RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ :ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯ ಸದಸ್ಯರಿಗೆ ಶೇ 19 ರಷ್ಟು ಲಾಭಾಂಶ ವಿತರಿಸಲಾಗುವುದು : ಈರಣ್ಣ ಕಡಾಡಿ

ಮೂಡಲಗಿ :ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯ ಸದಸ್ಯರಿಗೆ ಶೇ 19 ರಷ್ಟು ಲಾಭಾಂಶ ವಿತರಿಸಲಾಗುವುದು : ಈರಣ್ಣ ಕಡಾಡಿ 

ಸಮೀಪದ ಕಲ್ಲೋಳಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯ ಸರ್ವಸಾಧಾರಣ ಸಭೆಯಲ್ಲಿ ಸಹಕಾರಿಯ ಅಧ್ಯಕ್ಷ ಈರಣ್ಣ ಕಡಾಡಿ ಮಾತನಾಡುತ್ತಿರುವುದು.

ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯ ಸದಸ್ಯರಿಗೆ ಶೇ 19 ರಷ್ಟು ಲಾಭಾಂಶ ವಿತರಿಸಲಾಗುವುದು : ಈರಣ್ಣ ಕಡಾಡಿ

ಮೂಡಲಗಿ ಜೂ 30 : ಸಮೀಪದ ಕಲ್ಲೋಳಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯ ಸದಸ್ಯರಿಗೆ ಶೇ 19 ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ಸಹಕಾರಿಯ ಅಧ್ಯಕ್ಷ ಈರಣ್ಣ ಕಡಾಡಿ ಘೋಷಿಸಿದರು.
ಶನಿವಾರ ಸಹಕಾರಿಯ ಸಭಾ ಭವನದಲ್ಲಿ ನಡೆದ 2017-18 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸಕ್ತ ಸಾಲಿನಲ್ಲಿ ಸಹಕಾರಿಯು ಸದಸ್ಯರ ಹಾಗೂ ಸಿಬ್ಬಂದಿಗಳ ಸಹಕಾರದಿಂದ ರೂ-33 ಲಕ್ಷ ನಿವ್ಹಳ ಲಾಭವಾಗಿದೆ ಎಂದರು.
2197 ಸದಸ್ಯರು, ರೂ-10.39 ಲಕ್ಷ ಶೇರ ಬಂಡವಾಳ ಹೊಂದಿದ್ದು ಗ್ರಾಹಕರಿಂದ ಒಟ್ಟು ಠೇವುಗಳು ರೂ- 8.02 ಕೋಟಿ ಸಂಗಹ್ರವಿದ್ದು, ಗ್ರಾಹಕರಿಗೆ ವಿವಿಧ ಸಾಲಗಳ ಮೇಲೆ ರೂ-8.35 ಕೋಟಿ ಸಾಲ ವಿತರಿಸಲಾಗಿದೆ ಎಂದ ಅವರು ಸಹಕಾರಿಯೊಂದಿಗೆ ಸತತ ಸಂಪರ್ಕ ಹೊಂದುವ ಮೂಲಕ ವ್ಯವಹಾರ ಮಾಡಬೇಕು. ಗ್ರಾಹಕರೇ ದೇವರು ಎಂದು ಸಿಬ್ಬಂದಿಗಳಿಗೆ ವಿವರಿಸಿದರು.
ಸಹಕಾರಿಯು ಕಡಿಮೆ ಬಡ್ಡಿ ದರದಲ್ಲಿ ಸಾಲಗಳನ್ನು ನೀಡುತ್ತಿದ್ದು, ಆರ್ ಟಿ ಜಿ ಎಸ್ ಮತ್ತು ನೆಪ್ಟ್, ಡಿ ಡಿ, ಸೌಲಭ್ಯ ಸದಸ್ಯರಿಗೆ ನೀಡುತ್ತಿದ್ದು, ಮಹಿಳಾ ಸ್ವಸಹಾಯ ಸಂಘಗಳಿಗೆ ಸಣ್ಣ-ಸಣ್ಣ ವ್ಯಾಪಾರ ಮಾಡಿಕೊಂಡು ತಮ್ಮ ಬದುಕನ್ನು ಸಮೃದ್ದಿ ಮಾಡಿಕೊಂಡು ಆರ್ಥಿಕವಾಗಿ ಸಭಲಗೊಳ್ಳಲು ಹೈನುಗಾರಿಕೆಯಲ್ಲಿ ಹೆಚ್ಚು-ಹೆಚ್ಚು ತೊಡಗಿಕೋಳ್ಳಬೇಕು ಹಾಗೂ ಸಮಾಜದ ಪ್ರತಿಯೊಬ್ಬರು ಮುಖ್ಯ ವಾಹಿಣಿಗೆ ಬರಲು ಸಾಲ ನೀಡುತ್ತಿದ್ದೇವೆ ಎಂದರು.
ಸಹಕಾರಿ ಸಂಸ್ಥೆಗಳು ಬೆಳೆಯಲ್ಲಿಕ್ಕೆ ಗ್ರಾಹಕರು ನಮ್ಮ ಸಂಸ್ಥೆಯೊಂದಿಗೆ ಉತ್ತಮ ವ್ಯವಹಾರವನ್ನು ಮಾಡುತ್ತಿರುವುದು ಸಂಸ್ಥೆಯು ತಮ್ಮನ್ನು ಅಭಿನಂದಿಸುತ್ತದೆ. ಇದರೊಂದಿಗೆ ಹೊಸದಾಗಿ ವ್ಯವಹಾರ ನಡಸಲ್ಲಿಕ್ಕೆ ಹೊಸ ಗ್ರಾಹಕರನ್ನು ಸಹಕಾರಿಯೊಂದಿಗೆ ಜೋಡಣೆ ಮಾಡಲು ವಿನಂತಿಸಿದರು.
ಸಂಸ್ಥೆಯ ಉಪಾಧ್ಯಕ್ಷರಾದ ರಾಜಪ್ಪ ಗೋಸಬಾಳ, ನಿರ್ದೇಶಕಾರ ಶ್ರೀಶೈಲ ತುಪ್ಪದ, ಬಾಳಪ್ಪ ಸಂಗಟಿ, ಪರಪ್ಪ ಮಳವಾಡ, ಸಹದೇವ ಹೆಬ್ಬಾಳ, ಶಿವಪ್ಪ ವ್ಯಾಪಾರಿ, ಮಾರುತಿ ಮಕ್ಕಳಗೇರಿ, ಸಿದ್ದಪ್ಪ ಹೆಬ್ಬಾಳ, ಸೋಮನಿಂಗ ಹಡಗಿನಾಳ,ಮಲ್ಲಿಕಾರ್ಜುನ ಹುಲೆನ್ನವರ, ಬೆಟಗೇರಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಈರಪ್ಪ ದೇಯಣ್ಣವರ, ಉಪಾಧ್ಯಕ್ಷ ಮಾಯಪ್ಪ ಬಾಣಸಿ, ಸದಸ್ಯರಾದ ಶ್ರೀಕಾಂತ ಕರೆಪ್ಪಗೋಳ, ಈಶ್ವರ ಮುಧೋಳ, ರಾಮಪ್ಪ ಮುಧೋಳ, ಬಸಪ್ಪ ಗೌಡರ, ಸಿದ್ದನಗೌಡ ಪಾಟೀಲ, ಗಂಗಯ್ಯ ಹಿರೇಮಠ, ಮಹಾದೇವ ಇಟ್ನಾಳ, ರಮೇಶ ಬ್ಯಾಗಿ, ಅಜ್ಜಪ್ಪ ಪೇದನ್ನವರ, ಬಾಳಪ್ಪ ತಡಸಿ, ಅಥಿತಿ ಗ್ರಾಹಕರಾಗಿ ಮಲ್ಲಪ್ಪ ಖಾನಗೌಡ್ರ, ಹಣಮಂತ ಪರಕನಟ್ಟಿ, ಅಪ್ಪಾಸಾಹೇಬ ಮಳವಾಡ, ಅಡಿವೇಪ್ಪ ಕುರಬೇಟ,ಭೀಮಶಿ ಚೌಗಲಾ, ಅಜೀತ ಪಾಟೀಲ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
ಪ್ರಧಾನ ವ್ಯವಸ್ಥಾಪಕ ಹಣಮಂತ ಕಲಕುಟ್ರಿ ಸ್ವಾಗತಿಸಿದರು. ಪರಪ್ಪ ಗಿರೆಣ್ಣವರ ವಾರ್ಷಿಕ ವರದಿ ಓದಿದರು. ಶಂಕರ ಕೌಜಲಗಿ ಕಾರ್ಯಕ್ರಮ ನಿರೂಪಿಸಿದರು. ಹಣಮಂತ ಪಾಟೀಲ ವಂದಿಸಿದರು.

Related posts: