RNI NO. KARKAN/2006/27779|Sunday, December 22, 2024
You are here: Home » breaking news » ಘಟಪ್ರಭಾ:ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪ : ಆರೋಪಿಗಳ ಬಂಧನ

ಘಟಪ್ರಭಾ:ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪ : ಆರೋಪಿಗಳ ಬಂಧನ 

ಅತ್ಯಾಚಾರಿ ಆರೋಪಿ ಹನುಮಂತ ದೋತ್ರೆ

ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪ : ಆರೋಪಿಗಳ ಬಂಧನ

ಘಟಪ್ರಭಾ.ಜೂ 25 : ತಾನು ಅವಿವಾಹತ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಕಾಲೇಜಿಗೆ ಹೋಗುವ ಯುವತಿಯನ್ನು ನಂಬಿಸಿದ ನಂತರ ಸ್ನೇಹಿತರ ಜೊತೆ ಸೇರಿ ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಘಟನೆ ಬಗ್ಗೆ ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ರವಿವಾರ ಸಂಜೆ ಪೋಲಿಸರು ಬಂದಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಆರೋಪಿಯು ಶಿಂದಿಕುರಬೇಟ ಗ್ರಾಮದ ಹನುಮಂತ ಅಣ್ಣಪ್ಪ ದೋತ್ರೆ (38) ಎಂದು ತಿಳಿದು ಬಂದಿದೆ. ಈತ ಘಟಪ್ರಭಾದಿಂದ ಹುಕ್ಕೇರಿ ಕಾಲೇಜಿಗೆ ಹೋಗುವ 20 ವಯಸ್ಸಿನ ವಿದ್ಯಾರ್ಥಿಯನ್ನು ನಂಬಿಸಿ ಸುಳ್ಳು ಹೇಳಿ ಮದುಯಾಗುವ ಪ್ರಯತ್ನ ನಡೆಸಿದ್ದಲ್ಲದೇ ಒಂದು ವರ್ಷ ಹಿಂದೆ ಯಾರಿಗೂ ತಿಳಿಯದಂತೆ ಗೋಕಾಕದಲ್ಲಿ ವಿವಾಹ ನೊಂದಿಣಿಗಾಗಿ ಅರ್ಜಿ ಸಲ್ಲಿಸಿದ್ದಾನೆ.
ಆರೋಪಿಯು ಸುಳ್ಳು ಹೇಳುತ್ತಿರುವ ವಿಷಯ ತಿಳಿದ ಕೂಡಲೆ ಅಂಜಿದ ಯುವತಿ ಒಂದು ವರ್ಷದಿಂದ ಕಾಲೇಜಿಗೆ ಹೋಗುವುದನ್ನು ಬಿಟ್ಟು ಮನೆಯಲ್ಲಿಯೆ ಉಳಿದಿದ್ದಳು. ಮನೆಯವರು ಯುವತಿಯನ್ನು ಬೇರೆ ಕಡೆಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸಿ ಕಳೆದ ದಿ.14ರಂದು ಮದುವೆಯ ನಿಶ್ಚಿತಾರ್ಥ ಮಾಡಲು ನಿರ್ಧರಿಸಿದ್ದರು. ಈ ವಿಷಯ ತಿಳಿದು ದಿ.13ರಂದು ಅಮಾವಾಸ್ಯೆ ದಿನ ಯುವತಿ ದೇವರಿಗೆ ನೈವೇದ್ಯ ಕೊಡಲು ಬಂದಾಗ ಆರೋಪಿ ಹನುಮಂತ ತನ್ನ ಸ್ನೇಹಿತರಾದ ಮಾರುತಿ ಹುಲ್ಲೋಳಿ, ಚಿದಾನಂದ ಖಂಡೋಳ ಹಾಗೂ ಬೀರಪ್ಪ ರಾಯಬಾಗ ಎನ್ನುವ ವ್ಯಕ್ತಿಗಳ ಜೊತೆ ಸೇರಿ ಯುವತಿಯನ್ನು ಅಪಹರಿಸಿ ಬೆಳಗಾವಿಗೆ ಕರೆತಂದು ಅತ್ಯಾಚಾರ ಮಾಡಿದ್ದಾನೆ. ನಂತರ ಯುವತಿಯ ಜೊತೆ ಬಲವಂತವಾಗಿ ಪೋಟೊ ತೆಗೆಸಿಕೊಂಡು ಮನೆಯವರಿಗೆ ಹೇಳಿದರೆ ನಿಮ್ಮ ಕುಟುಂಬವನ್ನು ನಾಶ ಮಾಡುವ ಜೀವ ಬೆದರಿಕೆ ಹಾಕಿರುವುದಲ್ಲದೆ ಯುವತಿಯನ್ನು ಮಾರಾಟಕ್ಕೆ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಘಟಪ್ರಭಾ ಪೊಲೀಸರು ಕಳೆದ ಎರಡು ದಿನಗಳಿಂದ ತಲೆಮರಿಸಿಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮೂಡಲಗಿ ಸಿಪಿಐ, ಘಟಪ್ರಭಾ ಪಿಎಸ್‍ಐ, ಹಾಗೂ ಸಿಬ್ಬಂದಿ ವರ್ಗ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿ ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.

Related posts: