ಗೋಕಾಕ:ವಿದ್ಯಾರ್ಥಿಗಳು ಸಮಾಜ ಹೆಮ್ಮೆ ಪಡುವ ಕಾರ್ಯಗಳನ್ನು ಮಾಡಲಿ:ವಿ.ಬಿ.ಮುಧೋಳ
ವಿದ್ಯಾರ್ಥಿಗಳು ಸಮಾಜ ಹೆಮ್ಮೆ ಪಡುವ ಕಾರ್ಯಗಳನ್ನು ಮಾಡಲಿ:ವಿ.ಬಿ.ಮುಧೋಳ
ಗೋಕಾಕ ಜು 17 : ನಗರದ ನ್ಯೂ ಇಂಗ್ಲೀಷ ಶಾಲೆಯ 1986-87 ನೇ ಸಾಲಿನಲ್ಲಿ 10ನೇ ತರಗತಿಯಲ್ಲಿದ್ದ ವಿದ್ಯಾರ್ಥಿಗಳಿಂದ ಗುರು ವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವು ಇತ್ತಿಚೆಗೆ ನ್ಯೂ ಇಂಗ್ಲೀಷ ಶಾಲೆಯ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕರಾದ ವಿ.ಬಿ.ಮುಧೋಳ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆ ನೀಡಿದ ಸಂಸ್ಥೆ ಹಾಗೂ ಶಿಕ್ಷಕರನ್ನು ಮರೆಯದೆ, ತಮ್ಮ ಜೀವನದಲ್ಲಿ ಪ್ರಗತಿಯನ್ನು ಸಾಧಿಸಿರುವ ತಮ್ಮ ಹಳೆಯ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ನಿವೃತ್ತ ಶಿಕ್ಷಕ ಬಿ.ಎ.ಕಮತ ಮಾತನಾಡಿ, ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರೆದು ಎಲ್ಲ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಹೊಂದಿರುವುದು ಸಂತಸಕರವಾದ ಸಂಗತಿಯಾಗಿದ್ದು, ಸಾಮಾಜಿಕ ಕ್ಷೇತ್ರದಲ್ಲಿಯೂ ಕೂಡಾ ಸಮಾಜ ಹೆಮ್ಮೆ ಪಡುವ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು.
1986-87 ನೇ ಸಾಲಿನಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳಾದ ಬಲವಂತ ಕುಲಕರ್ಣಿ, ಮಹೇಶ ಕಂಬಾರ, ಮಹಾಂತೇಶ ಶೀಗಿಹೊಳಿಮಠ ತಮ್ಮ ವಿದ್ಯಾರ್ಥಿ ಜೀವನದ ಹಳೆಯ ನೆನಪುಗಳನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಎಮ್.ಬಿ.ಐಹೊಳೆ, ಬಿ.ಬಿ.ರಾಹುತ, ಬಿ.ಬಿ.ಪಟಗುಂದಿ, ಎಸ್.ಎಸ್.ಲಗಮಪ್ಪಗೋಳ, ಆರ್.ಬಿ.ಮಾವಿನಗಿಡದ, ಎ.ಬಿ.ಹಿರೇಮಠ, ಪುಷ್ಪಾ ಮುರಗೋಡ, ಶ್ರೀಮತಿ ಜೋಶಿ(ಕುಲಕರ್ಣಿ), ಸಿದ್ರಾಮ, ಸಂಜು ಉಪಳೆ, ರುದ್ರಮ್ಮ ಮಠಪತಿ ಸೇರಿದಂತೆ ಅನೇಕರು ಇದ್ದರು.
ಮಲ್ಲಗೌಡ ದೊಡ್ಡಬಸನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ಮೋಹನ ಕಮತ ಸ್ವಾಗತಿಸಿದರು, ಶಿಕ್ಷಕ ಲಕ್ಷ್ಮಣ ಸೋಂಟ್ರಾಯಗೋಳ ವಂದಿಸಿದರು.
ನಂತರ ರಾಮಚಂದ್ರ ಕಾಕಡೆ ಹಾಗೂ ಶೈಲಜಾ ಕೊಕ್ಕರಿ ಅವರು ನೇತ್ರತ್ವದಲ್ಲಿ ವಿವಿಧ ಸಾಂಸ್ಕøತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಜರುಗಿದವು.