RNI NO. KARKAN/2006/27779|Saturday, November 23, 2024
You are here: Home » breaking news » ಗೋಕಾಕ:ಶಾಲೆ ಬಳಿ ಮದ್ಯ, ತಂಬಾಕಿಗಿಲ್ಲ ಕಡಿವಾಣ! ನಿರ್ಬಂಧ ಜಾರಿ ವೈಫಲ್ಯ : ಅಬಕಾರಿ ಮತ್ತು ಪೊಲೀಸ ಇಲಾಖೆಯ ಅಸಹಾಯಕತೆ

ಗೋಕಾಕ:ಶಾಲೆ ಬಳಿ ಮದ್ಯ, ತಂಬಾಕಿಗಿಲ್ಲ ಕಡಿವಾಣ! ನಿರ್ಬಂಧ ಜಾರಿ ವೈಫಲ್ಯ : ಅಬಕಾರಿ ಮತ್ತು ಪೊಲೀಸ ಇಲಾಖೆಯ ಅಸಹಾಯಕತೆ 

ಶಾಲೆ ಬಳಿ ಮದ್ಯ, ತಂಬಾಕಿಗಿಲ್ಲ ಕಡಿವಾಣ! ನಿರ್ಬಂಧ ಜಾರಿ ವೈಫಲ್ಯ : ಅಬಕಾರಿ ಮತ್ತು ಪೊಲೀಸ ಇಲಾಖೆಯ ಅಸಹಾಯಕತೆ

ವಿಶೇಷ ವರದಿ :

ಗೋಕಾಕ ಜು 9  : ಶಾಲಾ– ಕಾಲೇಜುಗಳ ಪಕ್ಕ
ದಲ್ಲಿ ಮದ್ಯ, ತಂಬಾಕು, ಬೀಡಿ– ಸಿಗರೇಟುಗಳನ್ನು ಮಾರಾಟ ಮಾಡಬಾರದು ಎಂಬ ನಿಯಮವಿದೆ.

ಆದರೆ ಬೆಳಗಾವಿ ಜಿಲ್ಲೆ ಗೋಕಾಕ ನಗರದಲ್ಲಿ ಈ ನಿಯಮ ಪಾಲನೆಯಿಗುತ್ತಿಲ್ಲ ನಗರದ ಶಹರ ಠಾಣೆ ಹತ್ತಿರ ವಿರುವ ಮೌಲಾನ ಅಬುಲ್ ಕಲಾಂ ಶಾಲೆಯ ಅಕ್ಕ ಪಕ್ಕ ಲೆಕ್ಕಿಲದಷ್ಷು ಪಾನ ಬಿಡಾ ಅಂಗಡಿಗಳಲ್ಲಿ ಯಾವುದೆ ಆತಂಕ ಇಲ್ಲದೆ ತಂಬಾಕು , ಗುಟ್ಕಾ ಮತ್ತು ಸಿಗಾರೇಟಗಳನ್ನು ಮಾರಾಟ ಮಾಡಲಾಗುತ್ತಿದೆ ಅಲ್ಲದೆ ಶಾಲೆಯ 100 ಮೀಟರ ಒಳಗಡೆಯೆ ವೈನ್ ಶಾಫ ಒಂದು ಕಳೆದ ಹಲವಾರು ವರ್ಷಗಳಿಂದ ಇಲ್ಲಿಯೇ ಕಾರ್ಯಪ್ರವೃತವಾಗಿದೆ ಆದರೂ ಸಹ ಇದನ್ನು ಬೇರಡೆ ಸ್ಥಳಾಂತರಿಸುವ ಗೋಜಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಮುಂದಾಗಿಲ್ಲಾ ಆದರೆ, ಸರ್ಕಾರದ ಇನ್ನೊಂದು ನಿಯಮ ಅದಕ್ಕೆ ಅವಕಾಶ ನೀಡಿದೆ. ಹೀಗಾಗಿ, ನಿಷೇಧಿತ ವಸ್ತುಗಳ ಬಿಕರಿ ನಿರ್ಭೀತಿಯಿಂದ ನಡೆಯುತ್ತಿವೆ! ಎಂದು ಸಾರ್ವಜನಿಕರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ .

ಅಬುಲ ಕಲಾಂ ಶಾಲೆಯ ಮುಂದೆ ಇರುವ ಪಾನ ಅಂಗಡಿ

ಶಾಲಾ– ಕಾಲೇಜುಗಳ ಪಕ್ಕದಲ್ಲಿರುವ ಅಂಗಡಿಗಳಲ್ಲಿ ಮದ್ಯಪಾನ ಮುಕ್ತ, ತಂಬಾಕು ಮುಕ್ತವೆಂದು ಫಲಕಗಳನ್ನು ಹಾಕಿದ್ದರೂ ನಿರಾತಂಕವಾಗಿ ಮಾರಾಟ ಆಗುತ್ತಿವೆ’ . ‘ಇಂತಹ ಅಂಗಡಿಗಳಿಗೆ ಪರವಾನಗಿ ನೀಡಬಾರದು ಎಂಬ ನಿಯಮವೂ ಇದೆ. ಆದರೂ ಪರವಾನಗಿ ನೀಡಲಾಗಿದೆ.ಶಾಲಾ– ಕಾಲೇಜು, ಆಸ್ಪತ್ರೆ, ದೇವಸ್ಥಾನ, ಸರ್ಕಾರಿ ಕಚೇರಿಗಳು ಇರುವ ಪ್ರದೇಶದಲ್ಲಿ ಮದ್ಯದ ಅಂಗಡಿಗಳಿಗೆ ಅನುಮತಿ ನೀಡಬಾರದು ಎಂಬ ನಿಯಮವೇನೊ ಇದೆ. ಆದರೆ ಅದರ ಪಾಲನೆ ಮಾಡಲು ಸಾಧ್ಯವಾಗಿಲ್ಲ

ಶಾಲೆಯ 100 ಮೀಟರ ಒಳಗೆ ಇರುವ ಮದ್ಯದಂಗಡಿ

ಕಳೆದ 25– 30 ವರ್ಷಗಳಲ್ಲಿ ಮದ್ಯದ ಅಂಗಡಿಗಳ ಹತ್ತಿರ ಶಾಲೆ– ಕಾಲೇಜು, ದೇವಸ್ಥಾನ, ಮಸೀದಿಗಳು ನಿರ್ಮಾಣಗೊಂಡಿವೆ. ಪದೇ ಪದೇ ಮದ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡುವುದು ತೊಂದರೆ 
ಆಗುತ್ತದೆ ಎಂಬ ಕಾರಣಕ್ಕೆ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮ 5 ಕ್ಕೆ ತಿದ್ದುಪಡಿ ತರಲಾಗಿದೆ ಎಂದು ಹೇಳಲಾಗುತ್ತಿದೆ ಈ ಬಗ್ಗೆ ಪ್ರಸ್ತುತ ನಡೆದಿರುವ ಅಧಿವೇಶನದಲ್ಲಿ ಚರ್ಚೆಯೂ ಸಹ ಆಗಿ 2016 ಕ್ಕೂ ಮೊದಲು ಆರಂಭಿ
ಸಿದ್ದ ಮದ್ಯ, ಬೀಡಿ– ಸಿಗರೇಟು ಮತ್ತು ತಂಬಾಕು ಅಂಗಡಿಗಳನ್ನು ಮುಂದುವರಿಸಲು ಅವಕಾಶ ನೀಡಲಾಗಿದೆ. ಆ ಬಳಿಕ ಆರಂಭವಾಗಿರುವ ಅಂಗಡಿಗಳಿಗೆ ಅವಕಾಶ ನೀಡುವುದಿಲ್ಲ’ ಎಂದು ಅಬಕಾರಿ ಆಯುಕ್ತರು ಶಾಸನ ರಚನಾ ಸಮಿತಿಗೆ ಭರವಸೆ ನೀಡಿದ್ದಾರೆ . ಮೊನ್ನೆಯ ಶುಕ್ರವಾರ ಶಾಸನ ರಚನಾ ಸಮಿತಿ ವರದಿ ವಿಧಾನಸಭೆಯಲ್ಲಿ ಮಂಡಿಸಿದೆ
ಇದರ ಸಾಧಕ ಬಾಧಕಗಳನ್ನು ಅರಿತ ಸಮಿತಿಯು ವಿಧಾನ ಸಭೆಗೆ ವರದಿ ನೀಡಿ ತಮ್ಮ ಕರ್ತವ್ಯ ಮೆರೆದಿದೆ ಆದರೆ 2016 ರ ನಂತರ ನೀಡಲಾಗುವ ಹೊಸ ಪರವಾಣಿಗೆಗಳಿಗೆ ಈ ಕಾನೂನು ಅನ್ವಯಿಸಲಾಗುವದು ಎಂದು ಅಬಕಾರಿ ಇಲಾಖೆ ಹೇಳಿದೆ . ಆದರೆ ಶಾಲಾ , ಕಾಲೇಜು ಪ್ರಾರಂಭವಿದ್ದಾಗ ಪಾನ ,ಬೀಡಾ ಗುಟ್ಕಾ  ಮತ್ತು ಮದ್ಯದಂತಹ ಅಪಾಯಕಾರಿ ವಸ್ತುಗಳನ್ನು ಬಹಿರಂಗವಾಗಿ ಪ್ರದರ್ಶಿಸಿ ಮಾರಾಟ ಮಾಡಬಾರದೆಂಬ ಕಾನೂನು ತಂದು ಹತೋಟಿ ಸಾಧಿಸ ಬಹುದಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ

ಮುಸ್ತಾಕ ಖಂಡಾಯತ , ಸ್ಥಳೀಯ (ಪಾಲಕ )

“ಶಾಲಾ ಕಾಲೇಜುಗಳ ಅಕ್ಕ ಪಕ್ಕ ಇಂತಹ ಅಂಗಡಿಗಳು ಇರುವದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬಿರುತ್ತಿವೆ ಆದಷ್ಟು ಬೇಗ ಸಂಬಂಧ ಪಟ್ಟ ಇಲಾಖೆಯವರು ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ” .

ಡಿ.ಟಿ ಪ್ರಭು ಡಿವಾಯ್ಎಸಪಿ ಗೋಕಾಕ

” ಶಹರ ಠಾಣೆಯ ಪಿಎಸ್ಐ ಅವರಿಗೆ ಕಳುಹಿಸಿ  ಶಾಲಾ ಕಾಲೇಜುಗಳ ಅಕ್ಕ ಪಕ್ಕ ವಿರುವ ಪಾನ ಅಂಗಡಿಗಳನ್ನು ರೇಡ್ ಮಾಡಿ ತಂಬಾಕು ಮತ್ತು ಗುಟ್ಕಾ ಮಾರಾಟ ಮಾಡುವ ಅಂಗಡಿಗಳ ಪರವಾಣಿಗೆ ರದ್ದು ಮಾಡಲು ನಗರಸಭೆ ಅವರಿಗೆ ಸೂಚಿಸಿ ಸೂಕ್ತ ಕ್ರಮ ಜರುಗಿಸಲಾಗುವದು”.

Related posts: