RNI NO. KARKAN/2006/27779|Thursday, December 12, 2024
You are here: Home » breaking news » ಬೈಲಹೊಂಗಲ:ವಿಶ್ವಶಾಂತಿಗಾಗಿ ಭೃಹತ್ ಸಾಮೂಹಿಕ ಇಷ್ಠಲಿಂಗ ಪೂಜೆ

ಬೈಲಹೊಂಗಲ:ವಿಶ್ವಶಾಂತಿಗಾಗಿ ಭೃಹತ್ ಸಾಮೂಹಿಕ ಇಷ್ಠಲಿಂಗ ಪೂಜೆ 

ವಿಶ್ವಶಾಂತಿಗಾಗಿ ಭೃಹತ್ ಸಾಮೂಹಿಕ ಇಷ್ಠಲಿಂಗ ಪೂಜೆ

ಬೈಲಹೊಂಗಲ : ಜು 17: ಕಲ್ಯಾಣ ಶರಣರ ಕ್ರಾಂತಿಯ ನಾಡಾದ ಬೆಳಗಾವಿ ಜಿಲ್ಲೆ ಸಕಲ ಜೀವಿಗಳ ಲೇಸಿಗಾಗಿ ಹೋರಾಟ, ಕ್ರಾಂತಿ, ಚಳುವಳಿಗಳು, ಆದ್ಯಾತ್ಮ, ಕಲೆ, ಸಾಹಿತ್ಯ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರಗಳ ಕಣ್ಣುತೆರೆಸಿದ್ದು ಸಮಾಜದ ಒಳತಿಗಾಗಿ ಯಾವುದೇ ಸತ್ಕಾರ್ಯಗಳ ಆರಂಭಿಸಲು ಯೋಗ್ಯವಾಗಿದೆ ಆದರಿಂದ ವಿಶ್ವಶಾಂತಿಗಾಗಿ ಸಾವಿರಾರು ಶರಣರಿಂದ ಇಷ್ಠಲಿಂಗ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಮಹಾರಾಷ್ಟ್ರದ ಅಲ್ಲಮಗಿರಿ ಪೀಠದ ಪೀಠಾಧಿಪತಿ ಬಸವಕುಮಾರ ಮಹಾಸ್ವಾಮೀಜಿ ಹೇಳಿದರು.
ನಗರದ ಕಿತ್ತೂರ ರಾಣಿ ಚನ್ನಮ್ಮನ 2ನೇ ಅಡ್ಡರಸ್ತೆಯಲ್ಲಿರುವ ಗುರುಬಸವ ಮಂಟಪz Àಲ್ಲಿÁಯೋಜಿಸಿದ್ದ ವಿವಿಧ ಬಸವಪರ ಸಂಘಟನೆಗಳ ಮುಂಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಕಲ ಜೀವಿಗಳ ಉದ್ಧಾರಕ್ಕಾಗಿ ಇಂದು ಬಸವತತ್ವ ಅವಶ್ಯಕವಾಗಿದ್ದು ಸಮಾಜದಲ್ಲಿ ಸಮಾನತೆ ಮೂಡಿಸುವ ಉದ್ದೇಶದಿಂದ ಗುರು ಬಸವಣ್ಣನವರು ಪ್ರತಿಯೊಬ್ಬರಿಗೂ ಇಷ್ಠಲಿಂಗ ದೀಕ್ಷೆ ನೀಡಿದ್ದು ದೇವರನ್ನು ಅಗೈಯಲ್ಲಿ ತಂದುಕೊಟ್ಟಿದ್ದಾರೆ ಎಂದರು. ಇಷ್ಠಲಿಂಗ ಯೋಗದಿಂದ ಮನುಷ್ಯನ ಚೆತನ್ಯ ಹೆಚ್ಚಾಗಲಿದ್ದು ಮನದ ಸಂಕಲ್ಪಗಳು ಇಡೇರುತ್ತವೆ ಎಂದರು. ಕೇಂದ್ರ ಬಸವ ಸಮಿತಿ ನಿರ್ದೇಶಕ ಮೋಹನ ಬಸವನಗೌಡ ಪಾಟೀಲ, ರಾಷ್ಟ್ರೀಯ ಬಸವದಳದ ಮುಖಂಡ ಈರಣ್ಣ ಸಣ್ಣಮನಿ, ರಾಜಶೇಖರ ಏಣಗಿಮಠ, ಬಸವಂ ಪೌಂಡೇಶನ್ ಅದ್ಯಕ್ಷ ಮಹೇಶ ಕೋಟಗಿ, ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಶ್ರೀಶೈಲ ಶರಣಪ್ಪನವರ, ಕನ್ನಡ ಜಾನಪದ ಪರಿಷತ್ ಅದ್ಯಕ್ಷ ಚಂದ್ರಶೇಖರ ಕೊಪ್ಪದ, ಬಸವ ಕೇಂದ್ರ ಅದ್ಯಕ್ಷ ಬಸವರಾಜ ಹುಬ್ಬಳ್ಳಿ, ರಂಗಕರ್ಮಿ ನಿಂಗಪ್ಪ ಬೂದಿಹಾಳ, ರಾಷ್ಟ್ರೀಯ ಬಸವ ಸೇನಾ ಮುಖಂಡ ಶಿವಾನಂದ ಪಾಟೀಲ, ವಿರೇಶ ಹಲಕಿ ಮತ್ತಿತ್ತರರು ಪತ್ರಿಕಾಗೂಷ್ಠಿಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿವರಣೆ :
ಕಾರ್ಯಕ್ರಮವನ್ನು ಬೈಲಹೊಂಗಲ ನಗರದ ಬೈಪಾಸ್ ರಸ್ತೆಯಲ್ಲಿರುವ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಜುಲೈ ದಿ. ಜುಲೈ 22 ರವಿವಾರ ರಂದು ಹಮ್ಮಿಕೊಳ್ಳಲಾಗಿದೆ.
ಮುಂಜಾನೆ 9ಗಂಟೆಗೆ ಭೃಹತ್ ಸಾಮೂಹಿಕ ಇಷ್ಠಲಿಂಗ ಪೂಜೆ ನಂತರ ಉಪಹಾರ, ಮದ್ಯಾಹ್ನ 12ಗಂಟೆಗೆ ಧಾರ್ಮಿಕ ಚಿಂತನೆ ಹಾಗೂ ಮಹಾಪ್ರಸಾದ.
ಮಹಾರಾಷ್ಟ್ರ, ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಶರಣ ಬಂದುಗಳು ಭಾಗವಹಿಸುವರು. ದೂರದಿಂದ ಆಗಮಿಸುವ ಬಸವಭಕ್ತರಿಗೆ ವಸತಿ ಸೌಕರ್ಯ ಕಲ್ಪಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಮಹೇಶ ಕೋಟಗಿ 9535653166, ಚಂದ್ರಶೇಖರ ಕೊಪ್ಪದ 9964357699, ಬಸವರಾಜ ಹುಬ್ಬಳ್ಳಿ 9964386040, ವಿರೇಶ ಹಲಕಿ
9008441696

Related posts: