RNI NO. KARKAN/2006/27779|Friday, December 13, 2024
You are here: Home » breaking news » ಘಟಪ್ರಭಾ:ವೈದ್ಯರಾದವರು ಹಣಗಳಿಕೆಗೆ ಆಸೆ ಪಡಬಾರದು : ಡಾ|| ಸುರೇಶ ಎನ್.ದುಗ್ಗಾಣಿ ಸಲಹೆ

ಘಟಪ್ರಭಾ:ವೈದ್ಯರಾದವರು ಹಣಗಳಿಕೆಗೆ ಆಸೆ ಪಡಬಾರದು : ಡಾ|| ಸುರೇಶ ಎನ್.ದುಗ್ಗಾಣಿ ಸಲಹೆ 

ವೈದ್ಯರಾದವರು ಹಣಗಳಿಕೆಗೆ ಆಸೆ ಪಡಬಾರದು : ಡಾ|| ಸುರೇಶ ಎನ್.ದುಗ್ಗಾಣಿ ಸಲಹೆ

ಘಟಪ್ರಭಾ ಜು 4 : ವೈದ್ಯರಾದವರು ಹಣಗಳಿಕೆಗೆ ಆಸೆ ಪಡಬಾರದು. ತಮ್ಮ ಕರ್ತವ್ಯವನ್ನು ಅತೀ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಮಾಡಿದರೆ ಹಣ ತಾನಾಗಿಯೆ ಬರುತ್ತೆ ಎಂದು ಅಂತರಾಷ್ಟ್ರೀಯ ಖ್ಯಾತಿಯ ಹುಬ್ಬಳ್ಳಿಯ ನರರೋಗ ತಜ್ಞ ಡಾ|| ಸುರೇಶ ಎನ್.ದುಗ್ಗಾಣಿ ಹೇಳಿದರು.
ಅವರು ಸೋಮವಾರ ಸಂಜೆ ಘಟಪ್ರಭಾ ಮೃತ್ಯುಂಜಯ ಸಾಂಸ್ಕøತಿಕ ಭವನದಲ್ಲಿ ಜೈಂಟ್ಸ್ ಗ್ರುಪ್ ಘಟಪ್ರಭಾ ಇವರು ಏರ್ಪಡಿಸಿದ ವಿಶ್ವ ವೈದ್ಯರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹಿರಿಯ ವೈದ್ಯರಾದ ಡಾ|| ವಿಲಾಸ ನಾಯಕವಾಡಿ ಮಾತನಾಡಿ ಡಾ|| ಬಿ.ಸಿ.ರೋಯ್‍ವರ ನೆನಪಿಗಾಗಿ ನಾವು ಈ ವೈದ್ಯ ದಿನಾಚರಣೆಯನ್ನು ಆಚರಿಸುತ್ತೇವೆ. ಅವರನ್ನು ಜನರೆ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಮಾಡಿದರು. ಪ್ರತಿ ದಿನ ಸಂಜೆ ನಾಲ್ಕು ಗಂಟೆ ನಂತರ ರೋಗಿಗಳನ್ನು ತಪ್ಪದೆ ನೋಡುತ್ತ ತನ್ನ ವೈದ್ಯ ವೃತ್ತಿಗೆ ಎಂದೂ ದ್ರೋಹ ಮಾಡಲಿಲ್ಲ. ಅವರ ಅತ್ಯುತ್ತಮ ಸೇವೆಗೆ ಸರಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು ಎಂದರು.
ಇದೆ ಸಂದರ್ಭದಲ್ಲಿ ಸ್ಥಳೀಯ ವೈದ್ಯರಾದ ಡಾ|| ನಾಭಿರಾಜ ಪೂಜಾರ, ಡಾ|| ಪ್ರಶಾಂತ ಬಬಲಾದಿ, ಪತ್ರಕರ್ತ ಸುಭಾಸ ಗಾಯಕವಾಡ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜೈಂಟ್ಸ್ ಗ್ರುಪ್ ಅಧ್ಯಕ್ಷ ಜಿ.ಎಸ್.ಕರ್ಪೂರ ಮಠ ಹಾಗೂ ಸಾನಿಧ್ಯ ವಹಿಸಿದ ಭೆಂಡವಾಡ ವಿರಕ್ತಮಠದ ಗುರುಸಿದ್ಧ ಮಹಾಸ್ವಾಮಿಗಳು, ಜೈಂಟ್ಸ್ ಫೆಡರೇಶನ್ ಸದಸ್ಯ ಎಲ್.ಬಿ.ದೊಡ್ಡಮನಿ ಮಾತನಾಡಿದರು. ಜೈಂಟ್ಸ್ ಆಡಳಿತ ನಿರ್ದೇಶಕರಾದ ಸಿ.ಬಿ. ಮಠಪತಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಉಮಾ ದೊಡ್ಡಮನಿ ನಿರೂಪಿಸಿ ವಂದಿಸಿದರು.

Related posts: