RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಯೋಗ ಮತ್ತು ಪ್ರಾಣಾಯಾಮಗಳಲ್ಲಿ ಅದ್ಬುತವಾದ ಶಕ್ತಿ ಇದೆ : ನಿಜಲಿಂಗ ದಡ್ಡಿಮನಿ

ಗೋಕಾಕ:ಯೋಗ ಮತ್ತು ಪ್ರಾಣಾಯಾಮಗಳಲ್ಲಿ ಅದ್ಬುತವಾದ ಶಕ್ತಿ ಇದೆ : ನಿಜಲಿಂಗ ದಡ್ಡಿಮನಿ 

ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಯೋಗಾಭ್ಯಾಸ ನಡೆಸುತ್ತಿರುವದು

ಯೋಗ ಮತ್ತು ಪ್ರಾಣಾಯಾಮಗಳಲ್ಲಿ ಅದ್ಬುತವಾದ ಶಕ್ತಿ ಇದೆ : ನಿಜಲಿಂಗ ದಡ್ಡಿಮನಿ

ಗೋಕಾಕ ಜೂ 21 : ಯೋಗ ಮತ್ತು ಪ್ರಾಣಾಯಾಮಗಳಲ್ಲಿ ಅದ್ಬುತವಾದ ಶಕ್ತಿ ಇದೆ ಎಂದು ಪಂತಜಲಿ ಯೋಗ ಸಮಿತಿಯ ಅಧ್ಯಕ್ಷರಾದ ಯೋಗ ತರಬೇತಿದಾರ ನಿಜಲಿಂಗ ದಡ್ಡಿಮನಿ ಹೇಳಿದರು

ತಾಲೂಕಾಡಳಿತ ಮತ್ತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಗುರುವಾರದಂದು ಮುಂಜಾನೆ ನಗರದ ಮಯೂರ ಆಂಗ್ಲ ಮಾದ್ಯಮ ಶಾಲಾ ಆವರಣದಲ್ಲಿ ಹಮ್ಮಿಕೊಂಡ್ಡಿದ 4 ನೇ ವಿಶ್ವ ಯೋಗ ದಿನಾಚಾರಣೆಯಲ್ಲಿ ತರಬೇತಿ ನೀಡಿ ಮಾತನಾಡಿದರು

ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಿರುವ ಸಾರ್ವಜನಿಕರು

ಪ್ರತಿನಿತ್ಯ ಯೋಗ ಮಾಡುವದರಿಂದ ನಮ್ಮ ಅಂಗಾಂಗಗಳು ಶಕ್ತಿಯುತವಾಗಿರುತ್ತವೆ ಮನಸ್ಸು ಏಕಾಗೃತೆಯಿಂದ ಕೂಡಿರುತ್ತದೆ . ಯೋಗ ಮಾಡುವದರಿಂದ ಮನುಷ್ಯ ರೋಗಗಳಿಂದ ದೂರವಿರಬಹುದು ಆ ದಿಸೆಯಲ್ಲಿ ಪ್ರತಿಯೋಬ್ಬರು ಯೋಗಾಭ್ಯಾಸದ ರೂಡಿ ಮಾಡಿಕೋಳ್ಳಬೆಕೆಂದು ದಡ್ಡಿಮನಿ ಸಲಹೆ ನೀಡಿದರು

ಸಸಿಗೆ ನೀರೆರೆಯುವ ಮೂಲಕ ವಿಶ್ವ ಯೋಗ ದಿನಾಚರಣೆಗೆ ಗಣ್ಯರು ಚಾಲನೆ ನೀಡಿದರು

ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಎಸ್.ಮಾಳಗಿ , ಡಿವಾಯ್ಎಸಪಿ ಡಿ.ಟಿ.ಪ್ರಭು , ಶಿಕ್ಷಣಾಧಿಕಾರಿಗಳಾದ ಎ.ಸಿ.ಗಂಗಾಧರ , ಡಿ.ಎಸ್.ಕುರ್ಲಕಣಿ , ಸಿಪಿಐ ಸಿ.ಕಿರಣಕುಮಾರ , ಪಿಎಸ್ಐ ಸಂತೋಷ ಹಳ್ಳೂರ , ಶಿರಗುಪ್ಪಿ, ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ , ನಾರಾಯಣ ಮಠಾಧೀಕಾರಿ , ಶ್ರೀಮತಿ ರಜನಿ ಜಿರಗ್ಯಾಳ , ಡಾ. ಗುಗವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: