RNI NO. KARKAN/2006/27779|Sunday, December 22, 2024
You are here: Home » breaking news » ಬೆಳಗಾವಿ:ಮಾಜಿ ಸಚಿವ ಸತೀಶಗೆ ಎಐಸಿಸಿ ಕಾರ್ಯದರ್ಶಿ ಭಾಗ್ಯ

ಬೆಳಗಾವಿ:ಮಾಜಿ ಸಚಿವ ಸತೀಶಗೆ ಎಐಸಿಸಿ ಕಾರ್ಯದರ್ಶಿ ಭಾಗ್ಯ 

ಮಾಜಿ ಸಚಿವ ಸತೀಶಗೆ ಎಐಸಿಸಿ ಕಾರ್ಯದರ್ಶಿ ಭಾಗ್ಯ

 

ಬೆಳಗಾವಿ ಮೇ 31: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ,ಯಮಕನಮರಡಿ ಶಾಸಕ ಶ್ರೀ ಸತೀಶ ಜಾರಕಿಹೊಳಿ ಅವರನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ನಿರ್ದೇಶನದ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂಸದ ಜರ್ನಾಧನ ಅವರು ಎಐಸಿಸಿ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ
ಗುರುವಾರ ದಂದು ಎಐಸಿಸಿ ಯಿಂದ ಅಧಿಕೃತವಾಗಿ ಹೊರಬಿದ್ದ ಪ್ರಕಟಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಾ.ಪರಮೇಶ್ವರ್ ಅವರನ್ನು
ಮುಂದುವರೆಸಲಾಗಿದೆ.ದಿನೇಶ ಗುಂಡೂರಾವ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ರನ್ನಾಗಿ ಮುಂದುವರೆಸಿರುವ ಎಐಸಿಸಿ ಅವರಿಗೆ ದಕ್ಷಿಣ ಕನ್ನಡ ಭಾಗದ ಜವಾಬ್ದಾರಿಯನ್ನು ವಹಿಸಿದೆ.ಮಾಜಿ ಸಚಿವ ಎಸ್ ಆರ್ ಪಾಟೀಲ್ ಅವರಿಗೆ ಕೆಪಿಸಿಸಿ ಕಾರ್ಯಾದ್ಯಕ್ಷ ರೆಂದು ನೇಮಿಸಿ ಉತ್ತರ ಕರ್ನಾಟಕದ ಜವಾಬ್ದಾರಿಯನ್ನು ನೀಡಲಾಗಿದೆ .ವರ್ಕಿಂಗ್ ಕಮೀಟಿಯ ವಿಶೇಷ ಆಹ್ವಾನಿತರನ್ನಾಗಿ ಹಿರಿಯ ಸಂಸದ ಕೆ ಎಚ್ ಮುನಿಯಪ್ಪ ಅವರನ್ನು ,ಇಂಧನ ಸಚಿವ ಡಿ ಕೆ ಶಿವಕುಮಾರನ್ನು ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ನಾಗಿ ನೇಮಿಸಿ ಎಐಸಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ

 

 

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಮಾಜಿ ಸಚಿವ ,ಎಐಸಿಸಿ ನೂತನ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಪಕ್ಷ ವಹಿಸಿದ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿಭಾಯಿಸಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ಪ್ರಯತ್ನಿಸಲಾಗುವುದು ,ಪಕ್ಷದ ನಿರ್ದೆಶನದ ಮೇರೆಗೆ ರಾಜ್ಯಾದ್ಯಂತ ಸಂಚರಿಸಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಕ್ರಮ ಕೈಗೋಳಲಾಗುವುದು ಎಂದು ಹೇಳಿದ್ದಾರೆ . ಇದೇ ಸಂದರ್ಭದಲ್ಲಿ ಅವರ ಆಯ್ಕೆಗೆ ಶ್ರಮಿಸಿದ ಪಕ್ಷದ ಮುಖಂಡರಿಗೆ ಮತ್ತು ಹೈಕಮಾಂಡಗೆ ಅವರು ಅಭಿನಂದನೆ ಸಲಿಸಿದ್ದಾರೆ

Related posts: