ಗೋಕಾಕ: ನೀರೆತ್ತುವ ವಿದ್ಯುತ್ ಚಾಲಿತ ಯಂತ್ರ ಕೊಡ್ರಿಸುವ ಕಾಮಗಾರಿಗೆ.ಭೂಮಿ ಪೂಜೆ
ನೀರೆತ್ತುವ ವಿದ್ಯುತ್ ಚಾಲಿತ ಯಂತ್ರ ಕೊಡ್ರಿಸುವ ಕಾಮಗಾರಿಗೆ.ಭೂಮಿ ಪೂಜೆ
ಬೆಟಗೇರಿ ಜು 5 : ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ, ಮೆಳವಂಕಿ ಜಿಪಂ ಸದಸ್ಯೆ ಶಶಿಕಲಾ ಸಣ್ಣಕ್ಕಿ, ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಇಲ್ಲಿಯ ನಾಗರಿಕರ ಹಲವಾರು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೂಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಹೇಳಿದರು.
ಗ್ರಾಮದ ಬಸವ ನಗರದ ಬಿಜ್ಜನ್ನವರ ತೋಟದ ಮನೆಯ ಹತ್ತಿರ ಬುಧವಾರ ಜುಲೈ.4 ರಂದು ಸ್ಥಳೀಯ ಗ್ರಾಮ ಪಂಚಾಯ್ತಿ 14 ನೇ ಹಣಕಾಸಿನ ಯೋಜನೆಯ ಅನುದಾನದಡಿಯಲ್ಲಿ 1 ಲಕ್ಷ 15 ಸಾವಿರ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿಗಾಗಿ ಬೋರ್ವೆಲ್ ಮೂಲಕ ಕೊಳವೆ ಭಾಂವಿ ಕೊರೆಯುವ ಮತ್ತು ನೀರೆತ್ತುವ ವಿದ್ಯುತ್ ಚಾಲಿತ ಯಂತ್ರ ಕೊಡ್ರಿಸುವ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಊರಿನ ಸಮಗ್ರ ಅಭಿವೃದ್ಧಿಗೆ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರ, ಸ್ಥಳೀಯರ ಸಹಾಯ ಸಹಕಾರ ಅವಶ್ಯಕವಾಗಿದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಪರಮಾನಂದ ಕೋಣಿ, ಮಲ್ಲಪ್ಪ ಪಣದಿ, ಹನುಮಂತ ಸವತಿಕಾಯಿ, ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ, ಕ್ಲಾರ್ಕ ಸುರೇಶ ಬಾಣಸಿ, ಮೇಳೆಪ್ಪ ಹರಿಜನ, ರಾಮಣ್ಣ ದಂಡಿನ, ಗ್ರಾಪಂ ಸದಸ್ಯರು, ಸಿಬ್ಬಂದಿ ಸೇರಿದಂತೆ ಇಲ್ಲಿಯ ಬಸವ ನಗರ ನಿವಾಸಿಗಳು, ಗ್ರಾಮಸ್ಥರು, ಇತರರು ಇದ್ದರು.