ಖಾನಾಪುರ : ಸಾಲಭಾಧೆ ತಾಳಲಾರದೆ ಇಟಗಿ ಗ್ರಾಮದ ರೈತ ವಿಷ ಸೇವಿಸಿ ಆತ್ಮಹತ್ಯೆ
ಸಾಲಭಾಧೆ ತಾಳಲಾರದೆ ಇಟಗಿ ಗ್ರಾಮದ ರೈತ ವಿಷ ಸೇವಿಸಿ ಆತ್ಮಹತ್ಯೆ
ಖಾನಾಪುರ ಜೂ 30 : ತಾಲೂಕಿನ ಇಟಗಿ ಗ್ರಾಮದ ರೈತ ಮಲ್ಲಿಕಾರ್ಜುನ ಸುಭಾಷ್ ಶಿಲಿ (33) ಎಂಬಾತ ಸಾಲಭಾಧೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇತನು ಮೂಲತಃ ಇಟಗಿ ಗ್ರಾಮದವನಾಗಿದ್ದೂ ಇದ್ದ 4 ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ , ಕಳೆದ ವರ್ಷ ರೈತನು 4 ಬೊರವೆಲ್ ಕೊರೆಯಿಸಿದ್ದ ನೀರು ಬಿಳದೆ ಇರುವುದರಿಂದ ಹಾಗೂ 3 – 4 ವರ್ಷಗಳಿಂದ ಮಳೆ , ಬೆಳೆ ಸರಿಯಾಗಿ ಬಾರದೆ ಇರುವುದರಿಂದ ಬುಧವಾರ ಮನನೊಂದು ಸಾಯಬೇಕೆಂದು ವಿಷ ಕುಡಿದಿದ್ದ. ವಿಷ ಕುಡಿದಿದ್ದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೇ ಇಂದು ಶನಿವಾರ ಬೆಳಿಗ್ಗೆ ಜಾವ ೫ಗಂಟೆಗೆ ಸಾವನ್ನಪ್ಪಿದ್ದಾನೆಂದು ಮಾಹಿತಿ ತಿಳಿದು ಬಂದಿದೆ.
ಸಿಂಡಿಕೇಟ್ ಬ್ಯಾಂಕ್ ಸಾಲ- 1ಲಕ್ಷ , ಕೈಗಡ ಸಾಲ- 3ಲಕ್ಷ
ಪಿಕೆಪಿಎಸ್- 20 ಸಾವಿರ ಮತ್ತು ಬಂಗಾರದ ಸಾಲ- 50 ಸಾವಿರ ಹೀಗೆ ಒಟ್ಟಾರೆ 4ಲಕ್ಷ 70ಸಾವಿರ ಸಾಲವನ್ನು ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ