ಗೋಕಾಕ:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ಆಗ್ರಹ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ಆಗ್ರಹ
ಗೋಕಾಕ ಜೂ 26 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ನೂರಾರು ಕಾರ್ಯಕರ್ತರು ಮಂಗಳವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಒಂದು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿ ತಹಶೀಲದಾರರಿಗೆ ಮನವಿ ಸಲ್ಲಿಸಿದರು.
ಅಧಿಕಾರಕ್ಕೆ ಬಂದ ತಕ್ಷಣ ರೈತರ ಸಾಲ ಮನ್ನಾ ಮಾಡುತ್ತೇನೆಂದು ಹೇಳಿದ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದರೂ ಕೂಡಾ ಇನ್ನೂ ವರೆಗೆ ರೈತರ ಸಾಲ ಮನ್ನಾ ಮಾಡದೇ ಮೀನಾಮೇಷವೆಣಿಸುತ್ತಿರುವುದು ರೈತರನ್ನು ಸಂಕಷ್ಷಕ್ಕೆ ದೂಡಿದಂತಾಗಿದೆ. ಶೀಘ್ರದಲ್ಲಿಯೇ ರೈತರ ಸಾಲ ಮನ್ನಾಡದೇ ಹೋದರೆ ರಾಜ್ಯಧಾತಂತ್ಯ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡ ಹಾಗೂ ಬಲದಂಡೆ ಕಾಲುವೆಗಳಿಗೆ ನೀರು ಹರಿಸುವ ಮೂಲಕ ಕುಡಿಯುವ ನೀರು ಹಾಗೂ ರೈತರ ಬೆಳೆಗಳಿಗೆ ನೀರು ಒದಗಿಬೇಕು. ಗೋಕಾಕ ತಾಲೂಕಿನ ಎಲ್ಲ ಅಧಿಕಾರಿಗಳ ಸಭೆಯನ್ನು ಕರೆದು ರೈತರ ಕುಂದುಕೊರತೆಯ ಸಭೆಯನ್ನು ಏರ್ಪಡಿಸಿ ರೈತರ ಸಮಸ್ಯೆಗಳನ್ನು ಬಗೆ ಹರಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಗಣಪತಿ ಈಳಿಗೇರ, ತಾಲೂಕಾಧ್ಯಕ್ಷ ಮುತ್ತೆಪ್ಪ ಬಾಗನ್ನವರ, ಮಹಾದೇವ ಗುಡೇರ, ಮುತ್ತೆಪ್ಪ ಕುರಬರ, ದೇವೆಂದ್ರ ಮಕ್ಸಾರ, ಮಹಾಂತೇಶ ರಡರಟ್ಟಿ, ಬಸವರಾಜ ಮ್ಯಾಕನ್ನವರ, ಸಿದ್ದಲಿಂಗ ಪೂಜೇರಿ, ದೀಪಕ ಗದಾಡಿ, ಗೋಪಾಲ ಕಸ್ತೂರಿ, ಪರಸಪ್ಪ ಗದಾಡಿ, ಅಶೋಕ ಮಡಿವಾಳರ, ಶಿವಾನಂದ ಈಳಿಗೇರ, ಪ್ರಕಾಶ ಹಾಲನ್ನವರ, ಕುಮಾರ ತಿಗಡಿ, ಮಲ್ಲಿಕಾರ್ಜುನ ಈಳಿಗೇರ, ಮಂಜುನಾಥ ಝಲ್ಲಿ, ಸಂಗೀತಾ ಕದಮ್ ಮುತ್ತವ್ವ ಬಾಣಸಿ, ಸುಶೀಲವ್ವ ನಡಟ್ಟಿ, ಯಮನವ್ವ ಹಿಡಕಲ್ ಮಹಾನಂದಾ ಹಿರೇಮಠ, ನಿರ್ಮಲಾ ಕುರಬೇಟ, ಸೇರಿದಂತೆ ನೂರಾರು ಮಹಿಳಾ ಕಾರ್ಯಕರ್ತೆಯರು ಇದ್ದರು.