ಮೂಡಲಗಿ:ಯೋಗ ಮನುಷ್ಯನ ಅವಿಭಾಜ್ಯ ಅಂಗವಾಗಬೇಕು : ಡಾ. ಮೋಹನ ಬಸ್ಮೆ
ಯೋಗ ಮನುಷ್ಯನ ಅವಿಭಾಜ್ಯ ಅಂಗವಾಗಬೇಕು : ಡಾ. ಮೋಹನ ಬಸ್ಮೆ
ಮೂಡಲಗಿ ಜೂ 21 : ವಿಶ್ವ ಯೋಗ ದಿನಾಚರಣೆ ಇಂದು ಒಂದೇ ದಿನ ಯೋಗ ಮಾಡದೇ ಪ್ರತಿ ನಿತ್ಯ ಒಂದು ಗಂಟೆ ಯೋಗ ಮಾಡಬೇಕು ಯೋಗ ಎಂದರೆ ಚಿತ್ತ (ಮನಸ್ಸು) ಪದಗಳು (ಮಾತು) ಮಲಭಾತೆ (ದೇಹದಿಂದ ಹೊಲಸು ಹೊರಗೆ ಹಾಕುವುದು) ಅವುಗಳ ಸ್ಪಷ್ಟತೆಯನ್ನೇ ಯೋಗ ಎಂದು ಕರೆಯುತ್ತಾರೆ ಯೋಗ ಮನುಷ್ಯನ ಅವಿಭಾಜ್ಯ ಅಂಗವಾಗಬೇಕೆಂದು ನೂತನ ಮೂಡಲಗಿಯ ತಾಲೂಕಾ ದಂಡಾಧಿಕಾರಿ ಡಾ. ಮೋಹನ ಬಸ್ಮೆ ಹೇಳಿದರು.
ಅವರು ಗುರುವಾರ ಪತಂಜಲಿ ಯೋಗ ಪೀಠ ಹರಿದ್ವಾರ, ಪುರಸಭೆ ಕಾರ್ಯಾಲಯ, ಸ್ವಾಮಿ ವಿವೇಕಾನಂದ ನಗರ ಮತ್ತು ಗ್ರಾಮಾಭಿವೃದ್ಧಿ ಸಂಸ್ಥೆ, ಪರಿವರ್ತನಾ ಮಹಿಳಾ ಸ್ವ-ಸಹಾಯ ಸಂಘ, ಲೈನ್ಸ್ ಕ್ಲಬ್ ಆಫ್ ಮೂಡಲಗಿ ಪರಿವಾರ, ವಿಶ್ವ ಹಿಂದೂ ಪರಿಷತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ಆವರಣದಲ್ಲಿ 4ನೇ ವಿಶ್ವಯೋಗ ದಿನಾಚರಣೆಯಲ್ಲಿ ಮಾತನಾಡಿದರು.
ಯೋಗಾಭ್ಯಾಸ ವಿಶ್ವಕ್ಕೆ ಭಾರತ ನೀಡಿದ ಅದ್ಭುತ ಕೊಡುಗೆ ಪ್ರತಿ ಸಾರ್ವಜನಿಕರಲ್ಲಿ ಯೋಗದ ಜ್ಞಾನ ಬೆಳೆಯುವುದು ಈಗಿನ ಕಾಲದಲ್ಲಿ ಸೂಕ್ತವಾಗಿದೆ ಎಂದರು ಯೋಗದ ಜೊತೆಗೆ ಆಹಾರದ ಪದ್ಧತಿಯನ್ನು ಬದಲಾಯಿಸಿಕೊಳ್ಳುವುದು ಅವಶ್ಯವಾಗಿದೆ ಎಂದರು.
ಮೂಡಲಗಿ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಶ್ರೀಪಾದಬೋದ ಸ್ವಾಮೀಜಿ ಮಾತನಾಡಿ ಕ್ರಿ.ಪೂ. 3 ನೇ ಶತಮಾನದಲ್ಲಿದ್ದ ಪತಂಜಲಿ ಋಷಿಯ ಚಿಂತನೆಯ ಫಲವಾದ ಯೋಗ ಬರಿ ಶಾಸ್ತ್ರವಾಗದೇ ಆಚರಣೆ, ಅಭ್ಯಾಸವಾಗಿ ಇಲ್ಲಿಯ ತನಕ ಬೆಳೆದು ಬಂದಿದೆ ಪ್ರತಿ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಯೋಗ ಸಹಕಾರಿಯಾಗಿದೆ. ಇಂದು ವಿಶ್ವ ಯೋಗ ದಿನಾಚರಣೆಯನ್ನು 177 ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ ಇದು ಭಾರತದ ಕೊಡುಗೆ ಎಂದು ಹೆಮ್ಮೆಯಿಂದ ಹೇಳಬಹುದೆಂದರು. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು ಧೀ ಶಕ್ತಿಯ ಉಬ್ಬಿಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ ಹೀಗೆ ಪಡೆದ ಯೋಗ ಶಕ್ತಿಯನ್ನು ಭಾರತದ ಋಷಿಗಳು ವಿಶ್ವದೆಲ್ಲೆಡೆ ಪಸರಿಸಿದ್ದಾರೆ ಪ್ರತಿಯೊಬ್ಬರು ತಮ್ಮ 24 ಗಂಟೆಗಳ ಅವಧಿಯಲ್ಲಿ ಯೋಗಕ್ಕಾಗಿ 1 ಗಂಟೆಯನ್ನು ಕಡ್ಡಾಯವಾಗಿ ಮೀಸಲಿಡುವ ಮುಖಾಂತರ ಆಯುಷ್ಯ ಆರೋಗ್ಯ ಸಂಪತ್ತನ್ನು ಪಡೆಯಬೇಕೆಂದರು
ಪುರಸಭೆಯ ಸದಸ್ಯ ಡಾ. ಎಸ್.ಎಸ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, 4 ನೆಯ ವಿಶ್ವ ಯೋಗ ದಿನಾಚರಣೆಯಲ್ಲಿ ಕೇವಲ ನೆಪ ಮಾತ್ರಕ್ಕೆ ಆಚರಿಸದೆ ಕಾಯಾ ವಾಚಾ ಮನಸಾ ಯೋಗವನ್ನು ಸ್ವೀಕರಿಸಬೇಕು ಜೀವನಕ್ಕೆ ಶಿಕ್ಷಣ ಎಷ್ಟು ಪ್ರಾಮುಖ್ಯೆತೆಯೊ ಅಷ್ಟೇ ಆರೋಗ್ಯಕ್ಕೆ ಮತ್ತು ಆಯುಷ್ಯ ವೃದ್ಧಿಗೆ ಯೋಗವು ಪ್ರಾಮುಖ್ಯತೆ ಪಡೆದಿದೆ ಪ್ರತಿಯೊಬ್ಬರು ಯೋಗ ಮಾಡುವ ಮೂಲಕ ಮನಸ್ಸು ಹಾಗೂ ಶಾರೀರವನ್ನು ಸದೃಢ ಹೊಂದಬೇಕೆಂದರು
ವೇದಿಕೆಯ ಮೇಲೆ ಹರ ಹರ ಮಹಾದೇವ ಯೋಗ ಪೀಠದ ಶ್ರೀ ಬ್ರಹ್ಮಾನಂದ ಗುರೂಜಿ, ಪುರಸಭೆಯ ಮುಖ್ಯಾಧಿಕಾರಿ ಬಿ.ಬಿ. ಗೊರೋಶಿ ಸದಸ್ಯ ಅನ್ವರ ನದಾಫ ಲೈಯನ್ಸ್ ಕ್ಲಬ್ ಅಧ್ಯಕ್ಷ ಈರಣ್ಣ ಕೊಣ್ಣುರ ಸ್ವಾಮಿ ವಿವೇಕಾನಂದ ಗ್ರಾಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸಂತ್ರಾಮ ನಾಶಿ ವಿಶ್ವ ಹಿಂದೂ ಪರಿಷತ್ತಿನ ಸಂಚಾಲಕ ಕೃಷ್ಣಾ ನಾಶಿ ಪರಿವರ್ತನಾ ಮಹಿಳಾ ಸ್ವ ಸಹಾಯ ಸಂಘದ ಅಧ್ಯಕ್ಷೆ ಶಿಲ್ಪಾ ಗೋಡಿಗೌಡರ ಉಪಸ್ಥಿತರಿದ್ದರು.
ಗೋಕಾಕದ ಹರ ಹರ ಮಹಾದೇವ ಯೋಗ ಪೀಠದ ಶ್ರೀ ಬ್ರಹ್ಮಾನಂದ ಗುರೂಜಿ ಸಾರ್ವಜನಿಕರಿಗೆ ಯೋಗವನ್ನು ಪ್ರದರ್ಶಸಿಸುವ ಮೂಲಕ ಯೋಗಾಭ್ಯಾಸ ಮಾಡಿದರು
ಮಾಹಾವೀರ ಸಲ್ಲಾಗೋಳ ನಿರೋಪಿಸಿದರು, ಚಿದಾನಂದ ಮುಗಳಖೋಡ ಸ್ವಾಗತಿಸಿದರು, ಆನಂದ ಸುಳನ್ನವರ ವಂದಿಸಿದರು