ಮೂಡಲಗಿ:ರನ್ ಟವಿಯಲ್ಲಿ ಮೂಡಲಗಿಯ ಮಂಜುನಾಥನ “ಮಿಸ್ಟರ್ ಬೀನ್” ಕಾರ್ಯಕ್ರಮ
ರನ್ ಟವಿಯಲ್ಲಿ ಮೂಡಲಗಿಯ ಮಂಜುನಾಥನ “ಮಿಸ್ಟರ್ ಬೀನ್” ಕಾರ್ಯಕ್ರಮ
ಮೂಡಲಗಿ ಜೂ 22 : ಕನ್ನಡದ ಮಿಸ್ಟರ್ ಬೀನ್ ಎಂಬ ಖ್ಯಾತಿಯ ಮಂಜುನಾಥನ ಬಹಳ ದಿನಗಳ ಕನಸು ನನಸಾಗಿದೆ.
ಬಾಗಲಕೋಟ ಜಿಲ್ಲೆಯ ಮುಧೋಳ ನಗರದ ರನ್ ಟಿವಿ ಚಾನಲ್ ನವರು ಮಂಜುನಾಥನಿಗೆ “ಮಿಸ್ಟರ್ ಬೀನ್ ” ನಟನೆಯ ಜೊತೆಗೆ ನಿರೂಪಣೆ ಮಾಡುವ ಅವಕಾಶವನ್ನು ಕಲ್ಪಿಸಿದ್ದಾರೆ . ಈಗಾಗಲೇ ಮಿಸ್ಟರ್ ಬೀನ್ ಕಾರ್ಯಕ್ರಮದ 30 ಸಂಚಿಕೆಗಳ ಚಿತ್ರೀಕರಣ ಮುಗಿಸಿದೆ. ಈ ಕಾರ್ಯಕ್ರಮ ಅತೀ ಶೀಘ್ರದಲ್ಲೇ ಪ್ರಸಾರವಾಗಲಿದೆ ಎಂದು ಮಂಜುನಾಥ ಅವರು ತಿಳಿಸಿದ್ದಾರೆ.