ಗೋಕಾಕ:ಕ್ರೀಡೆಗಳು ಮಕ್ಕಳಲ್ಲಿ ಶಾರಿರೀಕ ಸದೃಢತೆ ಹೆಚ್ಚಿಸುತ್ತವೆ : ಬಿ.ಟಿ.ಪುಂಜಿ
ಕ್ರೀಡೆಗಳು ಮಕ್ಕಳಲ್ಲಿ ಶಾರಿರೀಕ ಸದೃಢತೆ ಹೆಚ್ಚಿಸುತ್ತವೆ : ಬಿ.ಟಿ.ಪುಂಜಿ
ಬೆಟಗೇರಿ ಜು 17 : ಶಾಲೆಯ ಮಕ್ಕಳಲ್ಲಿ ಕ್ರೀಡೆಗಳು ಮನೋಸ್ಥೈರ್ಯ, ಶಾರಿರೀಕ ಸದೃಢತೆ ಹೆಚ್ಚಿಸುತ್ತವೆ. ಶಾಲೆಗಳಲ್ಲಿ ಆಗಾಗ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರಿಂದ ಮಕ್ಕಳಿಗೆ ಚೈತನ್ಯ ತುಂಬಿದಂತಾಗುತ್ತದೆ ಎಂದು ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ವಲಯ ಸಮೂಹ ಸಂಪನ್ಮೂಲ ವ್ಯಕ್ತಿ ಬಿ.ಟಿ.ಪುಂಜಿ ಹೇಳಿದರು.
ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಮಂಗಳವಾರ ಜುಲೈ.17 ರಂದು ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗಳ ಸಹಯೋಗದಲ್ಲಿ ಬೆಟಗೇರಿ ಕೇಂದ್ರ ಮಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ ಕ್ರೀಡಾ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಪ್ರತಿಯೊಬ್ಬ ಮಗುವಿನ ಸೂಪ್ತ ಪ್ರತಿಭೆ ಗುರುತಿಸಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ಶಾಲಾ ಶಿಕ್ಷಕರು ಪ್ರೇರಿಪಿಸಿ, ಪ್ರೋತ್ಸಾಹ ನೀಡಬೇಕೆಂದರು.
ಸ್ಥಳೀಯ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ರಮೇಶ ಅಳಗುಂಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕ್ರೀಡಾಕೂಟಗಳಿಂದ ಶಾಲಾ ಮಕ್ಕಳಿಗೆ ದೊರಕುವ ಪ್ರಯೋಜನಗಳ ಕುರಿತು ಮಾತನಾಡಿದರು. ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ ಅತಿಥಿಗಳಾಗಿ ಪಂದ್ಯಾವಳಿ ಉದ್ಘಾಟಿಸಿದರು.
ಮಲ್ಲಪ್ಪ ಪಣದಿ, ಮಂಜುನಾಥ ಹತ್ತಿ, ಎಮ್.ಬಿ.ಕಳ್ಳಿಗುದ್ಧಿ, ಬಿ.ಎ.ಕೋಟಿ, ಆರ್.ಡಿ.ಕೌಜಲಗಿ, ಎಸ್.ಎಮ್.ಬಿರಾದಾರ, ಎಮ್.ಬಿ.ಸೋಮನಟ್ಟಿ, ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಗಳ ಮುಖ್ಯ ಶಿಕ್ಷಕ ವೈ.ಸಿ.ಶೀಗಿಹಳ್ಳಿ, ಉಭಯ ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷರಾದ ರಾಮಣ್ಣ ನೀಲಣ್ಣವರ, ಉದ್ದಪ್ಪ ಚಂದರಗಿ, ಎಸ್‍ಡಿಎಮ್‍ಸಿ ಸದಸ್ಯರು, ಬೆಟಗೇರಿ ಕೇಂದ್ರ ಮಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗಳ ಶಿಕ್ಷಕರು, ಶಿಕ್ಷಕಿಯರು, ಶಿಕ್ಷಣಪ್ರೇಮಿಗಳು, ವಿದ್ಯಾರ್ಥಿಗಳು, ಇತರರು ಇದ್ದರು.
ಎ.ಎಮ್.ನರ್ಗಾಶಿ ಸ್ವಾಗತಿಸಿದರು. ಆರ್.ಬಿ.ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು. ಎಚ್.ಜಿ.ಕಟ್ಟಿಮನಿ ಕೊನೆಗೆ ವಂದಿಸಿದರು.