ಗೋಕಾಕ:ಅಜ್ಮೇರ ಪ್ರವಾಸ ಮೋಜು ಮಸ್ತಿಗೆ ಅಲ್ಲ , ಹರಕೆ ತೀರಿಸಲು : ಸಚಿವ ರಮೇಶ ಸ್ವಷ್ಟನೆ
ಅಜ್ಮೇರ ಪ್ರವಾಸ ಮೋಜು ಮಸ್ತಿಗೆ ಅಲ್ಲ , ಹರಕೆ ತೀರಿಸಲು : ಸಚಿವ ರಮೇಶ ಸ್ವಷ್ಟನೆ
ಗೋಕಾಕ ಜು 18 : ನಿನ್ನೆಯಿಂದ ಎರೆಡು ದಿನಗಳಕಾಲ ಕೈಗೊಂಡಿರುವ ಜೈಪುರ ಪ್ರವಾಸ ಮೋಜಿ ಮಸ್ತಿ ಮಾಡಲು ಅಲ್ಲ , ಪೂರ್ವ ನಿಯೋಜಿತ ಕಾರ್ಯಕ್ರಮ ವಾಗಿದೆ . ನನ್ನೊಂದಿಗೆ ಶಾಸಕ ಕುಮಟೋಳಿ ಬಿಟ್ಟು ಯಾವ ಶಾಸಕ , ಸಂಸದರು ಬಾಗವಹಿಸಿಲ್ಲ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಸ್ವಷ್ಟನೆ ನೀಡಿದ್ದಾರೆ .
ಈ ಕುರಿತು ನಮ್ಮ ಬೆಳಗಾವಿಯೊಂದಿಗೆ ಮಾತನಾಡಿರುವ ಸಚಿವರು ನಾನು ಗೆಲುವು ಸಾಧಿಸುವ ಮೊದಲು ನನ್ನ ಆಪ್ತರೊಬ್ಬರು ಅಜ್ಮೇರ ದರ್ಗಾಕ್ಕೆ ಬರುವದಾಗಿ ಹರಕೆ ಹೊತ್ತಿದ್ದರು , ನಾನು ಸಚಿವನಾದ ಮೇಲೆಯೇ ಅಜ್ಮೇರಕ್ಕೆ ಹೋಗಬೇಕಾಗಿತ್ತು ಆದರೆ ಸಮಯದ ಅಭಾವದಿಂದ ಇಲ್ಲಿಯವರೆಗೆ ಹೋಗಲು ಆಗಿಲ್ಲ ಇಂದು ಸಮಯ ಸಿಕ್ಕಿದರಿಂದ ಅಜ್ಮೇರ ಪ್ರವಾಸ ಕೈಗೊಂಡಿದ್ದೆನೆ ನನ್ನೊಂದಿಗೆ ಅಥಣಿ ಶಾಸಕ ಮಹೇಶ , ವಿ.ಪ.ಸದಸ್ಯ ವೀರಕುಮಾರ ಬಿಟ್ಟರೇ ಬೇರೆ ಯಾರು ಬರುತ್ತಿಲ್ಲ , ಇದು ರಾಜಕೀಯ ಪ್ರವಾಸವಾಗದೆ ನನ್ನ ವಯಕ್ತಿಕ ಪ್ರವಾಸವಾಗಿದೆ ಇದಕ್ಕೆ ಬೇರ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ .
ಮಂಗಳವಾರ ಸಾಯಂಕಾಲ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ತಮ್ಮ ಕಿರಿಯ ಮಗ ಅರಮನಾಥ ಜಾರಕಿಹೊಳಿ , ಶಾಸಕ ಮಹೇಶ ಕುಮಟ್ಟೋಳಿ , ವಿವೇಕರಾವ ಪಾಟೀಲ , ಹಜರತ್ ಅಲ್ಲಿ ಗೋರವನ್ನಕೊಳ್ಳ , ಉತ್ತಮ ಪಾಟೀಲ , ಅಶೋಕ ಅಸುಂಡೆ , ಕಿರಣ ಪಾಟೀಲ ಮತ್ತು ಮೈಹರೋಜ ಖಾನ ಎಂಬ ಆಪ್ತರೊಂದಿಗೆ ಅಜ್ಮೇರ ಪ್ರವಾಸ ಕೈಗೊಂಡಿದ್ದಾರೆ
ಇಂದು ದಿನ ಪೂರ್ತಿ ಅಜ್ಮೇರ ದರ್ಗಾದಲ್ಲಿರಲಿರುವ ಸಚಿವರು ಮುಂಜಾನೆ 11 ಕ್ಕೆ ಸುಪ್ರಸಿದ್ಧ “ಖ್ವಾಜಾ ಗರೀಬ ನವಾಜ ” ಸೂಫೀ ಸಂತರ ಮಜಾರ ಶರೀಫಗೆ ಬೆಟ್ಟಿನೀಡಿ ಪ್ರಾರ್ಥನೆ ಸಲಿಸಲ್ಲಿದ್ದಾರೆ ಎಂದು ತಿಳಿದು ಬಂದಿದೆ