RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಸಂಪೂರ್ಣ ಸಾಲ ಮನ್ನಾಗೆ ಒತ್ತಾಯಿಸಿ ರೈತರ ಪ್ರತಿಭಟನೆ

ಗೋಕಾಕ:ಸಂಪೂರ್ಣ ಸಾಲ ಮನ್ನಾಗೆ ಒತ್ತಾಯಿಸಿ ರೈತರ ಪ್ರತಿಭಟನೆ 

ಸಂಪೂರ್ಣ ಸಾಲ ಮನ್ನಾಗೆ ಒತ್ತಾಯಿಸಿ ರೈತರ ಪ್ರತಿಭಟನೆ

ಗೋಕಾಕ ಜು 10 : ಸಂಪೂರ್ಣ ಸಾಲ ಮನ್ನಾಗೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ತಹಶೀಲದಾರ ಅವರಿಗೆ ಮನವಿ ಸಲ್ಲಿಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ರೈತ ಸಂಘ ಹಾಗೂ ಹಸಿರು ಸೇನೆಯ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪ್ರತಿಭಟನಾ ಮೆರವಣಿಗೆ ಮೂಲಕ ಮಿನಿ ವಿಧಾನ ಸೌಧಕ್ಕೆ ತೆರಳಿ ಗ್ರೇಡ್-2 ತಹಶೀಲದಾರ ಎಸ್.ಕೆ.ಕುಲಕರ್ಣಿ ಅವರಿಗೆ ಮನವಿ ಅರ್ಪಿಸಿದರು.
ರಾಜ್ಯ ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿ ಕೇವಲ ಕಟಬಾಕಿ ಹೊಂದಿರುವ ರೈತರ 2 ಲಕ್ಷ ರೂ ವರೆಗೆ ಸಾಲ ಮನ್ನಾ ಮಾಡಿ, ಕಟಬಾಕಿ, ಚಾಲ್ತಿದಾರರಿಗೆ ಇನ್ನೂಳಿದ ಷರತ್ತುಗಳನ್ನು ವಿಧಿಸಿ ತಾರತ್ಯಮ ನೀತಿಯನ್ನು ಅನುಸರಿಸುತ್ತಿದ್ದಾರೆ. ಎಲ್ಲ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿ ಮುಖ್ಯಮಂತ್ರಿಗಳು ಆದೇಶ ಹೊರಡಿಸಬೇಕು. ಮಹಿಳಾ ಸಂಘಗಳ ಸ್ತ್ರೀ ಶಕ್ತಿ ಹಾಗೂ ಸ್ತ್ರೀ ಸಹಾಯ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಶಿರೂರು ಡ್ಯಾಮ್‍ನಿಂದ ನೀರನ್ನು ಬೀಡಬೇಕು. ಕೃಷಿ ಇಲಾಖೆಗೆ ಸಂಬಂಧಪಟ್ಟ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಸರಿಯಾಗಿ ವಿತರಣೆ ಮಾಡಬೇಕು. ಪಡಿತರ ಧಾನ್ಯಗಳ ವಿತರಣೆಯಲ್ಲಿ ಈಗ ಸದ್ಯ ಚಾಲ್ತಿಯಲ್ಲಿರುವ ಪದ್ಧತಿಯನ್ನು ಮುಂದುವರೆಸಬೇಕು. ಗುಣಮಟ್ಟದ ಅಕ್ಕಿ ಹಾಗೂ ಬೆಳೆಗಳನ್ನು ವಿತರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಭೀಮಶಿ ಗದಾಡಿ, ಗಣಪತಿ ಈಳಿಗೇರ, ಮಹಾದೇವ ಗೊಡೇರ, ಮುತ್ತೆಪ್ಪ ಕುರಬರ, ತಾಲೂಕಾಧ್ಯಕ್ಷ ಮುತ್ತೆಪ್ಪ ಬಾಗನ್ನವರ, ದೇವೇಂದ್ರ ಮಕ್ಸಾರ, ವಿಠ್ಠಲ ಜಿರ್ಲಿ, ಸಿದ್ದಪ್ಪ ಮುಗಳಖೋಡ, ಯಲ್ಲಪ್ಪ ಗದಾಡಿ, ಸಿದ್ದಪ್ಪ ಬಿಲಕಾರ, ಮಲ್ಲಿಕಾರ್ಜುನ ಈಳಿಗೇರ, ಜಗದೀಶ ಅಗಸರ, ಶಿವಬಸು ಹುಚ್ಚನವರ, ಎಸ್.ಎಮ್.ಬಿಳ್ಳೂರ, ನಾಗಪ್ಪ ಬಿಲಕುಂದಿ, ಶಿವಾನಂದ ಬಾಗೇವಾಡಿ, ಕುಮಾರ ತಿಗಡಿ, ಮಂಜುನಾಥ ಜಲ್ಲಿ, ಶಿವಾನಂದ ಈಳಿಗೇರ, ಶಿವಬಸು ಹಳ್ಳೂರ ಸೇರಿದಂತೆ ಅನೇಕರು ಇದ್ದರು.

Related posts: