ಗೋಕಾಕ:ಹಫ್ತಾ ವಸೂಲಿ ಮಾಡುವವರು ನಿಜವಾದ ಹಿಂದೂಗಳಲ್ಲ : ಪೌರಾಡಳಿತ ಸಚಿವ ರಮೇಶ
ಹಫ್ತಾ ವಸೂಲಿ ಮಾಡುವವರು ನಿಜವಾದ ಹಿಂದೂಗಳಲ್ಲ : ಪೌರಾಡಳಿತ ಸಚಿವ ರಮೇಶ
ಗೋಕಾಕ ಜು 6 : ಹಿಂದುತ್ವದ ಹೆಸರಿನಲ್ಲಿ ಹಫ್ತಾ ವಸೂಲಿ ಮಾಡುವವವರು ನಿಜವಾದ ಹಿಂದೂಗಳಲ್ಲ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದರು
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಗರಸಭೆ ಗೋಕಾಕ ವತಿಯಿಂದ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಹಮ್ಮಿಕೊಂಡಿದ್ದ ಪೌರ ಸನ್ಮಾನ ಹಾಗೂ ಗೋಕಾಕ ನಗರದಲ್ಲಿ ರೂ 36.41 ಕೋಟಿ ಅಂದಾಜು ಮೊತ್ತದ 11 ಕೆ.ವ್ಹಿ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ , ರೂ 21 ಕೋಟಿ ಮೊತ್ತದ ನಖರೋತ್ಥಾನ 3 ನೇ ಹಂತದ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು
ಸುಳ್ಳು ಪ್ರಚಾರ ಮಾಡಿ ಹಿಂದೂತ್ವವಾದಿಗಳೆಂದು ಹೇಳುತ್ತಿರುವವರಿಂದ ಪಾಠ ಕಲಿಯುವ ಅವಶ್ಯಕತೆ ನಮ್ಮಗಿಲ್ಲಾ , ನಗರದಲ್ಲಿ ಹಿಂದೂತ್ವದ ಹೆಸರಿನಲ್ಲಿ ಸ್ವಾತ್ ಹಾಳುಮಾಡಲು ಪ್ರಯತ್ನಿಸುತ್ತಿರುವ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವದು . ಹರಿದ್ವಾರದಲ್ಲಿ ಪ್ರತಿನಿತ್ಯ ಜರಗುವ ಗಂಗಾ ಪೂಜೆಯ ಹಾಗೆ ಗೋಕಾದಲ್ಲಿಯೂ ಪ್ರತಿನಿತ್ಯ ಗಂಗಾ ಪೂಜೆ ಮಾಡಿ ನಿಜವಾದ ಹಿಂದುತ್ವವನ್ನು ಸಾದರ ಪಡಿಸಲಾಗುವದು ಎಂದ ಸಚಿವರು ಕರದಂಟಿನಿಂದ ಪರಿಚಯವಾಗುತ್ತಿದ ಗೋಕಾಕ ನಗರ ಗೋಕಾಕ ಮಹಾ ಜನತೆಯ ಆರ್ಶಿವಾದದಿಂದ ಪ್ರಸ್ತುತ ಜಾರಕಿಹೊಳಿ ಕುಟುಂಬದ ಹೆಸರಿನಲ್ಲಿ ಪರಿಚಯವಾಗುತ್ತಿರುವದು ಹೆಮ್ಮೆಯ ವಿಷಯ ಇದಕ್ಕೆ ಕಾರ್ಯನೀಕೃತರಾದ ಮಹಾಜನತೆಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು .
ಯಾರು ಎಷ್ಷೇ ವಿರೋಧ ಮತ್ತು ಅಪಪ್ರಚಾರ ಮಾಡಿದರು ನಿಮ್ಮೆಲ್ಲರ ಆರ್ಶಿವಾದದಿಂದ ಕಳೆದ ಸತತ ಐದನೇ ಅವಧಿಗೆ ಶಾಸಕನಾಗಿ , ಸಚಿವನಾಗಿದ್ದೆನೆ . ಎಸ್.ಎಂ ಕೆ ಮತ್ತು ಧರ್ಮಸಿಂಗ್ ಸರಕಾರದಲ್ಲಿ ಅಭಿವೃದಿಗೆ ಅನುದಾನ ಕಡಿಮೆ ಪ್ರಮಾಣದಲ್ಲಿ ಬರುತ್ತಿದ ಸಮಯದಲ್ಲಿಯೂ ಸಹ ನೀರಾವರಿ , ಶಿಕ್ಷಣ , ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಆಸಕ್ತಿ ತೋರಿ ಅಭಿವೃದ್ಧಿಗೆ ಶ್ರಮಿಸಲಾಗಿದೆ .ಕಳೆದ ಅವಧಿಯಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಭರಪೂರ ಅನುದಾನ ತಂದು ಶಕ್ತಿ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು , ಕೆಲವು ಮುಗಿಯುವ ಹಂತದಲ್ಲಿವೆ ಊಳಿದಿರುವ ಕಾರ್ಯಗಳನ್ನು ಹಂತ ಹಂತವಾಗಿ ಮಾಡಿ ಪೂರ್ತಿಗೋಳಿಸಲಾಗುವದು ಗೋಕಾಕ ಜನತೆಯ ಆರ್ಶಿವಾದ ಇರುವವರೆಗೆ ನಾನು ಶಾಸಕನಾಗಿರುತ್ತೆನೆ ಯಾರಿಂದಲೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದರು
ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಪಕ್ಷಾತೀತ , ಜಾತ್ಯತೀತವಾಗಿ ನಡೆಸಿ : ಮುಂಬರುವ ನಗರಸಭೆಯ ಚುನಾವಣೆಯನ್ನು ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ನಡೆಸಿ ಒಳ್ಳೆಯ ಅಭ್ಯರ್ಥಿಗಳನ್ನು ಆಯ್ಕೆಮಾಡಿ ಕಳುಹಿಸದರೆ ನಗರದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ನಗರಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಅವಿರೋಧ ಆಯ್ಕೆಮಾಡಿ ರಾಜ್ಯದಲ್ಲೇ ಇತಿಹಾಸ ಸೃಷ್ಟಿಸುವ ವಿಚಾರವಿದೆ . ಗೋಕಾಕ ಜನತೆ ಇದಕ್ಕೆ ಸಹಕಾರ ನಿಡಬೇಕು. ಬರುವ ದಿನಗಳಲ್ಲಿ ಪಕ್ಷಾತೀತವಾಗಿ ನಗರದಲ್ಲಿ ಎಲ್ಲರ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಗುವದು . ಇದರಲ್ಲಿ ಒಮ್ಮತದ ಅಭಿಪ್ರಾಯ ಬಂದರೆ ವಿರೋಧ ಪಕ್ಷದವರಿಗೂ ಕೆಲವೊಂದು ವಾರ್ಡಗಳನ್ನು ಬಿಟ್ಟುಕೊಡುವ ಬಗ್ಗೆ ಚಿಂತಸಲಾಗವದು ಒಟ್ಟಾರೆ ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಗೋಕಾಕ ನಗರವನ್ನು ಅಭಿವೃದ್ಧಿ ಪಡೆಸಿ ರಾಜ್ಯದಲ್ಲೇ ಮಾದರಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗವದು ಎಂದು ಪೌರಾಡಳಿತ ಸಚಿವ ರಮೇಶ ಹೇಳಿದರು
ಮಾಜಿ ಪೌರಾಯುಕ್ತ ವ್ಹಿ.ಸಿ.ಚನ್ನಪಗೌಡರ ಗೆ ಒಂದು ವಾರ್ಡ ಬಿಟ್ಟು ಕೊಡಿ : ಕಳೆದ ಸತತ 8 ವರ್ಷಗಳಿಂದ ನಗರಸಭೆ ಪೌರಾಯುಕ್ತರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ವ್ಹಿ.ಸಿ ಚನ್ನಪಗೌಡರ ಅವರಿಗೆ ನಗರದ ಯಾವದಾದು ವಾರ್ಡ ಬಿಟ್ಟು ಕೋಟ್ಟು ಅವರನ್ನು ಗೋಕಾಕದಲ್ಲಿಯೇ ಉಳಿಸಿಕೋಳ್ಳಿ ಎಂದು ಸಚಿವರು ಜನರಲ್ಲಿ ಮನವಿಮಾಡಿದ ಪ್ರಸಂಗ ಇಂದು ನಡೆದ ಪೌರ ಸನ್ಮಾನದಲ್ಲಿ ಜರುಗಿತು . ಸಚಿವರು ತಾವು ಭಾಷಣ ಮಾಡುವ ಸಂದರ್ಭದಲ್ಲಿ ಸಾಂರ್ಧಬಿಕವಾಗಿ ಮಾಜಿ ಪೌರಾಯುಕ್ತ ಚನ್ನಪಗೌಡರ ಅವರ ಹೆಸರು ಪ್ರಸ್ತಾಪಿಸಿ ಅವರನ್ನು ನಗರಸಭೆ ಸದಸ್ಯ ಮಾಡಿ ಇಲ್ಲಿಯ ಉಳಿಸಿಕೊಳ್ಳಿ ಎಂದು ಹೇಳಿದಾಗ ಜನರು ಅವರನ್ನು ಅವಿರೋಧ ಆಯ್ಕೆ ಮಾಡಿ ಎಂದು ತಮ್ಮ ಬೆಂಬಲ ವ್ಯಕ್ತ ಪಡಿಸಿದರು
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಗರದ ಶೂನ್ಯ ಸಂಪಾದನ ಮಠದ ಪೀಠಾಧಿಪತಿಗಳಾದ ಮ.ನಿ.ಪ್ರ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ ಅಧ್ಯಕ್ಷತೆಯನ್ನು ವಹಿಸಿದ್ದರು . ಹೆಸ್ಕಾಂನ ಗೀರಿಧರ ಕುಲಕರ್ಣಿ ಮತ್ತು ನಗರಸಭೆಯ ಎಂ ಎನ್ ನಾಗರೇಕರ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಗಳ ವಿವರವನ್ನು ನೀಡಿದರು.
ಪ್ರಭಾರಿ ಪೌರಾಯುಕ್ತ ಎಂ.ಎಚ್.ಅತ್ತಾರ ಸ್ವಾಗತಿಸಿದರು , ಶಿಕ್ಷಕ ಎ.ಜಿ.ಕೋಳಿ ನಿರೂಪಿಸಿ ವಂದಿಸಿದರು
ವೇದಿಕೆ ಮೇಲೆ ತಹಶೀಲ್ದಾರ್ ಜಿ.ಎಸ.ಮಾಳಗಿ , ಹೆಸ್ಕಾಂ ಅಧಿಕಾರಿಗಳಾದ ಕಿರಣ ಸಣಕ್ಕಿ , ವರಾಳೇ , ಅನಿಲಕುಮಾರ ಬಬಲೇಶ್ವರ , ಸ್ಥಾಯಿ ಸಮಿತಿ ಚೇರಮನ್ ಭಗವಂತ ಹೂಳಿ , ಉಪಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಜತ್ತಿ , ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ , ಯುವ ಧುರೀಣ ಅಮರನಾಥ ಜಾರಕಿಹೊಳಿ , ಎಪಿಎಂಸಿ ನಿದೇರ್ಶಕ ಬಸವರಾಜ ಸಾಯನ್ನವರ , ಅಬ್ಬಾಸ ದೇಸಾಯಿ , ಜಯಾನಂದ ಹುಣಶ್ಯಾಳ , ಭೀಮಶಿ ಭರಮಣ್ಣವರ , ಗಿರೀಶ ಖೋತ , ಚಂದ್ರಕಾಂತ ಈಳಿಗೇರ , ವಿಶ್ವನಾಥ್ ಬಿಳ್ಳೂರ , ಜಾಕೀರ ನಧಾಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು