RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಮದ್ಯ ವ್ಯಸನಿಗಳ ತಾಣವಾಗುತ್ತಿದೆಯಾ ? ಯೋಗಿಕೋಳ ರಸ್ತೆ ಪಕ್ಕ ವಿರುವ ಅರಣ್ಯ ಇಲಾಖೆಯ ನಿರೀಕ್ಷಣಾ ಮಂದಿರ

ಗೋಕಾಕ:ಮದ್ಯ ವ್ಯಸನಿಗಳ ತಾಣವಾಗುತ್ತಿದೆಯಾ ? ಯೋಗಿಕೋಳ ರಸ್ತೆ ಪಕ್ಕ ವಿರುವ ಅರಣ್ಯ ಇಲಾಖೆಯ ನಿರೀಕ್ಷಣಾ ಮಂದಿರ 

ಮದ್ಯ ವ್ಯಸನಿಗಳ ತಾಣವಾಗುತ್ತಿದೆಯಾ ? ಯೋಗಿಕೋಳ ರಸ್ತೆ ಪಕ್ಕ ವಿರುವ ಅರಣ್ಯ ಇಲಾಖೆಯ ನಿರೀಕ್ಷಣಾ ಮಂದಿರ

ವಿಶೇಷ ವರದಿ :

ಗೋಕಾಕ ಜು 5  : ನಗರದ ಹೊರವಲಯದ ಯೋಗಿಕೋಳ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ನಿರೀಕ್ಷಣಾ ಮಂದಿರ ಕಳೆದ ಕೆಲವು ದಿನಗಳಿಂದ ಮದ್ಯ ವ್ಯಸನಿಗಳ ತಾಣವಾಗಿ ಪರಿಣಮಿಸುತ್ತಿದೆ
ಯಾವದೆ ಇಲಾಖೆಯ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳು ಗೋಕಾಕ ಹಾಗೂ ಸುತ್ತ ಮುತ್ತಲು ಪ್ರದೇಶಗಳಿಗೆ ಬೇಟ್ಟಿ ನೀಡಿದ ಸಂಧರ್ಭದಲ್ಲಿ ಅವರ ವಿಶ್ರಾಂತಿ ಮತ್ತು ಊಟೋಪಚಾರಕ್ಕಾಗಿ ಬಳಸುವ ಈ ನಿರೀಕ್ಷಣಾ ಮಂದಿರ (ಐಬಿ) ಈಗ ಸಿಕ್ಕ ಸಿಕ್ಕವರಿಗೆ ಆಥಿತ್ಯ ನೀಡಿ ಮದ್ಯಪಾನಿಗಳ ತಾಣವಾಗಿ ಬದಲಾವಣೆ ಗೊಳ್ಳುತ್ತಿದೆ.

ಅರಣ್ಯ ಇಲಾಖೆಯ ನಿರೀಕ್ಷಣಾ ಮಂದಿರದ ಪಕ್ಕದಲ್ಲಿ ಬಿದ್ದಿರುವ ಸರಾಯಿ ಬಾಟಗಳು

ಇದು ಅರಣ್ಯ ಇಲಾಖೆಯ ಸ್ವತ್ತಾಗಿರುವದರಿಂದ ಇದರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಆ ಇಲಾಖೆಯದ್ದಾಗಿದೆ , ಇದರ ಪಕ್ಕದಲ್ಲೇ ಭವ್ಯವಾದ ನರ್ಸರಿ ಇದೆ ಈ ಐಬಿ ನಿರ್ವಹಣೆಗೆಗಾಗಿ ಇಲ್ಲಿ ಬೆಳಿಗ್ಗೆ ಮತ್ತು ರಾತ್ರಿ ಒಬ್ಬ ಅರಣ್ಯ ವಿಕ್ಷಕ ( ವಾಚಮೇನ್ ) ಕರ್ತವ್ಯ ನಿರತರಾಗಿರುತ್ತಾರೆ ಆದರೂ ಸಹ ಹೊರಗಿನವರು ಈ ನಿರೀಕ್ಷಣಾ ಮಂದಿರಕ್ಕೆ ಬಂದು ಮದ್ಯರಾತ್ರಿವರೆಗೆ ಪಾರ್ಟಿಗಳನ್ನು ನಡೆಸುವ ಪರಿಪಾಠ ಜೋರಾಗಿ ನಡೆದಿದೆ . ಎಂಬ ವಿಷಯ ಮೇಲ್ನೋಟಕ್ಕೆ ಸಾಬಿತಾಗುತ್ತದೆ .

ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರ : ಸರಕಾರದ ಉನ್ನತ ಮಟ್ಟದ ಅಧಿಕಾರಿಗಳನ್ನು ಬಿಟ್ಟು ಈ ಐಬಿಗೆ ಯಾರಾದರು ಹೋಗಬೆಕೆಂದರೆ ಮೊದಲು ಅರಣ್ಯ ಇಲಾಖೆಯ ಪರವಾಣಿಗೆ ಕಡಾಯವಾಗಿ ಪಡೆಯಬೇಕು , ಇದಕ್ಕೆ ಕನಿಷ್ಠ ಪಕ್ಷ ಗೋಕಾಕ ವಲಯ ಅರಣ್ಯಾಧಿಕಾರಿ ಅವರ ಅನುಮತಿ ಪಡೆಯದೇ ಇಲ್ಲಿ ಪ್ರವೇಶಿಸಲು ಸಾದ್ಯವಿಲ್ಲ ಆದರು ಸಹ ಐಬಿ ಅಕ್ಕಪಕ್ಕ ಸರಾಯಿ , ಬಿಯರ್ ಬಾಟಲಿಗಳು ಟೆರ್ಟಾ ಪ್ಯಾಕ್ , ಸೋಡಾ ,ಜ್ಯೂಸ್ ಹಾಗೂ ನೀರಿನ ಬಾಟಲಗಳು ಮತ್ತು ಯುಸ್ ಆಂಡ್ ಥ್ರೋ ಪ್ಲೇಟಗಳು ಬಿದ್ದು ಐಬಿಯ ವಾತಾವರಣ ಹದಗೆಡಿಸುತ್ತವೆ ಇದರಿಂದ ಇಲ್ಲಿಗೆ ಬರುವ ಭಾಗಶಃ ಅಧಿಕಾರಿಗಳು ಮೂಜಗರ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ . ಅರಣ್ಯ ಇಲಾಖೆಯ ಸಹಕಾರ ಇಲ್ಲದೆ ಇಷ್ಟೆಲ್ಲ ನಡೆಯಲು ಸಾದ್ಯವಿಲ್ಲ ವೆಂದು ಇಲ್ಲಿಯ ಪ್ರಜ್ಞಾವಂತ ಸಾರ್ವಜನಿಕರು ಶಂಕಿಸುತ್ತಿದ್ದಾರೆ

ಮರಿ ರಾಜಕಾರಣಿಗಳಿಗೆ ಮತ್ತು ಸಾರ್ವಜನಿಕರಿಗೆ ಇಲ್ಲಿ ಮುಕ್ತವಾದ ಅವಕಾಶ ಇಲ್ಲದಿದ್ದ ಪಕ್ಷದಲ್ಲಿ ತಾಲೂಕಿನ ಅಧಿಕಾರಿಗಳು , ಅರಣ್ಯ ಇಲಾಖೆಯ ನಿರೀಕ್ಷಣಾ ಮಂದಿರ (ಐಬಿ) ಯನ್ನು ಈ ರೀತಿ ಮದ್ಯಪಾನ ಮಾಡಲು ಬಳಸುಕೊಳ್ಳುತ್ತಿದ್ದಾರಾ ? ಎಂಬ ಯಕ್ಷ ಪ್ರಶ್ನೆ ಐಬಿಯ ಅಕ್ಕಪಕ್ಕ ಬಿದ್ದಿರುವ ಸರಾಯಿ ಬಾಟಲಗಳನ್ನು ನೋಡಿದವರಿಗೆ ಅನಿಸುತ್ತದೆ

ಗೋಕಾಕ ವಲಯ ಅರಣ್ಯ ಅಧಿಕಾರಿ ಕೆ.ಎನ್.ವಣ್ಣೂರ , ಎಸಿಎಫ್ ಸಿ.ಜಿ.ಮಿರ್ಜಿ , ಡಿಎಫ್ಓ ದೆವರಾಜ ಅವರು ಈ ಬಗ್ಗೆ ಸ್ವಲ್ಪ ಎಚ್ಚರಿಕೆಯ ಹೆಜ್ಜೆ ಇಟ್ಟು ಇಲ್ಲಿಯ ಐಬಿಯಲ್ಲಿ ಅರಣ್ಯ ಇಲಾಖೆಯ ಸಹಕಾರದಿಂದ ನಡೆಯುತ್ತಿರುವ ಮದ್ಯಪಾನದ ಪಾರ್ಟಿಗಳನ್ನು ತಡೆಗಟ್ಟಿ ಪರಿಸರ ಮಾಲಿನ್ಯ ಸಂರಕ್ಷಿಸುವ ಮಹತ್ತರ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಇಲಾಖೆಯ ಮಾನ ಹರಾಜಾಗದಂತೆ ನೊಡಿಕೊಳ್ಳಬೇಕಾಗಿದೆ ಎಂದು ಪ್ರಜ್ಞಾವಂತರ ಸಾರ್ವಜನಿಕರು ಆಗ್ರಹಿಸಿದ್ದಾರೆ

Related posts: