RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಬಸವಾದಿ ಶರಣರ ವಚನಗಳು ಮಹತ್ತರ ಪಾತ್ರವಹಿಸುತ್ತಿವೆ : ಶ್ರೀ ಶಿವಾನಂದ ಮಹಾಸ್ವಾಮಿ

ಗೋಕಾಕ:ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಬಸವಾದಿ ಶರಣರ ವಚನಗಳು ಮಹತ್ತರ ಪಾತ್ರವಹಿಸುತ್ತಿವೆ : ಶ್ರೀ ಶಿವಾನಂದ ಮಹಾಸ್ವಾಮಿ 

ನಗರದ ಶೂನ್ಯ ಸಂಪಾದನಮಠದಲ್ಲಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ 46ನೇ ಹುಟ್ಟು ಹಬ್ಬದ ನಿಮಿತ್ಯ ಭಕ್ತಾಧಿಗಳು ಅವರನ್ನು ಸತ್ಕರಿಸಿದರು.

ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಬಸವಾದಿ ಶರಣರ ವಚನಗಳು ಮಹತ್ತರ ಪಾತ್ರವಹಿಸುತ್ತಿವೆ : ಶ್ರೀ ಶಿವಾನಂದ ಮಹಾಸ್ವಾಮಿ

ಗೋಕಾಕ ಜೂ 29 : ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಬಸವಾದಿ ಶರಣರ ವಚನಗಳು ಮಹತ್ತರ ಪಾತ್ರವಹಿಸುತ್ತಿವೆ ಎಂದು ಹಂದಿಗುಂದ ಶ್ರೀ ಸಿದ್ದೇಶ್ವರಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ಗುರುವಾರದಂದು ರಾತ್ರಿ ನಗರದ ಶೂನ್ಯ ಸಂಪಾದನಮಠದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಹಾಗೂ ವೀರಶೈವ ಜಾಗೃತ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹುಣ್ಣಿಮೆ ನಿಮಿತ್ಯ ಹಮ್ಮಿಕೊಂಡ 124ನೇ ಶಿವಾನುಭವಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ವಚನ ಸಾಹಿತ್ಯ ಕನ್ನಡದ ಉಪನಿಷತ್ತುಗಳಾಗಿ ಅದ್ಭುತವಾದ ಜ್ಞಾನ ಸಂಪತ್ತನ್ನು ಜನರಿಗೆ ನೀಡುವುದರೊಂದಿಗೆ ಅಧ್ಯಾತ್ಮಿಕ ಜಾಗೃತಿಯನ್ನು ಮೂಡಿಸುತ್ತಿವೆ. ಮಕ್ಕಳಿಗೂ ಶರಣರ ವಚನಗಳನ್ನು ತಿಳಿಸಿ ಶರಣ ಸಂಸ್ಕಂತಿ  ಬೆಳೆಸುವಂತೆ ಹೇಳಿದರು.
ಇದೇ ಸಂದರ್ಭದಲ್ಲಿ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ 46ನೇ ಹುಟ್ಟು ಹಬ್ಬದ ನಿಮಿತ್ಯ ಭಕ್ತಾಧಿಗಳು ಅವರನ್ನು ಸತ್ಕರಿಸಿದರು. ನಂತರ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದ ಅವರು ಬಡರೋಗಿಗಳ ಹಾಗೂ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದೇ ನಿಜವಾದ ಉಡುಗೊರೆಯಾಗಿದೆ ಇಂತಹ ಸಾಮಾಜಿಕ ಕಾರ್ಯಗಳನ್ನು ಮಾಡುವಂತೆ ಭಕ್ತರಿಗೆ ಕರೆ ನೀಡಿದರು.
ವೇದಿಕೆ ಮೇಲೆ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ, ವೀರಶೈವ ಜಾಗೃತ ಮಹಿಳಾ ವೇದಿಕೆ ಅಧ್ಯಕ್ಷೆ ಸುಜಾತಾ ಮುಚ್ಚಂಡಿ ಹಿರೇಮಠ, ಆನಂದ ಗೋಟಡಕಿ, ಪ್ರಸನ್ನ ಪಾಟೀಲ,ಮಹಾದೇವಿ ಹಿರೇಮಠ ಇದ್ದರು.

Related posts: