ಘಟಪ್ರಭಾ:ಸೇತುವೆಯ ಕಾಮಗಾರಿಯನ್ನು ಕೂಡಲೆ ಪ್ರಾರಂಭಿಸಿಲಾಗುವದು : ಕೆ.ಬಿ.ಪಾಟೀಲ
ಸೇತುವೆಯ ಕಾಮಗಾರಿಯನ್ನು ಕೂಡಲೆ ಪ್ರಾರಂಭಿಸಿಲಾಗುವದು : ಕೆ.ಬಿ.ಪಾಟೀಲ
ಘಟಪ್ರಭಾ ಜು 4 : ಮೃತ್ಯುಂಜಯ ವೃತ್ತದಿಂದ ಬಡಿಗವಾಡ ಕಡೆಗೆ ಹೋಗುವ ರಸ್ತೆ ಮದ್ಯಲ್ಲಿರುವ ರಝಾ ಕಾಂಪ್ಲೆಕ್ಸ್ ಹತ್ತಿರ ವಿರುವ ಸೇತುವೆ ಅಪಘಾತಕ್ಕೆ ಬಾಯಿ ತೆರೆದು ನಿಂತಿರುವ ಕುರಿತು ಪತ್ರಿಕೆಯಲ್ಲಿ ಪ್ರಕಟಗೊಂಡ ಸುದ್ಧಿಗೆ ಎಚ್ಚೆತ್ತಕೊಂಡ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಸೇತುವೆಯನ್ನು ಪರಿಶೀಲಿಸಿದರು.
ಮಲ್ಲಾಪೂರ ಪಿ.ಜಿ ಪ.ಪಂ ಮುಖ್ಯಾಧಿಕಾರಿ ಕೆ.ಬಿ.ಪಾಟೀಲ, ಅಭಿಯಂತರರಾದ ಎಮ್.ಎಸ್ ತೇಲಿ ಸೇತುವೆ ಅಪಾಯಕಾರಿ ಹಂತದಲ್ಲಿರುವುದನ್ನು ಮನಗಂಡು ಪಿ.ಡಬ್ಲ್ಯೂ.ಡಿ ಅಧಿಕಾರಿಗಳುನ್ನು ಸಂಪರ್ಕಿಸಿ ಕೂಡಲೆ ಕಾಮಗಾರಿಯನ್ನು ಪ್ರಾರಂಭಿಸಿಲು ತಿಳಿಸಿದರು. ಸ್ಥಳಕ್ಕೆ ಬಂದು ಪರಿಶೀಲಿಸಿ ಯೋಗ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಿ.ಡಬ್ಲ್ಯೂ.ಡಿ ಸಹಾಯಕ ಅಭಿಯಂತರರಾದ ನಾಗಾಭರಣ ಅವರು ತಿಳಿಸಿದ್ದಾರೆ.