ಗೋಕಾಕ:ಫೀ ಮತ್ತು ಡೋನೆಶನ್ ಪಡೆಯುವ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದತಿಗೆ : ಕರವೇ ಆಗ್ರಹ
ಫೀ ಮತ್ತು ಡೋನೆಶನ್ ಪಡೆಯುವ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದತಿಗೆ : ಕರವೇ ಆಗ್ರಹ
ಗೋಕಾಕ ಜೂ 1: ಫೀ ಮತ್ತು ಡೋನೆಶನ್ ತಗೆದುಕೊಳ್ಳುವ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದು ಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತ್ರತ್ವದಲ್ಲಿಂದು ಪ್ರತಿಭಟನೆ ನಡೆಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರ ಮುಖಾಂತರ ಶಿಕ್ಷಣ ಸಚಿವರಿಗೆ ಮನವಿ ಅರ್ಪಿಸಿದರು.
ಇಂದು ಮುಂಜಾನೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸೇರಿದ ಕರವೇ ಕಾರ್ಯಕರ್ತರು ಡೋನೆಶನ್ ಮತ್ತು ಪೀ ತಗೆದುಕೊಳ್ಳುವ ಶಾಲಾ ಸಂಸ್ಥೆಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಕಳೆದ ಹತ್ತಾರು ವರ್ಷಗಳಿಂದ ಗೋಕಾಕ ನಗರದಲ್ಲಿ ಶಂಕರಲಿಂಗ ಸಂಸ್ಥೆಯ ಮಟ್ಟಿಕಲ್ಲಿ ಕನ್ನಡ ಪ್ರಾಥಮಿಕ ಶಾಲೆ, ಗೋಕಾಕ ಶಿಕ್ಷಣ ಸಂಸ್ಥೆಯ ಆದರ್ಶ ಕನ್ನಡ ಪ್ರಾಥಮಿಕ ಶಾಲೆ, ಲಕ್ಷ್ಮೀ ಎಜ್ಯುಕೇಷನ್ ಟ್ರಸ್ಟ್‍ನ ಎಲ್.ಇ.ಟಿ.ಪ್ರಾಥಮಿಕ ಶಾಲೆ, ಸ್ವಾದದ ಕೇಸರಿ ಪಾಯಸಾಗರ ಶಿಕ್ಷಣ ಸಂಸ್ಥೆ ಕನ್ನಡ ಪ್ರಾಥಮಿಕ ಶಾಲೆ, ತಂಜೀಮ ಶಿಕ್ಷಣ ಸಂಸ್ಥೆಯ ಅಬುಲ್ ಕಲಾಂ ಪ್ರಾಥಮಿಕ ಶಾಲೆ, ನಾಯಕ ಸ್ಟುಡೆಂಟ್ ಫಡರೇಶನ್ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆ, ನ್ಯಾಶನಲ್ ಎಜ್ಯುಕೇಶನ್ ಸೊಸೈಟಿಯ ಎನ್.ಇ.ಎಸ್. ಪ್ರಾಥಮಿಕ ಶಾಲೆ ಸೇರಿದಂತೆ ಇನ್ನಿತರ ಸರ್ಕಾರದ ಅನುದಾನ ಪಡೆದಿರುವ ಸರಕಾರಿ ಅನುದಾನಿತ ಶಾಲೆಗಳಲ್ಲಿ ಫೀ ಮತ್ತು ಡೋನೆಶನ್ ನೆಪದಲ್ಲಿ ಪ್ರತಿ ವರ್ಷ ಪಾಲಕರಿಂದ ಲಕ್ಷಾಂತ ರೂಪಾಯಿಯನ್ನು ದೋಚುತ್ತಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಮೌಖಿಕವಾಗಿ ದೂರು ನೀಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ನಗರದ ನ್ಯಾಶನಲ್ ಎಜ್ಯುಕೇಶನ್ ಸೊಸಾಯಿಟಿ ಒಂದು ಬಿಟ್ಟರೆ ಉಳಿದ ಎಲ್ಲಾ ಅನುದಾನಿತ ಶಾಲೆಗಳಲ್ಲಿ ಬೇಕಾಬಿಟ್ಟಿ ಹಣ ಸುಲಿಗೆ ನಡೆದಿದೆ. ಇದರಿಂದ ಪಾಲಕರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಪ್ರವೇಶ ಶುಲ್ಕ, ಆಟಗಳ ಫೀ, ಆರೋಗ್ಯ ಪರೀಕ್ಷಾ ಫೀ, ವಿದ್ಯಾರ್ಥಿಗಳ ಕಲ್ಯಾಣ ನಿಧಿ, ಶಿಕ್ಷಕರ ಸಹಾಯ ನಿಧಿ, ಫಾರ್ಮ ಫೀ, ಓದುವ ಕೊಣೆಗಳ ಫೀ, ಪ್ರಾತ್ಯಾಕ್ಷಿಕೆಗಳ ಶುಲ್ಕ, ಅಭಿವೃದ್ಧಿ ನಿಧಿ, ಇನ್ಸುರೆನ್ಸ್ , ಇತರೆ ಎಂಬ ನೆಪಗಳ ಹೇಳಿ ರಸೀದಿ ಪ್ರೀಂಟ್ ಮಾಡಿ ಪಾಲಕರಿಂದ ಸಾವಿರಾರು ಹಣ ವಸೂಲಿ ಮಾಡಿ ಫೀ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿದ್ದಾರೆ. ಇದರಿಂದ ಸರಕಾರಿ ಅನುದಾನಿತ ಶಾಲೆಗಳಲ್ಲಿ ಪ್ರವೇಶ ಪಡೆಯ ಬಯಸುವ ಪಾಲಕರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ದಯಾಳುಗಳಾದ ತಾವುಗಳು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಷಣದಲ್ಲಿಯೇ ಕಾರ್ಯಪ್ರವೃತ್ತರಾಗಿ ಸರಕಾರದ ಅನುದಾನ ಪಡೆದು ಎಲ್ಲ ಸಹಾಯ ಸವಲತ್ತುಗಳನ್ನು ಪಡೆದು ಬಡ ಸಾರ್ವಜನಿಕರಿಂದ ಲಕ್ಷಾಂತರ ರೂ ಲೂಟಿ ಮಾಡುತ್ತಿರುವ ನಗರದ ಅನುದಾನಿತ ಶಿಕ್ಷಣ ಸಂಸ್ಥೆಗಳ ಮೇಲೆ ಶಿಕ್ಷಣ ಇಲಾಖೆ ನಿರ್ದಾಕ್ಷಣಿಯ ಕ್ರಮ ಕೈಗೊಂಡು ಅವುಗಳ ಮಾನ್ಯತೆ ರದ್ದು ಪಡಿಸಲು ಕಠಿಣ ಕ್ರಮ ಜರುಗಿಸಿ ಬಡ ಪಾಲಕರು ಪಡುತ್ತಿರುವ ಗೋಳಿನಿಂದ ಪಾರು ಮಾಡಬೇಕೆಂದು ಕರವೇ ಮನವಿಯಲ್ಲಿ ವಿನಂತಿಸಿದೆ. ಇದಕ್ಕೆ ತಪ್ಪಿದ್ದಲ್ಲಿ ಮುಂಬರುವ ದಿನಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಬೀಗ ಜಡಿದು ಉಗ್ರರೂಪದಲ್ಲಿ ಪ್ರತಿಭಟನೆ ನಡೆಸಲಾಗುವದೆಂದು ಈ ಮನವಿ ಮೂಲಕ ಎಚ್ಚರಿಸಲಾಗಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಬಿ.ಇ.ಓ. ಜಿ.ಬಿ.ಬಳಗಾರ ತಕ್ಷಣದಲ್ಲಿಯೇ ಎಲ್ಲ ಅನುದಾನಿತ ಶಾಲೆಗಳಿಗೆ ಕಾರಣ ಕೇಳಿ ನೋಟಿಸು ಜಾರಿ ಮಾಡಲಾಗುವುದು ಇದಕ್ಕೆ ಸ್ಪಂಧಿಸದಿದ್ದರೆ ಶಾಲಾ ಮಾನ್ಯತೆಯನ್ನು ರದ್ದು ಮಾಡಲು ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಸಂಚಾಲಕ ಕೃಷ್ಣಾ ಖಾನಪ್ಪನವರ ಕಾರ್ಯದರ್ಶಿ ಸಾಧಿಕ ಹಲ್ಯಾಳ ಉಪಾಧ್ಯಕ್ಷರಾದ ದೀಪಕ ಹಂಜಿ ಬಸವರಾಜ ಬೇಡರಟ್ಟಿ, ತಾ. ಸಂಚಾಲಕರಾದ ಹನೀಪಸಾಬ ಸನದಿ, ರೆಹಮಾನ ಮೊಕಾಶಿ, ರಮೇಶ ಕಮತಿ ಅರಭಾಂವಿ ಬ್ಲಾಕ್ ಉಪಾಧ್ಯಕ್ಷ ಮಹಾದೇವ ಮಕ್ಕಳಗೇರಿ, ಶೆಟ್ಟೆಪ್ಪಾ ಗಾಡಿವಡ್ಡರ, ಭರಮಣ್ಣ ಗೊರಗುದ್ದಿ, ಕೆಂಪಣ್ಣಾ ಕಡಕೋಳ, ಕಲ್ಲೊಳೆಪ್ಪ ಗಾಡಿವಡ್ಡರ, ಅಮೀರ ಜಗದಾಳೆ, ರಾಮ ಕುಡ್ಡೇಮಿ, ರಾಮಪ್ಪ ಸಣ್ಣಲಗಮನವರ, ಮಲ್ಲಪ್ಪ ತಲೆಪ್ಪಗೋಳ, ಮಲ್ಲು ಸಂಪಗಾರ, ಪ್ರವೀಣ ಗುಡ್ಡಾಕಾಯು, ಬಸು ಗಾಡಿವಡ್ಡರ, ಸಂಜು ಗಾಡಿವಡ್ಡರ, ಮುತ್ತೆಪ್ಪ ಘೋಡಗೇರಿ, ರಾಮ ಪಿಡಾಯಿ, ರಾಮ ಕೊಂಗನೊಳ್ಳಿ, ರಾಮ ಕಟ್ರಿ, ಶಿವಪ್ಪ ಗಾಡಿವಡ್ಡರ, ಅಪ್ಪಯ್ಯ ತಿಗಡಿ, ರಾಜು ಹರಿಜನ, ಬಸವರಾಜ ಹರಿಜನ, ಕಾಮೇಶ ಹಂಚಿನಮನಿ, ಸೇರಿದಂತೆ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು