ಬೆಳಗಾವಿ:ನೆಲದ ಮೇಲಿಟ್ಟು ತ್ರಿವರ್ಣಧ್ವಜಕ್ಕೆ ಅಗೌರವ
ನೆಲದ ಮೇಲಿಟ್ಟು ತ್ರಿವರ್ಣಧ್ವಜಕ್ಕೆ ಅಗೌರವ
ಬೆಳಗಾವಿ ಜು 15 : ಇಲ್ಲಿನ ಕೋಟೆ ಕೆರೆ ದಂಡೆಯಲ್ಲಿ ಸ್ಥಾಪಿಸಲಾಗಿರುವ ದೇಶದಲ್ಲೇ ಅತಿ ಎತ್ತರದ (110 ಮೀಟರ್) ಧ್ವಜಸ್ತಂಭದಲ್ಲಿ ಹಾರಿಸಲು ಬಳಸಲಾಗುತ್ತಿದ್ದ ತ್ರಿವರ್ಣಧ್ವಜವನ್ನು ತಾಡಪಾಲಿನಲ್ಲಿ ಸುತ್ತಿ, ನೆಲದ ಮೇಲಿಟ್ಟು ಅಗೌರವ ತೋರಿರುವುದು ಭಾನುವಾರ ಕಂಡುಬಂದಿದೆ.
ಮಾರ್ಚ್ 2ನೇ ವಾರ ಈ ಧ್ವಜಸ್ತಂಭ ಉದ್ಘಾಟಿಸಲಾಗಿತ್ತು ಹಾಗೂ 500 ಕೆ.ಜಿ.ಗಳಷ್ಟು ತೂಕದ, 120 ಅಡಿ ಉದ್ದ ಹಾಗೂ 80 ಅಡಿ ಅಗಲದ ರಾಷ್ಟ್ರಧ್ವಜವನ್ನು ಹಾರಿಸಲಾಗಿತ್ತು. ನಗರಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಬಜಾಜ್ ಕಂಪನಿಗೆ ಟೆಂಡರ್ ನೀಡಲಾಗಿತ್ತು. ಒಮ್ಮೆ ಧ್ವಜದ ಒಂದು ತುದಿ ಹರಿದು ಹೋಗಿದ್ದರಿಂದ ಕೆಳಗಿಳಿಸಲಾಗಿತ್ತು. ಹೊಸ ಧ್ವಜ ಹಾರಿಸಲಾಗಿತ್ತು. ಕೆಲವು ತಿಂಗಳ ನಂತರ, ಜೋರು ಗಾಳಿ ಹಾಗೂ ಮಳೆಯಿಂದಾಗಿ ರಾಷ್ಟ್ರಧ್ವಜವನ್ನು ಇಳಿಸಲಾಗಿತ್ತು.