RNI NO. KARKAN/2006/27779|Friday, November 22, 2024
You are here: Home » breaking news » ಘಟಪ್ರಭಾ:ಯಶವಂತಪೂರ ರೈಲು ಸಂಖ್ಯೆ 16541 ಹಾಗೂ 16542 ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ಗೊಳಿಸುವಂತೆ ಆಗ್ರಹ

ಘಟಪ್ರಭಾ:ಯಶವಂತಪೂರ ರೈಲು ಸಂಖ್ಯೆ 16541 ಹಾಗೂ 16542 ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ಗೊಳಿಸುವಂತೆ ಆಗ್ರಹ 

ಯಶವಂತಪೂರ ರೈಲು ಸಂಖ್ಯೆ 16541 ಹಾಗೂ 16542 ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ಗೊಳಿಸುವಂತೆ ಆಗ್ರಹ

ಘಟಪ್ರಭಾ ಜು 9 : ಯಶವಂತಪೂರದಿಂದ ಪಂಡರಪೂರಕ್ಕೆ ಹೋಗುವ ರೈಲು ಸಂಖ್ಯೆ 16541 ಹಾಗೂ 16542 ಇದನ್ನು ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಆಗ್ರಹಿಸಿ ಗೋಕಾಕ ಮತ ಕ್ಷೇತ್ರದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಂದ ಸೋಮವಾರ ಮುಂಜಾನೆ ಘಟಪ್ರಭಾ ರೇಲ್ವೆ ಸ್ಟೇಶನ್ ಸುಪ್ರೀಡೆಂಟ್ ಅವರಿಗೆ ಮನವಿ ಸಲ್ಲಿಸಲಾಯಿತು.
ಯಶವಂತಪೂರದಿಂದ ಘಟಪ್ರಭಾ ಮಾರ್ಗವಾಗಿ ಚಲಿಸುವ ರೈಲು ಸಂಖ್ಯೆ 16541 ಹಾಗೂ 16542 ಗಾಡಿಯು ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲ್ಲುತ್ತಿತ್ತು. ಆದರೆ ಇತ್ತೀಚಿಗೆ ರೇಲ್ವೆ ಇಲಾಖೆಯವರು ನಿಲುಗಡೆಯನ್ನು ರದ್ದುಗೊಳಿಸಿರುವದರಿಂದ ಘಟಪ್ರಭಾ ಸುತ್ತಮುತ್ತಲಿನ ಪಂಡರಪೂರಕ್ಕೆ ಹೋಗುವ ಭಕ್ತರಿಗೆ ತೀರಾ ತೊಂದರೆಯಾಗಿದೆ. ಪ್ರತಿ ದಿನ ಹಾಗೂ ಪ್ರತಿ ಏಕಾದಶಿ, ಹಾಗೂ ಜಾತ್ರೆಯ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಘಟಪ್ರಭಾದಿಂದ ಪಂಡರಪೂರಕ್ಕೆ ಪ್ರಯಾಣ ಬೆಳೆಸುತ್ತಾರೆ. ಹೀಗೆ ಇದ್ದಾಗ್ಯೂ ರೈಲು ಇಲಾಖೆಯವರು ರೈಲು ನಿಲುಗಡೆಯನ್ನು ರದ್ದುಗೊಳಿದ್ದು ಆಶ್ಚರ್ಯವಾಗಿದೆ. ಬರುವ ದಿ.13 ರಂದು ರೈಲು ನಿಲುಗಡೆಯಾಗದೇ ಹೋದಲ್ಲಿ ದಿ.16 ರಂದು ರೈಲ್ ರೋಕೋ ಚಳವಳಿ ನಡೆಸಲಾಗುವದೆಂದು ಮನವಿ ತಿಳಿಸಲಾಗಿದೆ.
ಮನವಿಗಳನ್ನು ಪೋಸ್ಟ ಮುಖಾಂತರ ಕೇಂದ್ರ ರೇಲ್ವೆ ಸಚಿವರಾದ ಪಿಯುಷ ಗೋಯಲ್, ಬೆಳಗಾವಿ ಸಂಸದ ಸುರೇಶ ಅಂಗಡಿ, ಎಸ್.ಡಬ್ಲೂ.ಆರ್ ಹುಬ್ಬಳ್ಳಿ ರೇಲ್ವೆ ಡಿವ್ಹಿಜನಲ್ ಮ್ಯಾನೆಜರ ಅವರಿಗೂ ಕಳುಹಿಸಲಾಗಿದೆ ಎಂದು ವಿಭಾಗೀಯ ನೈರುತ್ಯ ರೈಲ್ವೆ ವಲಯ ಸಲಹಾ ಸಮೀತಿ ಮಾಜಿ ಸದಸ್ಯರಾದ ಸುರೇಶ ಪಾಟೀಲ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಜಿ.ಎಸ್.ರಜಪೂತ, ಮಲ್ಲಪ್ಪ ಹುಕ್ಕೇರಿ, ಸುಬಾಸ ಗಾಯಕವಾಡ, ಮಲ್ಲಪ್ಪ ಮಾನಗಾವಿ ಸೇರಿದಂತೆ ಅನೇಕರು ಇದ್ದರು.

Related posts: