RNI NO. KARKAN/2006/27779|Friday, October 18, 2024
You are here: Home » breaking news » ಘಟಪ್ರಭಾ:ಚೀನಿ ಭಾಷೆಯ ನಾಮ ಫಲಕ ಅಳವಡಿಕೆ ಕನ್ನಡ ಸೇನೆ ಆಕ್ರೋಶ

ಘಟಪ್ರಭಾ:ಚೀನಿ ಭಾಷೆಯ ನಾಮ ಫಲಕ ಅಳವಡಿಕೆ ಕನ್ನಡ ಸೇನೆ ಆಕ್ರೋಶ 

ಚೀನಿ ಭಾಷೆಯ ನಾಮ ಫಲಕ ಅಳವಡಿಕೆ ಕನ್ನಡ ಸೇನೆ ಆಕ್ರೋಶ

ಘಟಪ್ರಭಾ ಜು 16 : ಬೆಳಗಾವಿ ಮಹಾನಗರದಲ್ಲಿ ಇತ್ತೀಚಿಗೆ ಹೊಸ ಸಂಸ್ಕಂತಿ ಬೆಳೆಯತೊಡಗಿದ್ದು, ಕನ್ನಡವನ್ನು ನಿರ್ಲಕ್ಷಿಸುವ ಉದ್ದೇಶದಿಂದ ಅಂಗಡಿ ಹೋಟೆಲ್ ಇನ್ನಿತರ ಸಾರ್ವಜನಿಕ ಸ್ಥಳಗಳ ಫಲಕಗಳ ಮೇಲೆ ಹಿಂದಿ ಇಂಗ್ಲಿಷ್ ಅಲ್ಲದೇ ಚೀನಿ ಭಾಷೆಯ ನಾಮ ಫಲಕಗಳನ್ನು ಅಳವಡಿಸಲು ಪ್ರಾರಂಬಿಸಲಾಗಿದೆ ಎಂದು ಕನ್ನಡ ಸೇನೆ ಕರ್ನಾಟಕ ಸಂಘಟನೆ ಗೋಕಾಕ ತಾಲೂಕ ಉಪಾಧ್ಯಕ್ಷ ಡಾ| ರಾಘವೇಂದ್ರ ಪತ್ತಾರ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅವರು ರವಿವಾರ ಸ್ಥಳೀಯ ಸಂಘದ ಕಾರ್ಯಾಲಯದಲ್ಲಿ ಕರೆದ ಕಾರ್ಯಕತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ಬೆಳಗಾವಿ ಮಹಾನಗರದಲ್ಲಿ ಹೋಟೆಲ್ ಅಂಗಡಿಗಳಲ್ಲಿ ಹಿಂದಿ, ಇಂಗ್ಲೀಷ ಮರಾಠಿ ಭಾಷೆ ಬಳಕೆ ಅತಿ ಹೆಚ್ಚಾಗಿದೆ ಬೆಳಗಾವಿ ನಗರದ ಸೇರಿ ಜಿಲ್ಲೆಯಲ್ಲಿ ಮರಾಠಿ ಪ್ರಾಬಲ್ಯ ವಿರುವ ಪಟ್ಟಣಗಳಲ್ಲಿ ಮರಾಠಾ ಸಮುದಾಯ ಮುಖಂಡರಿಗೆ ಸೇರಿದ ಬಹುತೇಕ ಮಳಿಗೆಗಳಲ್ಲಿ ಕನ್ನಡವೇ ಇಲ್ಲ. ಇದೀಗ ನಗರದ ಕ್ಲಬ್ ರಸ್ತೆ ಬಳಿ ಚಿನಿ ಹೆಸರಿನ ಹೋಟೆಲ್ ಆರಂಭವಾಗಿದ್ದು, ಅದರ ನಾಮಫಲಕವನ್ನು ದೊಡ್ಡದಾಗಿ ಚೀನಿ ಮತ್ತು ಇಂಗ್ಲೀಷ ಭಾಷೆಯಲ್ಲಿ ಬರೆಯಲಾಗಿದೆ. ಮೂಲೆಯಲ್ಲಿ ಚಿಕ್ಕದಾಗಿ ಕನ್ನಡದಲ್ಲಿ ನಮೂದಿಸಿ ಕನ್ನಡವನ್ನು ಅವಮಾನಿಸಲಾಗಿದೆ.
ಸುಮಾರು ಆರು ತಿಂಗಳಗಳಿಂದ ಇದೇ ಹೆಸರಿನಲ್ಲಿ ಹೋಟೆಲ್ ನಡೆಯುತ್ತಿದ್ದು, ನಗರದ ಪ್ರತಿಷ್ಠಿತ ಹೋಟೆಲ್ ಸಮೂಹ ಸಂಸ್ಥೆಯೊಂದು ಈ ಹೋಟೆಲ್ ನಡೆಸುತ್ತಿದೆ. ಭಾಷೆ ಸೂಕ್ಷ್ಮ ಪ್ರದೇಶವಾಗಿರುವ ಬೆಳಗಾವಿಯಲ್ಲಿ ಹೋಟೆಲ್ ದೊಡ್ಡ ವ್ಯಾಪಾರ ಮಳಿಗೆಗಳಲ್ಲಿ ಶೇ. 10 ರಷ್ಠು ಕನ್ನಡ ಅಕ್ಷರಗಳು ಕಾಣುತ್ತಿಲ್ಲ ಹೀಗಿದ್ದರೂ ಜಿಲ್ಲಾಡಳಿತವಾಗಲಿ ಕನ್ನಡ ಅಭೀವೃದ್ಧಿ ಪ್ರಾಧಿಕರವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಇದನ್ನು ಶೀಘ್ರವಾಗಿ ನಾಮಫಲಕವನ್ನು ತೆರವು ಗೋಳಸಬೇಕು ಇಲ್ಲವಾದಲ್ಲಿ ಕನ್ನಡ ಸೇನೆ ಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಡಾ| ರಾಘವೇಂದ್ರ ಪತ್ತಾರ ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಅಪ್ಪಾಸಾಬ ಮುಲ್ಲಾ, ಸ್ಥಳೀಯ ಘಟಕದ ಉಪಾಧ್ಯಕ್ಷ ಮಹೇಶ ಪತ್ತಾರ, ಬಾಬುರಾವ ಪತ್ತಾರ, ಸಚೀನ ಪತ್ತಾರ, ಸುಭಾಸ ಪತ್ತಾರ ಸೇರಿದಂತೆ ಕಾರ್ಯಕರ್ತರು ಇದ್ದರು.

Related posts: