ಗೋಕಾಕ:ಪರಿಹಾರ ಧನದ ಚೆಕ್ ವಿತರಣೆ.
ಪರಿಹಾರ ಧನದ ಚೆಕ್ ವಿತರಣೆ
ಗೋಕಾಕ ಜೂ 27 : ಆತ್ಮಹತ್ಯೆ ಮಾಡಿಕೊಂಡ ಹುಣಶ್ಯಾಳ ಪಿಜಿ ಗ್ರಾಮದ ರೈತ ಬಸವರಾಜ ಕಡ್ಡಿ ಕುಟುಂಬ ವರ್ಗಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದಿಂದ 5 ಲಕ್ಷ ರೂ.ಗಳ ಪರಿಹಾರ ಧನದ ಚೆಕ್ ವಿತರಿಸಿದರು.
ಮೃತರ ಪತ್ನಿ ಈರವ್ವಾ ಕಡ್ಡಿ ಅವರಿಗೆ ಇಲ್ಲಿಯ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ಬುಧವಾರದಂದು ಈ ಚೆಕ್ನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಸಹಾಯಕ ಕೃಷಿ ನಿರ್ದೇಶಕ ಎ.ಡಿ. ಸವದತ್ತಿ, ಸಹಾಯಕ ಕೃಷಿ ಅಧಿಕಾರಿಗಳಾದ ಬಿ.ಎಸ್. ಕೊಳದೂರ, ಎ.ವಾಯ್. ಮೇಸ್ತ್ರಿ, ಕೃಷಿ ಅಧಿಕಾರಿ ಎಚ್.ಕೆ. ಜಮಾದಾರ ಉಪಸ್ಥಿತರಿದ್ದರು.