ರಾಮ ಪಂಚಾಯ್ತಿಗೆ ಬರುವ ವಿವಿಧ ಅನುದಾನಗಳ ಕುರಿತು ಹಾಗೂ ಗ್ರಾಪಂ ಅಧ್ಯಕ್ಷರ ಹಾಗೂ ಸದಸ್ಯರ ಮಾರ್ಗದರ್ಶನದಂತೆ ಗ್ರಾಮದ ಬೀದಿ ದೀಪ ರಿಪೇರಿ, ನೂತನ ವಿದ್ಯುತ್ ದೀಪಗಳ ಅಳವಡಿಕೆ, ಕುಡಿಯುವ ನೀರು ಸರಬುರಾಜು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಈಗಾಗಲೇ ಇಲ್ಲಿಯ ನಾಗರಿಕರಿಗೆ ಕಲ್ಪಿಸಲಾಗಿದೆ. ಇನ್ನೂ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸ್ಥಳೀಯ ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಸುಭಾಷ ಕರೆನ್ನವರ, ಅರ್ಜುನ ಅಂದಾನಿ, ಅಜ್ಜಪ್ಪ ಪೇದನ್ನವರ, ಈಶ್ವರ ಬಳಿಗಾರ, ಮಲ್ಲಪ್ಪ ಪಣದಿ, ಶಿವಪ್ಪ ದೇಯಣ್ಣವರ, ಶಂಕರ ಕೋಣಿ, ಹನುಮಂತ ಸವತಿಕಾಯಿ, ಬಸಪ್ಪ ಕೋಣಿ, ಉದ್ದಪ್ಪ ಆಶೆಪ್ಪಗೋಳ, ಪಶು ವೈದ್ಯಾಧಿಕಾರಿ ಧರೆಪ್ಪ ಹೊಸಮನಿ, ಮೆಳೆಪ್ಪ ಹರಿಜನ, ರಾಮಣ್ಣ ದಂಡಿನ ಸೇರಿದಂತೆ ಮುತ್ತೆಪ್ಪ ಕುರುಬರ, ಸ್ಥಳೀಯ ಗ್ರಾಮಸ್ಥರು, ಇತರರು ಇದ್ದರು. ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಗೌಡಪ್ಪ ಮಾಳೇದ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾಕ್ರ್ಲ ಸುರೇಶ ಬಾಣಸಿ ಕೊನೆಗೆ ವಂದಿಸಿದರು.

Related posts: