RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ:ಅಂತರಾಷ್ಟ್ರೀಯ ಸಮಾಜವಾದಿ ಸಮ್ಮೇಳನಕ್ಕೆ ಅರವಿಂದ ದಳವಾಯಿ ಆಯ್ಕೆ

ಮೂಡಲಗಿ:ಅಂತರಾಷ್ಟ್ರೀಯ ಸಮಾಜವಾದಿ ಸಮ್ಮೇಳನಕ್ಕೆ ಅರವಿಂದ ದಳವಾಯಿ ಆಯ್ಕೆ 

ಅರವಿಂದ ದಳವಾಯಿ

ಅಂತರಾಷ್ಟ್ರೀಯ ಸಮಾಜವಾದಿ ಸಮ್ಮೇಳನಕ್ಕೆ ಅರವಿಂದ ದಳವಾಯಿ ಆಯ್ಕೆ

ಮೂಡಲಗಿ ಜೂ 25 : ನೇಪಾಳದ ರಾಜಧಾನಿ ಕಟ್ಮಾಂಡುವಿನಲ್ಲಿ ಜೂನ 28 ರಿಂದ ಮೂರು ದಿನಗಳು ನಡೆಯಲಿರುವ ಅಂತರಾಷ್ಟ್ರೀಯ ಸಮಾಜವಾದಿ ಸಮ್ಮೇಳನಕ್ಕೆ ಭಾರತೀಯ ಪ್ರತಿನಿಧಿಯಾಗಿ ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ ಆಯ್ಕೆಯಾಗಿದ್ದಾರೆ. ಪ್ರಜಾಸತ್ತಾತ್ಮಕ ಸಮಾಜವಾದಿ ಸಂಘಟಣೆ, ಮನಿಲಾ ಇವರು ಅಂತರಾಷ್ಟ್ರೀಯ ಸಮಾಜವಾದಿ ಸಮ್ಮೇಳನವನ್ನು ಹಮ್ಮಿಕೊಂಡಿದ್ದು, ಸಮ್ಮೇಳನದಲ್ಲಿ ಸುಮಾರು 75 ದೇಶಗಳ ಸಮಾಜವಾದಿ ಮುಖಂಡರು ಬಾಗವಹಿಸುವರು. ತಮ್ಮ ವಿದ್ಯಾರ್ಥಿ ದೆಶೆಯಿಂದಲೂ ಸಮಾಜವಾದಿ ಆಂದೋಲನದೊಂದಿಗೆ ಗುರುತಿಸಿಕೊಂಡಿರುವ ದಳವಾಯಿಯವರು ಸಮ್ಮೇಳನದಲ್ಲಿ ಭಾರತೀಯ ಸಮಾಜವಾದಿ ಆಂದೋಲನ : ಹೊಸ ಸವಾಲುಗಳು ಮತ್ತು ಸಾಧ್ಯತೆಗಳು ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಲಿದ್ದಾರೆ.

Related posts: