RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಲದ್ದಿ (ಸೈನಿಕ) ಹುಳುವಿನ ಹತೋಟೆಗೆ ರೈತರು ಅನುಸರಿಸಬೇಕಾದ ಮಾಹಿತಿ..!

ಗೋಕಾಕ:ಲದ್ದಿ (ಸೈನಿಕ) ಹುಳುವಿನ ಹತೋಟೆಗೆ ರೈತರು ಅನುಸರಿಸಬೇಕಾದ ಮಾಹಿತಿ..! 

ಲದ್ದಿ (ಸೈನಿಕ) ಹುಳುವಿನ ಹತೋಟೆಗೆ ರೈತರು ಅನುಸರಿಸಬೇಕಾದ ಮಾಹಿತಿ..!

* ಕೃಷಿ ಅಧಿಕಾರಿ ಎಸ್.ಬಿ. ಕರಗಣ್ಣಿ ಅವರಿಂದ ಮಾಹಿತಿ * ಔಷಧೊಪಚಾರ ಸಿಂಪರಣೆ ಮಾರ್ಗದರ್ಶನ

ವಿಶೇಷ ವರದಿ : ಅಡಿವೇಶ ಮುಧೋಳ 

ಸಮೀಪದ ಮಮದಾಪೂರ ಸೇರಿದಂತೆ ಗೋಕಾಕ ತಾಲೂಕಿನ ಹಲವು ಗ್ರಾಮಗಳಲ್ಲಿ ಲದ್ಧಿ ಹುಳುವಿನ ಭಾದೆ ಹೆಚ್ಚಾಗಿ ಕಂಡುಬರುತ್ತಿರುವದರಿಂದ ಬೆಟಗೇರಿ ಹಾಗೂ ಸುತ್ತಲಿನ ಹಳ್ಳಿಗಳ ಬಹುತೇಕ ಹೊಲ-ಗದ್ದೆಗಳಲ್ಲಿರುವ ಗೋವಿನಜೋಳ, ಕಬ್ಬು ಬೆಳೆಗೆ ಸೈನಿಕ ಲದ್ಧಿ ಹುಳು ಆಕ್ರಮಿಸಿಕೊಳ್ಳುವ ಭಯ, ಭೀತಿ ರೈತರಲ್ಲಿ ಆವರಿಸಿದ ಹಿನ್ನಲೆಯಲ್ಲಿ ಬೆಳೆ ಕಟಾವಿಗೆ ಬರುವ ಮುನ್ನವೇ ಸೈನಿಕ ಕೀಟ ಭಾದೆ ಆವರಿಸಿ ರೈತರು ಆತಂಕ ಎದುರಿಸುವಂತಾಗುತ್ತದೆ. ಆದ್ದರಿಂದ ರೈತರು ಹತೋಟೆ ಕ್ರಮಗಳನ್ನು ಅನುಸರಿಸಲು ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿಗಳಿಂದ ಕೌಜಲಗಿ ಹೂಬಳಿ ಎಲ್ಲ ರೈತರು ಮಾಹಿತಿ ಪಡೆದುಕೊಳ್ಳಬೇಕೆಂದು ಗೋಕಾಕ ತಾಲೂಕಿನ ಕೌಜಲಗಿ ಹೂಬಳಿಯ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಎಸ್.ಬಿ. ಕರಗಣ್ಣಿ ಮುನ್ನಚ್ಚರಿಕಾ ಕ್ರಮವಾಗಿ ತಿಳಿಸಿದ್ದಾರೆ.
ಕೀಟದ ಹುಟ್ಟು ಮತ್ತು ಬೆಳೆಗೆ ತಗುಲಿದ ಲಕ್ಷಣ: ಮಳೆಯಿಂದ ಭೂಮಿಯ ತೇವಾಂಶ ಹೆಚ್ಚಳವಾದ್ದರಿಂದ ಲದ್ದಿ (ಸೈನಿಕ) ಹುಳು ಎಂಬ ಹೆಸರಿನ ಕೀಟ ಹುಟ್ಟಿಕೊಂಡು, ದಿನದಿಂದ ದಿನಕ್ಕೆ ಎಲ್ಲಡೆ ಆಕ್ರಮಿಸುತ್ತಿದ್ದು, ಈ ಭಾಗದಲ್ಲಿ ಆವರಿಸುವ ಲಕ್ಷಣಗಳು ಗೋಚರಿಸುತ್ತಿವೆ. ಈ ಕೀಟದ ಮೈಮೇಲೆ ಅಡ್ಡ ಗೆರೆಗಳಿದ್ದು, ಸುಮಾರು ಒಂದೂವರೆ ಇಂಚಿನಷ್ಟು ಉದ್ದವಿರುತ್ತದೆ. ಒಂದು ಹೆಣ್ಣು ಪತಂಗ 400-1000 ತನಕ ಮೊಟ್ಟಗಳಿನ್ನಿಡುತ್ತದೆ. ಮೊಟ್ಟೆಯಿಟ್ಟ ಏಳೆಂಟು ದಿನಗಳಲ್ಲಿ ಕೀಟಗಳಾಗಿ ರೂಪ ಪಡೆದುಕೊಳ್ಳುತ್ತವೆ. ಗೋವಿನಜೋಳದ ಬೆಳೆಯ ಹಸಿರು ಎಲೆ ಮಾತ್ರ ಸಂಪೂರ್ಣ ತಿಂದು ಹಾಕುತ್ತಿದ್ದು, ಇದು ರಾತ್ರಿ ಹೊತ್ತು ಮಾತ್ರ ಬೆಳೆಯ ಹಸಿರೆಲೆ ತಿಂದು, ಎಸಳು ಮಾತ್ರ ಬಿಡುತ್ತದೆ. ಹೀಗೆ ಬೆಳೆ ನಿತ್ಯ ನಾಶಮಾಡುತ್ತದೆ. ಹಗಲು ಸಮಯದಲ್ಲಿ ಬೆಳೆಯ ಸುಳಿ ಇಲ್ಲವೇ ಮಣ್ಣಿನ ಬುಡದಲ್ಲಿ ಅವಿತುಕೊಳಿತಿರುತ್ತದೆ.
ಹತೋಟಿಗೆ ಕೀಟನಾಶದ ಮಾಹಿತಿ: ಒಂದು ಎಕರೆ ಜಮೀನಿನಲ್ಲಿರುವ ಸೈನಿಕ ಕೀಟ ಬಾಧೆ ತಗುಲಿದ ಗೋವಿನಜೋಳದ ಬೆಳೆಗೆ 20 ಕೆಜಿ ಭತ್ತದ ಹೊಟ್ಟು, 4 ಕೆಜಿ ಬೆಲ್ಲ, 250 ಮೀಲಿ ಲೀಟರ್ ಮೊನೋಕ್ರೂಟೂಪಾಸ್ ಔಷಧ, 3-4 ಲೀಟರ್ ನೀರು ತೆಗೆದುಕೊಂಡು ಇವುಗಳನ್ನು ಒಂದಡೆ ಸೇರಿಸಿ ಹದವಾಗಿ ಸಮ್ಮಿಸರಣ ಮಾಡಿ, ಒಂದು ರಾತ್ರಿ ಗೋಣಿ ಚೀಲದಲ್ಲಿ ತುಂಬಿ ಚೀಲದ ಬಾಯಿ ಕಟ್ಟಿ ಇಡಬೇಕು. ಮರುದಿನ ಕೀಟ ಭಾಧೆ ಬೆಳೆ ಇರುವ ಭೂಮಿಯಲ್ಲಿ ಉಂಡೆ ರೂಪದಲ್ಲಿ ಇಲ್ಲವೇ ರಸಾಯನಿಕ ಗೊಬ್ಬರ ಒಗೆಯುವ ಹಾಗೆ ಈ ಕೀಟಭಾದೆ ವಿಷಪ್ರಾಶÀನ ಔಷಧವನ್ನು ಆ ದಿನ ಸಂಜೆ ಹೊತ್ತು ಸಿಂಪರಣೆ ಮಾಡಿದರೆ ಸೈನಿಕ ಕೀಟಭಾಧೆ ಹತೋಟಿಗೆ ಬರುತ್ತದೆ. ಇಲ್ಲವೇ ಮೇಲಾದಿಯಾನ್ 5%, ಅಥವಾ ಥೈಯೋಡಿಕಾರ್ಬ ಎ75 ಗ್ರಾಂ, ಇಲ್ಲವೇ ಲ್ಯಾಮೊಲ್ಡಾ 2 ಮೀಲಿ ಪ್ರತಿ ಲೀಟರ್‍ಗೆ ಸಿಂಪರಣೆ ಮಾಡಬಹುದಾಗಿದೆ.
ಇನ್ನೂ ಕೆಲವು ವಿವಿಧ ಹೆಸರಿನ ಕೀಟನಾಶಕಗಳು ತಾಲೂಕು, ಹೊಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯತಿ ದರದಲ್ಲಿ ರೈತರಿಗೆ ದೊರೆಯುತ್ತವೆ. ಜೊತೆಗೆ ಸಹಾಯಕ ಕೃಷಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ರೈತರು ಸೈನಿಕ ಕೀಟಭಾಧೆ ನಿರ್ವಹಣೆ ಹಾಗೂ ಹತೋಟಿ ಕ್ರಮಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕೆಂದು ರೈತರಿಗೆ ತಿಳಿಸಿದ್ದಾರೆ. ಈ ಸೈನಿಕ ಕೀಟಭಾಧೆ ನಿರ್ವಹಣೆ ಹಾಗೂ ಹತೋಟಿ ಕ್ರಮಗಳಿಗಾಗಿ ಈ ಮೇಲಿನ ವಿಷಪ್ರಾಶನ ಸಿಂಪರಣೆ ಕ್ರಮಗಳನ್ನು ಅನುಸರಿಸಿದರೆ ಈ ಕೀಟಭಾಧೆ ಹತೋಟಿಗೆ ಬರುತ್ತದೆ ಎಂದು ಸಲಹೆ ನೀಡಿದ್ದಾರೆ.
“ ಗೋವಿನಜೋಳದ ಬೆಳೆಗೆ ಸೈನಿಕ(ಲದ್ದಿ) ಹುಳು ಎನ್ನುವ ಕೀಟ ಭಾಧೆ ತಗಲುವ ಸಂಭವವಿದ್ದು, ಕೀಟ ಭಾಧೆ ನಿರ್ವಹಣೆ ಮತ್ತು ಹತೋಟಿ ಕ್ರಮಗಳ ಕುರಿತು ಹಾಗೂ ಔಷಧೊಪಚಾರ ಸಿಂಪರಣೆ ಮಾಡುವ ಮಾರ್ಗದರ್ಶನ ರೈತರಿಗೆ ನೀಡಲಾಗುವದು.
ಎಸ್.ಬಿ.ಕರಗಣ್ಣಿ ಕೃಷಿ ಅಧಿಕಾರಿ. ಕೃಷಿ ಇಲಾಖೆ

ಈ ಭಾಗದ ಪ್ರತಿ ಹಳ್ಳಿಯ ರೈತರೊಬ್ಬರ ಹೊಲದಲ್ಲಿ ಕೀಟಭಾಧೆ ಹತೋಟಿ ಕ್ರಮಗಳ ಮಾರ್ಗದರ್ಶನ ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗುವದು”.
* ಎಮ್. ಐ. ಪತ್ತಾರ. ಸಹಾಯಕ ಕೃಷಿ ಅಧಿಕಾರಿ. ಕೃಷಿ ಇಲಾಖೆ

Related posts: