RNI NO. KARKAN/2006/27779|Wednesday, November 6, 2024
You are here: Home » breaking news » ಘಟಪ್ರಭಾ:ಪೊಲೀಸರ ವರ್ತನೆಗೆ ಪ್ರತಿಭಟನಾಕಾರ ಖಂಡನೆ

ಘಟಪ್ರಭಾ:ಪೊಲೀಸರ ವರ್ತನೆಗೆ ಪ್ರತಿಭಟನಾಕಾರ ಖಂಡನೆ 

ಪೊಲೀಸರ ವರ್ತನೆಗೆ ಪ್ರತಿಭಟನಾಕಾರ ಖಂಡನೆ

ಘಟಪ್ರಭಾ ಜು 16 : ಯಶವಂತಪೂರ-ಪಂಡರಪೂರ ರೈಲನ್ನು ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಮಾಡವಂತೆ ಆಗ್ರಹಿಸಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ರೈಲು ರೋಖೋ ಚಳುವಳಿಯನ್ನು ರೈಲ್ವೇ ಹಾಗೂ ರಾಜ್ಯ ಪೋಲಿಸ್ ಅಧಿಕಾರಿಗಳು ವಿಫಲಗೊಳಿಸಿದರು.
ಯಶವಂತಪೂರ-ಪಂಡರಪೂರ ರೈಲ್ ನಂ.16541 ಹಾಗೂ 16542 ಯನ್ನು ಈ ಮೂದಲು ತಾತ್ರ್ಪೂತಿಕವಾಗಿ ಪ್ರಾರಂಬಿಸಿ ಘಟಪ್ರಭಾ ಹಾಗೂ ಕುಡಚಿ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗುತ್ತಿತ್ತು. ಯಶವಂತಪೂರ-ಪಂಡರಪೂರ ರೈಲನ್ನು ಖಾಯಂಗೂಳಿಸಿದ ನಂತರ ಘಟಪ್ರಭಾ ಹಾಗೂ ಕುಡಚಿ ನಿಲುಗಡೆಯನ್ನು ರದ್ದು ಮಾಡಲಾಯಿತು. ಇದರಿಂದ ಈ ಭಾಗದಿಂದ ಪಂಡರಪೂರಕ್ಕೆ ಹೋಗುವ ಭಕ್ತರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು, ನಿಲುಗಡೆ ಮಾಡುವಂತೆ ಆಗ್ರಹಿಸಿ ಇಂದು ಘಟಪ್ರಭಾ ರೈಲು ನಿಲ್ದಾಣದಲ್ಲಿ ಕೊಲ್ಹಾಪೂರ-ಹೈದ್ರಾಬಾದ ರೈಲ್ ತಡೆದು ಪ್ರತಿಭಟಿಸಲು ಬಿಜೆಪಿ ನೂರಾರು ಕಾರ್ಯಕರ್ತರು ಹಾಗೂ ಸಂತರು ಮುಂದಾಗಿದ್ದರು.
ಮುಂಜಾನೆಯಿಂದಲೇ ನೂರಾರು ಸಂಖ್ಯೆಯಲ್ಲಿ ರೈಲು ನಿಲ್ದಾಣದ ಸುತ್ತ ಜಮಾಯಿಸಿದ ಪೋಲಿಸ್‍ರು ಯಾರೊಬ್ಬ ಪ್ರತಿಭಟನಾಕಾರರನ್ನು ರೈಲು ನಿಲ್ದಾಣದ ಒಳಗೆ ಪ್ರವೇಶ ಮಾಡಲು ಬಿಡಲಿಲ್ಲ. ಪೊಲೀಸ ಅಧಿಕಾರಿಗಳ ಈ ಕ್ರಮದಿಂದ ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು ಹಾಗೂ ಸಂತರು ಹಾಗೂ ಮುಖಂಡರು. ಸ್ವಾಮೀಜಿಯವರು ರೈಲು ನಿಲ್ದಾಣದ ಹೊರಗೆ ಮಳೆಯಲ್ಲಿ ಸುಮಾರು 2 ಗಂಟೆಗಳ ಕಾಲ ನಿಲ್ಲಬೇಕಾಯಿತು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಹಿರಿಯ ಕಾರ್ಯಕರ್ತ ಸುರೇಶ ಪಾಟೀಲ ಪೊಲೀಸರು ಪ್ರಜಾಪ್ರಭುತ್ವದ ಕಗ್ಗೋಲೆ ಮಾಡುತ್ತಿದ್ದಾರೆಂದು ಆರೋಪಿಸಿ, ಪೊಲೀಸರ ವರ್ತನೆಯನ್ನು ಬಹಿರಂಗವಾಗಿ ಖಂಡಿಸಿದರು. ಯಶವಂತಪೂರ-ಪಂಡರಪೂರ ರೈಲನ್ನು ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಮಾಡುವ ಲಿಖಿತ ಭರವಸೆ ನೀಡುವವರೆಗೆ ಪ್ರತಿಭಟನೆಯನ್ನು ಹಿಂದಕ್ಕೆ ತಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದರು.
ನಂತರ ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ ರೇಲ್ವೆ ಅಧಿಕಾರಿಗಳಾದ ಡಿ.ಓ.ಎಮ್. ಮಂಜುನಾಥ ಮನವಿ ಸ್ವೀಕರಿಸಿ ಮಾತನಾಡಿ ನಾವು ಈಗಾಗಲೆ ನಮ್ಮ ಮೇಲಾದಿಕಾರಿಗಳ ಜೋತೆ ಮಾತನಾಡಿ ವಿಷಯ ಲಿಖಿತ ಮೂಲಕ ತಿಳಿಸಿದ್ದೆವೆ. ಆದಷ್ಟು ಬೇಗನೆ ರೈಲು ನಿಲುಗಡೆಯಾಗುವಂತೆ ಪ್ರಯತ್ನ ಮಾಡುತ್ತೆವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.
ಈ ಸಂದರ್ಭದಲ್ಲಿ ಶ್ರೀ ಭಿಮಾನಂದ ಸ್ವಾಮೀಜಿ, ನ್ಯಾಯವಾದಿ ಲಕ್ಷ್ಮಣ ತಪಶಿ, ಜಿ.ಎಸ್.ರಜಪೂತ, ಡಿ.ಎಮ್.ದಳವಾಯಿ, ರಾಜು ಕತ್ತಿ, ಸಂಜೀವ ನಾಯಿಕ, ಹರೀಶ ಕಾಳೆ, ಕಿರಣ ವಾಲಿ, ಚಿರಾಕಲಿಶಾ ಮಕಾನದಾರ, ಕುಮಾರ ಹುಕ್ಕೇರಿ, ಪ್ರಕಾಶ ಗಾಯಕವಾಡ, ಮಲ್ಲಿಕಾರ್ಜುನ ಮಾನಗಾವಿ, ಪ್ರಕಾಶ ಪಟ್ಟೇದ, ಡಾ| ವಿಜಯಕುಮಾರ ಪಾಟೀಲ, ಬಾಳಪ್ಪ ಮುಂಜೋಜಿ, ಸುರೇಶ ಹಳಿಜೋಡಿ, ಚನ್ನಬಸ್ಸು ಅಂಗಡಿ, ನೂರುದ್ದಿನ ಪೀರಜಾದೆ, ಮುದಕಪ್ಪ ಧುಮಾಳ, ಸಂತರುಗಳಾದ ಮಲ್ಲಪ್ಪ ಹುಕ್ಕೇರಿ, ಮಲ್ಲಪ್ಪ ಬನ್ನನವರ, ಶಿವಪ್ಪ ಸಂಕೇಶ್ವರ, ಬಾಳುಮಹಾರಾಜ ಬೋಸಲೆ, ಮಾನೋಜಿ ವಾಕೋಡೆ, ಕಲ್ಲಪ್ಪ ಕೊಂಕಣಿ, ಬಸವರಾಜ ಖಾನಾಪೂರೆ, ಕೆಂಚಪ್ಪ ನಾಯಿಕ, ಕಲ್ಲಪ್ಪಾ ಕಾಡದವರ, ಗೋಪಾಲ ಖೆಮಲಾಪುರೆ ಸೇರಿದಂತೆ ನೂರಾರು ಜನರು ಇದ್ದರು.

Related posts: