ಗೋಕಾಕ :ನವಜಾತ ಶಿಶು ಪತ್ತೆ : ಗೋಕಾಕಕಿನ ಕಿಲ್ಲಾ ಪ್ರದೇಶದಲೊಂದು ಹೃದಯ ವಿದ್ರಾವಕ ಘಟನೆ
ನವಜಾತ ಶಿಶು ಪತ್ತೆ : ಗೋಕಾಕಕಿನ ಕಿಲ್ಲಾ ಪ್ರದೇಶದಲೊಂದು ಹೃದಯ ವಿದ್ರಾವಕ ಘಟನೆ
ಗೋಕಾಕ ಜೂ 3: ಮೂರು ತಿಂಗಳಿನ ನವಜಾತ ಶಿಶು ಪತ್ತೆಯಾದ ಘಟನೆ ಗೋಕಾಕ ನಗರದ ಕಿಲ್ಲಾ ಮುಖ್ಯ ರಸ್ತೆಯ ಪಕ್ಕದ ಸಂದಿಯಲ್ಲಿ ನಡೆದಿದೆ
ಇಂದು ಬೆಳಿಗಿನ ಜಾವ 5:30 ರ ಸುಮಾರಿಗೆ ನಗರ ಸಭೆ ಸಿಬ್ಬಂದಿಯವರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದದ್ದಾಗ ಮಗು ಅಳುವಿನ ಶಬ್ಬ ಕೇಳಿ ಕೂಡಲೇ ಸ್ಥಳದ ಕಡೆ ದೌಡಾಯಿಸಿ ನೋಡಿದಾಗ ಹೆಣ್ಣು ನವಜಾತ ಶಿಶುವನ್ನು ಬಿಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದೆ
ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ನಗರಸಭೆ ಸಿಬ್ಬಂದಿಗಳಾದ ರವಿ ರಂಗಸುಭೆ, ಕೋಳಿ , ರಮೇಶ ಕಳ್ಳಿಮನಿ,ಯಲ್ಲಪ್ಪ ಪೂಜೇರಿ ನವಜಾತ ಶಿಶುವನ್ನು ರಕ್ಷಿಸುವಲ್ಲಿ ಯಶ್ವಸಿ ಯಾಗಿದಾರೆ.
ಮಗುವನ್ನು ಪ್ರಾಥಮಿಕ ಚಿಕ್ಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ ಮಗು ಸುರಕ್ಷಿತವಾಗಿದೆ ಎಂದು ತಿಳಿದು ಬಂದಿದೆ .
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಮಗು ಆರೋಗ್ಯವಾಗಿದ್ದು ಉನ್ನತಾಧಿಕಾರಿಗಳ ನಿರ್ದೆಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ