RNI NO. KARKAN/2006/27779|Saturday, October 19, 2024
You are here: Home » breaking news » ಬೆಳಗಾವಿ:ಗೋಕಾಕ ಮತ್ತು ಚಿಕ್ಕೋಡಿ ನೂತನ ಜಿಲ್ಲೆ ಘೋಷಣೆಗೆ ವಿಧಾನ ಸಭೆಯಲ್ಲಿ ಸರಕಾರದ ಗಮನ ಸೆಳೆದ ಸತೀಶ

ಬೆಳಗಾವಿ:ಗೋಕಾಕ ಮತ್ತು ಚಿಕ್ಕೋಡಿ ನೂತನ ಜಿಲ್ಲೆ ಘೋಷಣೆಗೆ ವಿಧಾನ ಸಭೆಯಲ್ಲಿ ಸರಕಾರದ ಗಮನ ಸೆಳೆದ ಸತೀಶ 

ಗೋಕಾಕ ಮತ್ತು ಚಿಕ್ಕೋಡಿ ನೂತನ ಜಿಲ್ಲೆ ಘೋಷಣೆಗೆ ವಿಧಾನ ಸಭೆಯಲ್ಲಿ ಸರಕಾರದ ಗಮನ ಸೆಳೆದ ಸತೀಶ

ಬೆಳಗಾವಿ ಜು 12 : ಬೆಳಗಾವಿ ಅತ್ಯಂತ ದೊಡ್ಡ ಜಿಲ್ಲೆಯಾಗಿದ್ದು , ಆಡಳಿತ ಅನುಕೂಲದ ದೃಷ್ಟಿಯಿಂದ ಅದನ್ನು ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆಗಳನ್ನು ಘೋಷಣೆ ಮಾಡಬೇಕೆಂದು ಕಾಂಗ್ರೆಸ್ ಹಿರಿಯ ಸದಸ್ಯ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ವಿಧಾನಸಭಾಯಲ್ಲಿ ಆಗ್ರಹಿಸಿದ್ದಾರೆ .

ಬುಧವಾರದಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಸತೀಶ ಜೆ.ಎಚ್ ಪಟೇಲ ಮುಖ್ಯಮಂತ್ರಿಯಾಗಿದ್ಧಾಗ ಗೋಕಾಕ ಮತ್ತು ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಳಾಗಿ ಘೋಷಣೆ ಮಾಡಿದ್ದರು ಆದರೆ ಕಾರಣಾಂತರಗಳಿಂದ ಅದು ಕಾರ್ಯರೂಪಕ್ಕೆ ಬರಲಿಲ್ಲ ಈಗ ಆಡಳಿತದ ಹಿತದೃಷ್ಟಿಯಿಂದ ಈ ಸರಕಾರ ಅವಿಭಜಿತ ಬೆಳಗಾವಿಯನ್ನು ವಿಭಜಿಸಿ ಎರಡೂ ತಾಲೂಕಗಳನ್ನು ಹೊಸ ಜಿಲ್ಲೆಗಳನ್ನಾಗಿ ಘೋಷಣೆ ಮಾಡಬೇಕು ಎಂದು ಸತೀಶ ಜಾರಕಿಹೊಳಿ ವಿಧಾನಸಭೆಯಲ್ಲಿ ಸರಕಾರದ ಗಮನ ಸೆಳೆದರು .

ಮುಂದುವರೆದು ಮಾತನಾಡಿದ ಅವರು ತಾಲೂಕು ಕೇಂದ್ರಗಳಿಗೆ ಕೈಗಾರಿಕೆಗಳು ಬರಬೇಕು . ರೈತರು ಯಾವ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯುತ್ತಾರೆಯೋ ಅದಕ್ಕೆ ಸಂಬಂಧಿಸಿದ ಕಾರ್ಖಾನೆಗಳು ಆ ಭಾಗದಲ್ಲಿಯೇ ಸ್ಥಾಪನೆಯಾಗಬೇಕು ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸತೀಶ ಹೇಳಿದರು

Related posts: