ಗೋಕಾಕ:ಹಿರಿಯರನ್ನು ಗೌರವಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕು: ಸೋಮಶೇಖರ
ಹಿರಿಯರನ್ನು ಗೌರವಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕು: ಸೋಮಶೇಖರ
ಗೋಕಾಕ ಜು 16 : ಹಿರಿಯರನ್ನು ಗೌರವಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕೆಂದು ಇಲ್ಲಿಯ ರೋಟರಿ ಸೇವಾ ಸಂಸ್ಥೆಯ ಸೋಮಶೇಖರ ಮಗದುಮ್ಮ ಹೇಳಿದರು.
ರವಿವಾರದಂದು ನಗರದ ರೋಟರಿ ರಕ್ತ ಭಂಡಾರದಲ್ಲಿ ರೋಟರಿ ಸಂಸ್ಥೆ ಹಾಗೂ ರೋಟರಿ ಸೇವಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಿರಿಯ ಜೀವಿಗಳ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು. ಹಿರಿಯರು ನಮ್ಮ ಸಂಸ್ಕøತಿಯ ಪ್ರತೀಕ, ಅವರು ಆರೋಗ್ಯ ಪೂರ್ಣ ಬದುಕು ಸಾಗಿಸಲು ರೋಟರಿ ಪರಿವಾರ ಹಾಗೂ ರೋಟರಿ ಸದಸ್ಯ ವೈದ್ಯರು ಕಾರ್ಯ ಮಾಡುತ್ತಿದ್ದಾರೆಂದು ತಿಳಿಸಿದರು.
ಶಿಬಿರದಲ್ಲಿ 54 ಜನರ ರಕ್ತದೊತ್ತಡ, ಇಸಿಜಿ, ರಕ್ತ ತಪಾಸಣೆಯನ್ನು ವೈದ್ಯರಾದ ಡಾ|| ಸಿದ್ದಣ್ಣ ಕಮತ, ಡಾ|| ಅರುಣ ವಣ್ಣೂರ, ಡಾ|| ಶ್ರೀಶೈಲ ಹೊಸಮನಿ, ಡಾ|| ಪಾರ್ವತಿ ಹೊಸಮನಿ, ಡಾ|| ಬಾಳೇಶ ಕಪ್ಪಲಗುದ್ದಿ, ಡಾ|| ಉದಯ ಆಜರಿ, ಡಾ|| ಎಮ್.ಬಿ.ಉಪ್ಪಿನ ನಡೆಸಿದರು.
ಈ ಸಂದರ್ಭದಲ್ಲಿ ರೋಟರಿ ಸೇವಾ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಲೋಳಿ, ರೋಟರಿ ಸಂಸ್ಥೆಯ ಅಧ್ಯಕ್ಷ ದಿಲೀಪ ಮೆಳವಂಕಿ, ಕಾರ್ಯದರ್ಶಿ ವಿಶ್ವನಾಥ ಕಡಕೋಳ, ಸದಸ್ಯರಾದ ಜಗದೀಶ ಚುನಮರಿ, ಪ್ರಮೋದ ಗುಲ್ಲ, ಉದಯ ಗಚ್ಚಿ, ಬಾಬು ಶೆಟ್ಟಿ, ಪುಂಡಲೀಕ ವಣ್ಣೂರ, ಬಸವರಾಜ ಗಂಜಿ, ಸತೀಶ ಬೆಳಗಾವಿ ಇದ್ದರು.